ಮಂಗಳೂರು: ಬಂಟ್ವಾಳ ಸಾಮೂಹಿಕ ಅತ್ಯಾಚಾರ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಸಂತ್ರಸ್ತ ಬಾಲಕಿಯ ಅಪಹರಣ ನಡೆದಿಲ್ಲ, ಬದಲಾಗಿ ಆಕೆಯೇ ಆರೋಪಿಗಳ ಬಳಿ ತೆರಳಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಾಲಕಿ ಆರೋಪಿಗಳ ಜತೆ ಸಲುಗೆಯಿಂದ ಇದ್ದಳು ಎನ್ನಲಾಗಿದೆ. ಅತ್ಯಾಚಾರಕ್ಕೂ ಮುನ್ನ ಓರ್ವ ಆರೋಪಿ ಜತೆ ಸಂತ್ರಸ್ತ ಬಾಲಕಿ ಅಶ್ಲೀಲ ವಿಡಿಯೋ ಚಾಟ್ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಶರತ್ ಶೆಟ್ಟಿ ಎಂಬಾತ ಬಾಲಕಿಯನ್ನು ಮಂಗಳೂರಿಗೆ ಬರಲು ಹೇಳಿದ್ದ. ಬಳಿಕ ಮಂಗಳೂರಿನ ಲಾಡ್ಜ್ ಒಂದರಲ್ಲಿ ಶರತ್ ಶೆಟ್ಟಿಯಿಂದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಬಳಿಕ ಶರತ್ ಶೆಟ್ಟಿ ಸ್ನೇಹಿತರಾದ ಇದಾಯತ್ತುಲ್ಲ ಮತ್ತು ಸತೀಶ್ನಿಂದ ಗ್ಯಾಂಗ್‌ರೇಪ್ ನಡೆದಿದೆ ಎನ್ನಲಾಗಿದೆ.
ಅತ್ಯಾಚಾರದ ಬಳಿಕ ಬಾಲಕಿ ಖಾಸಗಿ ಬಸ್ನಲ್ಲಿ ಬಂಟ್ವಾಳಕ್ಕೆ ತೆರಳಿದ್ದಳು. ಸದ್ಯ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಸತೀಶ್, ಇದಾಯುತ್ತುಲ್ಲ ಬಂಧಿತ ಆರೋಪಿಗಳು. ಬಂಟ್ವಾಳ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.