ಮಂಗಳೂರು: ʼಇಂಡಿಯಾ ಸ್ಕೇಟ್ʼ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯೆ ಆರ್ನಾ ರಾಜೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಝಾರ್ಖಂಡ್ ನ ರಾಂಚಿಯಲ್ಲಿ ಜೂನ್ 1 ರಿಂದ 5ರ ವರೆಗೆ ನಡೆದ 7 ರಿಂದ 9ರ ವಯೋಮಾನದ ʼಟು ಲ್ಯಾಪ್ಸ್ ರೋಡ್ ರೇಸ್ʼ ಬಾಲಕಿಯರ ಸ್ಕೇಟಿಂಗ್ ನಲ್ಲಿ ಆರ್ನಾ ರಾಜೇಶ್ ಪ್ರಬಲ ಸ್ಪರ್ಧೆಯೊಡ್ಡಿ ಅಂತಿಮವಾಗಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಪಡೆದರು.
ಆರ್ನಾ ರಾಜೇಶ್ ಮಂಗಳೂರಿನ ಕದ್ರಿ ಹಿಲ್ಸ್ ನ ವೈದ್ಯ ದಂಪತಿಯಾದ ಡಾ. ರಾಜೇಶ್ ಹುಕ್ಕೇರಿ ಹಾಗೂ ಡಾ. ಅನಿತಾ ರಾಜೇಶ್ ದಂಪತಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಆರ್ನಾ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ಇವರು ಬೆಂಗಳೂರಿನ ಸ್ಕೇಟಿಂಗ್ ತರಬೇತಿಯ ಮುಖ್ಯ ಕೋಚ್ ಪ್ರತೀಕ್ ರಾಜಾ ಹಾಗೂ ಸಹ ಕೋಚ್ ತೇಜಸ್ವಿನಿ ಕನ್ಬಿಲ್ ಇವರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆರ್ನಾ ರಾಜೇಶ್ 2023ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದರು.
Discussion about this post