ಮಂಗಳೂರು. ನ.05: ಕಚೇರಿಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ಹಾಜರಾತಿಗೆ ಸಹಿ ಇಲ್ಲವೇ ಬಯೋಮೆಟ್ರಿಕ್ ಬಳಸುವುದು ಮಾಮೂಲು. ಆದರೆ ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಕಾರಣಕ್ಕೆ ಕಚೇರಿಗಳಲ್ಲಿ ಹಾಜರಾತಿ ಹೇಗೆ ಮಾಡಬೇಕು ಎಂಬುದೇ ಜಿಜ್ಞಾಸೆಗೆ ಕಾರಣವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಸಹಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ಕಚೇರಿಗಳಲ್ಲಿ ಹಾಜರಾತಿಗೆ ಪರ್ಯಾಯ ಮಾರ್ಗ ಅನುಸರಿಸಲಾಗುತ್ತಿದೆ. ಸಾಧ್ಯವಾದಷ್ಟು ಸುರಕ್ಷಿತ ಹಾಜರಾತಿ ವಿಧಾನ ಅನುಸರಿಸಲು ಕಂಪನಿಗಳೂ ಮುಂದೆ ಬಂದಿವೆ.
ಪ್ರಸಕ್ತ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ದುಬಾರಿ ವೆಚ್ಚದ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ ( ಎಫ್ ಆರ್‌ಎಸ್)ನ್ನು ಕೈಗಾರಿಕಾ ವಲಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ(ಕೆಐಒಸಿಎಲ್)ತನ್ನ ಮಂಗಳೂರು ಕಚೇರಿಯಲ್ಲಿ – ಇದನ್ನು ಕಾರ್ಯಗತಗೊಳಿಸುತ್ತಿದ್ದು, ನ.6ರಿಂದ ಇದು – ಜಾರಿಗೆ ಬರುತ್ತಿದೆ. ಇದು ಕೃತಕ ಬುದ್ಧಿಮತ್ತೆ ವಿಧಾನ(ಆರ್ಟಿಫಿಶಿಯಲ್ ಇಂಟಲಿಜೆನ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ವಯಂ ಚಾಲಿತ ಹಾಜರಿ: ಕೆಐಒಸಿಎಲ್ ಮಂಗಳೂರು ಕಚೇರಿಯಲ್ಲಿ 1,500ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಇವರೆಲ್ಲರೂ ಕಚೇರಿಗೆ ಆಗಮಿಸುವಾಗ ಮತ್ತು ನಿರ್ಗಮಿಸುವಾಗ ಕಡ್ಡಾಯವಾಗಿ ಪ್ರವೇಶ ದ್ವಾರದ ಬಳಿ ಅಳವಡಿಸಲಾದಸ್ವಯಂ ಚಾಲಿತ ಫೇಶಿಯಲ್ ರೆಕಗ್ನಿಷನ್ ಎದುರು ನಿಲ್ಲಬೇಕು. ಆಗ ಅದರಲ್ಲಿರುವ ಕ್ಯಾಮರಾ ಮುಖದ ಚಹರೆಯನ್ನು ಸ್ಕ್ಯಾನ್ ಮಾಡಿ ಕಚೇರಿಗೆ ಹಾಜರಾಗಿರುವುದನ್ನು ಖಚಿತಪಡಿಸುತ್ತದೆ. ಇದಕ್ಕಾಗಿ ಎಲ್ಲ ಅಧಿಕಾರಿಹಾಗೂ ಸಿಬ್ಬಂದಿಯ ಮುಖಚಹರೆಯನ್ನು ಮೊದಲೇಎಫ್ ಆರ್ ಎಸ್ ಎದುರುದಾಖಲುಮಾಡಲಾಗಿ ದು, ಇದನ್ನು ಪ್ರತಿ ದಿನ ಕರ್ತವ್ಯಕ್ಕೆ ಬಂದುಹೋಗುವಾಗ ಸ್ಕ್ಯಾನ್ ಮಾಡಿ ಖಚಿತಪಡಿಸುತ್ತದೆ. ಅತ್ಯಂತ ದುಬಾರಿಯಾದ ಈ ವ್ಯವಸೆಗೆ 40 ಲಕ್ಷ ರು. ವರೆಗೆ ವೆಚ್ಚವಾಗಿದೆ ಎಂದು ಕೆಐಒಸಿಎಲ್ ಮೂಲಗಳು ತಿಳಿಸಿವೆ.
ಇದರಿಂದಾಗಿ ಕಚೇರಿಯ ಹಾಜರಾತಿ ವ್ಯವಸ್ಥೆಯಲ್ಲಿ ನಿಖರ ಪಾರದರ್ಶಕತೆ ಇರಲಿದೆ. ಮುಖ ಚಹರೆ ಸ್ಕ್ಯಾನ್ ಆಗುವುದರಿಂದ ಇಲ್ಲಿ ಇದರ ದುರ್ಬಳಕೆ ಮಾಡಲು ಸಾಧ್ಯವಾಗದು. ಅನಪೇಕ್ಷಿತ ಪ್ರವೇಶಕ್ಕೆ ಇದರಲ್ಲಿ ಆಸ್ಪದ ಇಲ್ಲ, ಆಗಂತುಕರು ಪ್ರವೇಶಿಸಿದರೆ ತಕ್ಷಣ ಈ ವ್ಯವಸ್ಥೆ ಅಲರ್ಟ್ ಸೂಚನೆ ನೀಡುತ್ತದೆ. ಅಲ್ಲದೆ ಕೋವಿಡ್ ನಿಯಮಾವಳಿಗೆ ಪೂರಕವಾಗಿ ಈ ವ್ಯವಸ್ಥೆ ಕಾರ್ಯಗತಗೊಳ್ಳುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post