ಮಂಗಳೂರು, ಮಾ.7: ರಷ್ಯಾ-ಉಕ್ರೇನ್ ಯುದ್ಧದ ಸಂಕಷ್ಟಕ್ಕೆ ಸಿಲುಕಿದ್ದ ದ.ಕ. ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಇಂದು ತಮ್ಮ ತವರೂರು ತಲುಪಿದ್ದಾರೆ.
ಮಂಗಳೂರಿನ ಕ್ಲೇಟನ್ ಓಸ್ಮಂಡ್ ಡಿಸೋಜ, ಅನೈನ ಅನಾ, ಅಹ್ಮದ್ ಸಾದ್ ಅರ್ಶದ್ ಹಾಗೂ ಮೂಡುಬಿದಿರೆಯ ಶಾಲ್ವಿನ್ ಪ್ರೀತಿ ಅರಾನ್ಹ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಈ ವೇಳೆ ಹೆತ್ತವರು ತಮ್ಮ ಮಕ್ಕಳನ್ನು ತಬ್ಬಿಕೊಂಡು ಖುಷಿಪಟ್ಟರು.
ದ.ಕ. ಜಿಲ್ಲೆಯ 18 ವಿದ್ಯಾರ್ಥಿಗಳ ಪೈಕಿ 16 ಮಂದಿ ಸ್ವದೇಶ ತಲುಪಿದ್ದಾರೆ. ಎಂಟು ಮಂದಿ ಮನೆ ಸೇರಿದ್ದಾರೆ.