ಲಖನೌ: ಇಬ್ಬರು ಅಪ್ರಾಪ್ತ ಬಾಲಕರಿಗೆ ಮೂತ್ರ ಕುಡಿಸಿ ಗುದದ್ವಾರದಲ್ಲಿ ಹಸಿ ಮೆಣಸಿನಕಾಯಿ ತುರುಕಿ, ಪತ್ತೆ ಮಾಡಲು ಸಾಧ್ಯವಾಗದಂತಹ ಚುಚ್ಚು ಮದ್ದನ್ನು ನೀಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ವರದಿಯಾಗಿದೆ. ಬಾಲಕರನ್ನು 10 ಮತ್ತು 15 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದೆ.
ಬಾಲಕರಿಗೆ ನೀಡಲಾದ ಹಿಂಸೆಯ ವಿಡಿಯೋ ವೈರಲ್ ಆಗಿದೆ. ಬಾಟಲಿಯಲ್ಲಿ ತುಂಬಿದ ಮೂತ್ರದೊಂದಿಗೆ ಹುಡುಗರು ಹಸಿರು ಮೆಣಸಿನಕಾಯಿಯನ್ನು ತಿನ್ನುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಜೊತೆಗೆ ಪುರುಷರ ಗುಂಪು ಅವರನ್ನು ನಿಂದಿಸುವುದು ಮತ್ತು ಅದನ್ನು ಅನುಸರಿಸದಿದ್ದರೆ ಅವರನ್ನು ಥಳಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಕೇಳಿಬರುತ್ತಿದೆ. ಹಣ ದೋಚಿದ್ದಾರೆ ಎಂದು ಆರೋಪಿಸಿ ಕೆಲ ಪುರುಷರ ಗುಂಪು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದಾರೆ ಎನ್ನಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋದಲ್ಲಿ ಇಬ್ಬರು ಬಾಲಕರ ಪೈಕಿ ಓರ್ವನನ್ನು ನೆಲದ ಮೇಲೆ ಬೋರಲಾಗಿ ಮಲಗಿಸುವ ದುಷ್ಕರ್ಮಿಗಳು ಆತನ ಚಡ್ಡಿ ಬಿಚ್ಚುತ್ತಾರೆ. ಮೆಣಸಿನ ಕಾಯಿಯನ್ನು ಚಟ್ನಿಯ ರೀತಿ ಅರೆದು ಆ ಮಿಶ್ರಣವನ್ನು ಬಾಲಕನ ಗುದದ್ವಾರಕ್ಕೆ ಮೆತ್ತುತ್ತಾರೆ. ಈ ವೇಳೆ ಬಾಲಕ ನೋವಿನಿಂದ ಕಿರುಚುತ್ತಾನೆ. ಇದಾದ ಬಳಿಕ ಹಳದಿ ಬಣ್ಣದ ದ್ರವ ಪದಾರ್ಥವನ್ನು ಇಂಜೆಕ್ಷನ್‌ಗೆ ಹಾಕಿ ಬಾಲಕನ ದೇಹಕ್ಕೆ ಚುಚ್ಚುತ್ತಾರೆ. ಈ ಹಳದಿ ಬಣ್ಣದ ದ್ರವ ಪದಾರ್ಥದಲ್ಲಿ ಯಾವ ರಾಸಾಯನಿಕ ಮಿಶ್ರಣ ಇತ್ತು ಅನ್ನೋದು ತಿಳಿದು ಬಂದಿಲ್ಲ.
ಆಗಸ್ಟ್ 4 ರಂದು ಚಿತ್ರೀಕರಿಸಲಾದ ಈ ವೀಡಿಯೊ ಜಿಲ್ಲೆಯ ಪತ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಕಟಿ ಚೌರಾಹಾ ಬಳಿಯ ಅರ್ಶನ್ ಚಿಕನ್ ಶಾಪ್‌ನಿಂದ ಬಂದಿದೆ.
ಈ ಬಗ್ಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಬ್ಬರು ಮಕ್ಕಳ ವಿರುದ್ಧ ಆಕ್ಷೇಪಾರ್ಹ ಕೃತ್ಯದ ವಿಡಿಯೋವನ್ನು ತಕ್ಷಣವೇ ಗಮನಿಸಿದ್ದೇವೆ ಮತ್ತು ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ನಡೆಸಿದವರನ್ನು ಗುರುತಿಸಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
#WATCH | After a viral video purportedly showing two minors in UP's Siddharthnagar surfaces, ASP Siddhartha says, "A viral video on social media has come to notice in Thana Pathra Bazaar regarding objectionable acts with two minors. After taking note of the viral video, cases… pic.twitter.com/8yUGfkojal
— ANI UP/Uttarakhand (@ANINewsUP) August 6, 2023
Discussion about this post