ಮಂಗಳೂರು: ಹಿಜಾಬ್ ವಿಚಾರದಲ್ಲಿ ಸಂಘರ್ಷಕ್ಕಿಳಿದ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮಂಗಳೂರಿನ ರಥಬೀದಿ ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಿ ಸಂದೇಶ್‌ಗೆ ಈ ಬೆದರಿಕೆ ಕಾಲ್‌ಗಳು ಬರುತ್ತಿವೆ.
ವಿದೇಶಗಳಿಂದ, ಇನ್ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಮೂಲಕ ಹತ್ತಾರು ಕಾಲ್‌ಗಳು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ‘ನಿನ್ನ ಫುಲ್ ಡಿಟೈಲ್ ಸಿಕ್ಕಿದೆ, ಎಲ್ಲಿಂದ ಬರ್ತೀಯಾ, ಎಲ್ಲಿಂದ ಹೋಗ್ತೀಯಾ ಅಂತ, ನಮ್ಮ ಕೈಯಿಂದ ತಪ್ಪಿಸು ನೋಡುವ’ ಎಂದೆಲ್ಲಾ ಬೆದರಿಕೆ ಹಾಕಲಾಗಿದೆ.
ಹಿಜಾಬ್ ವಿಚಾರವಾಗಿ ಶುಕ್ರವಾರ ಮಂಗಳೂರಿನ ರಥಬೀದಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ಬಂದ ವೇಳೆ ಸಾಯಿ ಸಂದೇಶ್ ಮತ್ತು ಕೆಲ ವಿದ್ಯಾರ್ಥಿಗಳ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವೇಳೆ ಸಾಯಿ ಸಂದೇಶ್‌ಗೆ ಓರ್ವ ವಿದ್ಯಾರ್ಥಿನಿ ’ಕಾಲೇಜ್ ನಿನ್ನ ಅಪ್ಪಂದಾ’ ಎಂದು ಕೇಳಿದ್ದಳು. ಈ ವಿಡಿಯೋ ವೈರಲ್ ಬೆನ್ನಲ್ಲೇ ಎಬಿವಿಪಿ ವಿದ್ಯಾರ್ಥಿ ಸಾಯಿ ಸಂದೇಶ್‌ಗೆ ಕೊಲೆ ಬೆದರಿಕೆ ಬರುತ್ತಿವೆ.