ಮಂಗಳೂರು, ಸೆ 06 : ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಅಂಗವಾಗಿ ಜಿಲ್ಲೆಯಾದ್ಯಂತ ಸೆ.6ರಿಂದ ಸೆಪ್ಟೆಂಬರ್ 9ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗಳು ನಡೆಯಲಿದೆ. ಈ ವೇಳೇ ಸಾವಿರಾರು ಜನ ಸಾರ್ವಜನಿಕರು ಹಾಗೂ ಭಕ್ತಾದಿಗಳು ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಅಧಿಕವಿರಲಿದ್ದಾರೆ
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ವ್ಯಾಪ್ತಿಗಳಲ್ಲಿ ಆಯಾ ಭಾಗದ ಪೊಲೀಸ್ ವರಿಷ್ಠರ ಕೋರಿಕೆಯಂತೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಸೆ.6ರಂದು ಕಂಕನಾಡಿ ವೆಲೆನ್ಸಿಯಾ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಆಸುಪಾಸಿನಲ್ಲಿ, ಉಳ್ಳಾಲ ಠಾಣೆ ವ್ಯಾಪ್ತಿಯ ಕುಂಪಲ, ತಲಪಾಡಿ ಆಸುಪಾಸಿನಲ್ಲಿ ಮದ್ಯದಂಗಡಿ ನಿಷೇಧ ಇರುತ್ತದೆ.
ಸೆ.7ರಂದು ಅತ್ತಾವರ ಕಟ್ಟೆ ಆಸುಪಾಸಿನಲ್ಲಿ, ಉರ್ವಾ ಸ್ಟೋರ್ ಜಂಕ್ಷನ್, ಅಶೋಕನಗರ ಜಂಕ್ಷನ್, ಉರ್ವಾ ಮೈದಾನ, ಬೊಕ್ಕಪಟ್ನ ಜಂಕ್ಷನ್, ಕದ್ರಿ ಕಂಬ್ಲ ಆಸುಪಾಸಿನ ಮಲ್ಲಿಕಟ್ಟೆಯ ಮದ್ಯದಂಗಡಿಗಳು, ವಾಮಂಜೂರು, ತಿರುವೈಲ್ ನಲ್ಲಿ ಮದ್ಯ ನಿಷೇಧ ಇರುತ್ತದೆ. ಅಲ್ಲದೆ, ಮರೋಳಿ, ಕುಲಶೇಖರ ಚೌಕಿ, ಸುದರ್ಶನ್ ನಗರ ಪಜೀರು, ಅಸೈಗೋಳಿ, ನೆತ್ತಿಲಪದವು, ತೊಕ್ಕೊಟ್ಟು, ಕೆಳಗಿನ ತಲಪಾಡಿ, ಪಂಜಿಮೊಗರು ಜಂಕ್ಷನ್, ಕಾವೂರು, ಮೂಡುಶೆಡ್ಡೆ ಜಂಕ್ಷನ್, ಕುಂಜತ್ತ್ ಬೈಲು, ಕುಳೂರು, ಪಕ್ಷಿಕೆರೆ- ಅತ್ತೂರು, ಮೂಡುಬಿದ್ರೆ ಪೇಟೆಯಲ್ಲಿರುವ ಮದ್ಯದಂಗಡಿಗಳು ಬಂದ್ ಆಗಲಿವೆ. ಸುರತ್ಕಲ್ ಇಡ್ಯಾ, ಕುಳಾಯಿ, ಜೋಕಟ್ಟೆ, ಕಳವಾರು, ಕೃಷ್ಣಾಪುರ- ಕಾಟಿಪಳ್ಳ, ಚಿತ್ರಾಪುರ, ಮುಕ್ಕ ವಠಾರದಲ್ಲಿ ಮದ್ಯ ನಿಷೇಧ ಇರಲಿದೆ.
Discussion about this post