ಉಳ್ಳಾಲ: ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ತಾಯಿಗೆ ಅವಾಚ್ಯ ಶಬ್ದ ಗಳಿಂದ ಬೈದ ಬಗೆ ವಿಚಾರಿಸಲು ಹೋದ ರಿಜ್ವಾನ್ ಎಂಬವರಿಗೆ ಹಲ್ಲೆ ಮಾಡಿ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಂಕರ್ ಚಾಲಕ ಮೇಲಂಗಡಿ ನಿವಾಸಿ ಖಲೀಲ್ ಎಂಬಾತನನ್ನು ಜಪ್ಪು ನೇತ್ರಾವತಿ ಬ್ರಿಡ್ಜ್ ಬಳಿ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದೆ.
ಎಪ್ರಿಲ್ 29 ರಂದು ನಗರ ಸಭೆಯ ನೀರು ಸರಬರಾಜು ಮಾಡದ ಬಗ್ಗೆ ಚೆಂಬು ಗುಡ್ಡೆ ನಿವಾಸಿ ರಿಜ್ವಾನ್ ತಾಯಿ ವಿಚಾರಿಸಿದ್ದರು.ಈ ವೇಳೆ ಆರೋಪಿ ಖಲೀಲ್ ರಿಜ್ವಾನ್ ತಾಯಿ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದೇ ಘಟನೆ ಯನ್ನು ಮಾಸ್ತಿಕಟ್ಟೆ ಬಳಿ ಟ್ಯಾಂಕರ್ ಚಾಲಕ ಖಲೀಲ್ ನಲ್ಲಿ ರಿಜ್ವಾನ್ ವಿಚಾರಿಸಿದ್ದ ಈ ವೇಳೆ ಮಾತಿಗೆ ಮಾತು ಬೆಳೆದು ರಿಜ್ವಾನ್ ಗೆ ಖಲೀಲ್ ಚೂರಿಯಿಂದ ಇರಿದು ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮೆರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ಖಲೀಲ್ ನನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.