ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಮನೆಯೊಳಗೆ ನೆಮ್ಮದಿಯಾಗಿ ಸುರಕ್ಷಿತವಾಗಿ ಇದ್ದೇವೆ ಎಂದುಕೊಳ್ಳುವಂತೆ ಇರದ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದರ ಹಿಂದೊಂದರಂತೆ ಕಟ್ಟಡ ಕುಸಿಯುತ್ತಿದ್ದು, ಇದೀಗ ಆ ಪಟ್ಟಿಗೆ ಮತ್ತೊಂದು ಪ್ರಕರಣವೂ ಸೇರಿದೆ.
ಬೆಂಗಳೂರಿನ ಕಸ್ತೂರಿನಗರದ ಡಾಕ್ಟರ್ಸ್ ಲೇಔಟ್ನಲ್ಲಿನ ಮೂರು ಮಹಡಿಯ ಪ್ಲಾಟ್ ಕುಸಿದು ಬಹುತೇಕ ನೆಲಸಮಗೊಂಡಿದೆ. ಮೂರಂತಸ್ತಿನ ಈ ಕಟ್ಟಡ ಕುಸಿದು ಬಿದ್ದಿದ್ದು, ಅಕ್ಕಪಕ್ಕದ ಕಟ್ಟಡಗಳವರೂ ಆತಂಕಕ್ಕೀಡಾಗುವಂತೆ ಆಗಿದೆ.

ಈ ವಸತಿ ಕಟ್ಟಡ ಬೆಳಗ್ಗೆಯೇ ವಾಲಿಕೊಂಡಿದ್ದನ್ನು ಗಮನಿಸಿದ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಆಗಲೇ ಹೊರಗೆ ಬಂದಿದ್ದರಿಂದ ಸಾವು-ನೋವುಗಳು ತಪ್ಪಿಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಬಂದಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post