ಮೊಹಾಲಿ: ಟೀಂ ಇಂಡಿಯಾದ ಅನಧಿಕೃತ 12ನೇ ಆಟಗಾರನಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ, ಆ ಅನಧಿಕೃತ 12ನೇ ಆಟಗಾರ ಯಾರು ಗೊತ್ತಾ ?
ಯಾರು ಈ ಧರಂವೀರ್ ಪಾಲ್ : ಮಧ್ಯಪ್ರದೇಶದ ಧರ್ಮವೀರ್ ಪಾಲ್ ಹುಟ್ಟುವಾಗಲೇ ಪೋಲಿಯೊಗೆ ತುತ್ತಾಗಿದ್ದರು. ಕ್ರಿಕೆಟ್ ಅನ್ನು ಇಷ್ಟಪಡುವ ಧರಂವೀರ್ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಬರುತ್ತಾರೆ.
ಅಂಗವಿಕಲತೆ ತನ್ನ ನೆಚ್ಚಿನ ಕ್ರಿಕೆಟ್ ಆಡಲು ಯಾವತ್ತೂ ಅಡ್ಡಿ ಮಾಡಿಲ್ಲ.ಅದಕ್ಕಾಗಿಯೇ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಹೋಗುತ್ತೇನೆ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಹಲವು ಆಟಗಾರರಿಗೆ ಧರಂವೀರ್ ಪಾಲ್ ಅಭಿಮಾನಿಯಾದರು. ಆ ಪಟ್ಟಿಯಲ್ಲಿ ಕೊಹ್ಲಿ ಕೂಡ ಇದ್ದಾರೆ. ಇದರೊಂದಿಗೆ ಧರಂವೀರ್ ಟೀಂ ಇಂಡಿಯಾದ 12ನೇ ಅನಧಿಕೃತ ಆಟಗಾರ ಎಂದು ಕರೆಯಲ್ಪಟ್ಟಿದ್ದಾರೆ.
ಮೊಹಾಲಿಯಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ಬಸ್ ಹತ್ತಲು ಸಿದ್ಧತೆ ನಡೆಸಿತ್ತು. ಅದೇ ಸಮಯಕ್ಕೆ ಧರಂವೀರ್ ಪಾಲ್ ಬಸ್ಸಿನ ಹತ್ತಿರ ಬಂದರು. ಇದನ್ನು ಗಮನಿಸಿದ ಕೊಹ್ಲಿ ಬಸ್‌ನಿಂದ ಕೆಳಗಿಳಿದು ಅವರ ಬಳಿಗೆ ಬಂದು ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಕೂಡ ಧರಂವೀರ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ತುಂಬಾ ಧನ್ಯವಾದಗಳು ಚಾಂಪಿಯನ್. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ. ನಿಮ್ಮ ಆಟ ಇನ್ನೂ ಕೆಲವು ವರ್ಷಗಳ ಕಾಲ ಮುಂದುವರಿಯಲು ದೇವರು ಆಶೀರ್ವದಿಸಲಿ” ಎಂದು ಸಂದೇಶವನ್ನ ಕೊಹ್ಲಿಗೆ ತಿಳಿಸಿದ್ದಾರೆ.
ಅವರು ಸಚಿನ್, ಎಂಎಸ್ ಧೋನಿ, ಯುವರಾಜ್ ಸಿಂಗ್, ಸೆಹ್ವಾಗ್ ಮತ್ತು ಕೊಹ್ಲಿಯಂತಹ ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸದ್ಯ ಮಧ್ಯಪ್ರದೇಶ ಧರ್ಮವೀರ್ ಪಾಲ್ ಅವರು ವಿಕಲಚೇತನರ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.