• About us
  • Contact us
  • Disclaimer
Monday, September 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

Coastal Times by Coastal Times
September 7, 2026
in ಕರಾವಳಿ
ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್
12
VIEWS
WhatsappTelegramShare on FacebookShare on Twitter

ಮಂಗಳೂರು: ಕರ್ನಾಟಕದ ಕರಾವಳಿ ತೀರದ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಂಗಳೂರು-ಗೋವಾ ನಡುವೆ ಕ್ರೂಸ್ ಸೇವೆ ಹಾಗೂ ಕೇರಳ ಮಾದರಿಯ ಹೌಸ್‌ಬೋಟ್‌ಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷಿ ಯೋಜನೆಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಸರ್ಕಾರ ಗಂಭೀರ ಅಧ್ಯಯನ ನಡೆಸುತ್ತಿದೆ ಎಂದು ಪ್ರವಾಸೋದ್ಯಮ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ನಗರದ ತಣ್ಣೀರುಬಾವಿಯ ‘ಬ್ಲೂ ಫ್ಲ್ಯಾಗ್’ ಕಡಲತೀರಕ್ಕೆ ಭಾನುವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಕರಾವಳಿ ಜಲ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳ ಕುರಿತು ವಿವರ ನೀಡಿದ ಸಚಿವರು ಕರಾವಳಿಯುದ್ದಕ್ಕೂ ಇರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿಲುಗಡೆ ನೀಡುವ ಮೂಲಕ ಮಂಗಳೂರಿನಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಕ್ರೂಸ್ ಸೇವೆ ಆರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳೀಯ ಶಿಪ್‌ಯಾರ್ಡ್‌ಗಳಲ್ಲಿ ನಿರ್ಮಾಣವಾಗುವ ಹಡಗುಗಳನ್ನೇ ಈ ಸೇವೆಗೆ ಬಳಸಿಕೊಳ್ಳುವ ಚಿಂತನೆಯಿದೆ ಎಂದರು.

ನವ ಮಂಗಳೂರು ಬಂದರಿಗೆ (NMPA) ಆಗಮಿಸುವ ವಿದೇಶಿ ಕ್ರೂಸ್ ಪ್ರವಾಸಿಗರು ನಗರದಲ್ಲೇ ತಂಗಿ ಸ್ಥಳೀಯ ತಾಣಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸಲು ಮೂಲಸೌಕರ್ಯ ಸೃಷ್ಟಿಸಲಾಗುತ್ತಿದೆ. ಈ ಕುರಿತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಹಿನ್ನೀರಿನಲ್ಲಿ ಕೇರಳ ಮಾದರಿಯ ಹೌಸ್‌ಬೋಟ್‌ಗಳನ್ನು ಪರಿಚಯಿಸುವ ಪ್ರಸ್ತಾವನೆ ಆರಂಭಿಕ ಅಧ್ಯಯನದ ಹಂತದಲ್ಲಿದೆ ಎಂದು ಹೇಳಿದರು.

ಸೆ.18ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ: ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ಜರುಗಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದ ಜಾರ್ಜ್, ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗಿದ್ದು, ಸಂಪುಟ ಸಭೆಯಲ್ಲಿ ಮಹತ್ವದ ಯೋಜನೆಗಳಿಗೆ ಅನುಮೋದನೆ ದೊರೆಯುವ ವಿಶ್ವಾಸವಿದೆ. ಅಲ್ಲದೆ ರಾಜ್ಯದ ಮತ್ತಷ್ಟು ಕಡಲತೀರಗಳಿಗೆ ‘ಬ್ಲೂ ಫ್ಲ್ಯಾಗ್’ ಪ್ರಮಾಣೀಕರಣ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ: ಗೋವಾ ಮಾದರಿಯಲ್ಲಿ ರಾಜ್ಯದ ಕರಾವಳಿಯಲ್ಲಿ ಕ್ಯಾಸಿನೊಗಳನ್ನು ಆರಂಭಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಖಚಿತಪಡಿಸಿದರು. ಸ್ಥಳೀಯ ಯುವಜನರಿಗೆ ಉದ್ಯೋಗ ಸೃಷ್ಟಿ, ಸ್ಥಳೀಯ ವ್ಯಾಪಾರ ಮತ್ತು ಆರ್ಥಿಕತೆಗೆ ಚೈತನ್ಯ ನೀಡುವುದೇ ಪ್ರವಾಸೋದ್ಯಮ ಉತ್ತೇಜನದ ಮೂಲ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿಆರ್‌ಝಡ್ (CRZ) ನಿಯಮಗಳಿಂದಾಗಿ ಕರಾವಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಣ್ಣೀರುಬಾವಿ ಬೀಚ್‌ನಲ್ಲಿ ಮುಚ್ಚಲ್ಪಟ್ಟಿರುವ ಆಹಾರ ಮಳಿಗೆಗಳ ಆದಾಯ ಹಂಚಿಕೆ ವಿವಾದವನ್ನು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸಮಾಲೋಚನೆ ನಡೆಸಿ, ಕೊಡು-ಕೊಳ್ಳುವ ಮನೋಭಾವದ ಮೂಲಕ ಶೀಘ್ರವೇ ಬಗೆಹರಿಸಿ ಮಳಿಗೆಗಳನ್ನು ಪುನರಾರಂಭಿಸಬೇಕು ಎಂದು ಸೂಚಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ‘ವೈದ್ಯಕೀಯ ಪ್ರವಾಸೋದ್ಯಮ’ ಬೆಳವಣಿಗೆಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮುಖಂಡರಾದ ಜೆ.ಆರ್. ಲೋಬೊ, ಇನಾಯತ್ ಅಲಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ

Related Posts

2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ
ಕರಾವಳಿ

2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ

September 7, 2026
1
ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ
ಕರಾವಳಿ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
59

Discussion about this post

Recent News

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

September 7, 2026
12
2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ

2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ

September 7, 2026
1
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

September 7, 2026
2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ

2027 ಫೆಬ್ರವರಿಯಲ್ಲಿ ಏಳು ದಿನಗಳ ಕರಾವಳಿ ಕರ್ನಾಟಕ ವಾಣಿಜ್ಯ ಮೇಳ; ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರನ್ನು ಭೇಟಿಯಾದ ರಚನಾ ನಿಯೋಗ

September 7, 2026
ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d