ಮಂಗಳೂರು ಜ.5: ಮಿಲಾಗ್ರಿಸ್ ಇಲ್ಲಿನ ಆರಾಧ್ಯ ಮಠದ ಬಡ ಕ್ಲಾರಾ ಸಹೋದರಿಯರ ಸೇವೆಗೆ ಇಬ್ಬರು ಭಗಿನಿಯರು ಸೇರ್ಪಡೆಗೊಂಡಿದ್ದಾರೆ. ಮೇರಿ ಮತ್ತು ಸೀನಿಯರ್ ಅವರು ಬಡತನ, ವಿಧೇಯತೆ ಹಾಗೂ ನಿಷ್ಕಲಂಕ ಜೀವನ ಎಂಬ ಧ್ಯೇಯಗಳೊಂದಿಗೆ ಸಭೆಯ ವಾಗ್ದಾನ ಮಾಡಿಕೊಂಡಿದ್ದಾರೆ. ಮೂವರು ಧರ್ಮ ಭಗಿನಿಯರಿಗೆ ಮಠದ ಉಡುಗೆಗಳನ್ನು ನೀಡಲಾಯಿತು. ಸಿ| ಮೇರಿ ಫ್ರಾನ್ಸಿಸ್ ವಾಗ್ದಾನ ಸ್ವೀಕರಿಸಿದ್ದಾರೆ.
ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ವಂ| ರೆ| ಡಾ| ಅಲೋಶಿಯಸ್ ಪೌಲ್ ಡಿಸೋಜಾ ಧಾರ್ಮಿಕ ವಿಧಿಗಳೊಂದಿಗೆ ಬಲಿಪೂಜೆ ನೆರವೇರಿಸಿದರು. ಜೈಲ್ ರೋಡ್ ನ ಸಂತ ಅನ್ನ ಫ್ರಾಯರಿಯ ಮುಖ್ಯಾಧಿಕಾರಿ ವಂ| ರೋಕಿ ಡಿ’ಕುನ್ಹಾ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಮಠಕ್ಕೆ ಸೇರ್ಪಡೆಗೊಂಡ ಬಳಿಕ ಧರ್ಮ ಭಗಿನಿಯರು ಸಮಾಜದೊಂದಿಗೆ ಬೆರೆತುಕೊಳ್ಳದೆ ಮಠದೊಳಗೆಯೇ ಇದ್ದು, ಲೋಕ ಕಲ್ಯಾಣಕ್ಕಾಗಿ ನಿರಂತರ ಪ್ರಾರ್ಥಿಸುತ್ತಾರೆ. ಮಠದೊಳಗೆ ಇರುವುದರಿಂದ ಇವರನ್ನು ಭಿತರ್ಲಿ ಮಾದ್ರಿ’ (ಮಠದೊಳಗಿನ ಧರ್ಮ ಭಗಿನಿಯರು) ಎಂದು ಕರೆಯಲಾಗುತ್ತದೆ.
Discussion about this post