ಪುದುಚೇರಿ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಪುದುಚೇರಿಯ ಪ್ರಖ್ಯಾತ ರಾಕ್ ಬೀಚ್‌ನಲ್ಲಿನ ಹಡಗುಕಟ್ಟೆ, ಭಾಗಶಃ ಕುಸಿದುಬಿದ್ದಿದೆ. ಭಾನುವಾರ ನಸುಕಿನ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ
ತೀವ್ರವಾಗಿ ಅಲೆಗಳು ಬಡಿದಿದ್ದನ್ನು ತಾಳಿಕೊಳ್ಳಲಾಗದ್ದರಿಂದ ಹಡಗುಕಟ್ಟೆಗೆ ಈ ಪರಿಸ್ಥಿತಿ ಬಂದಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬಂಗಾಲ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ, ಗಂಟೆಗೆ 7 ಕಿ.ಮೀ. ವೇಗದಲ್ಲಿ ಸತತ 6 ಗಂಟೆಗಳ ಕಾಲ ಮಾರುತಗಳು ಬೀಸಿವೆ. ಇದರ ಪರಿಣಾಮವೇ ಪುದುಚೇರಿಯಲ್ಲಿನ ಹಡಗುಕಟ್ಟೆ ಕುಸಿತ. ಮುಂದೆ ಇದು ತಮಿಳುನಾಡಿನತ್ತ ಧಾವಿಸಲಿದೆ. ಸದ್ಯದಲ್ಲೇ ಇದರ ವೇಗ ತಗ್ಗುವ ನಿರೀಕ್ಷೆಯಿದೆ.