ಮಂಗಳೂರು: ಮನಿ ಲಾಂಡರಿಂಗ್, ಡ್ರಗ್ಸ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ, ‘ಡಿಜಿಟಲ್ ಅರೆಸ್ಟ್’ ನೆಪದಲ್ಲಿ 75 ವರ್ಷದ ಹಿರಿಯ ನಾಗರಿಕ ಮಹಿಳೆಯೊಬ್ಬರಿಂದ ಬರೋಬ್ಬರಿ ₹2 ಕೋಟಿ ಹಣವನ್ನು ಲಪಟಾಯಿಸಿರುವ ಭಾರಿ ಸೈಬರ್ ವಂಚನೆ ಪ್ರಕರಣವೊಂದು ಮಂಗಳೂರಿನ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.
ಆತಂಕಗೊಂಡ ತಾನು ಈ ವಿಷಯವನ್ನು ಯಾರಿಗೂ ತಿಳಿಸಲಿಲ್ಲ. ಆಸ್ತಿ ಮತ್ತು ಖಾತೆ ವಿವರವನ್ನು ಪರಿಶೀಲಿಸಿ 2 ದಿನದೊಳಗೆ ಕ್ಲಿಯರೆನ್ಸ್ ನೀಡುವುದಾಗಿ ಆರೋಪಿಗಳು ಹೇಳಿ ತನ್ನ ಬ್ಯಾಂಕ್ ಖಾತೆಗಳ ವಿವರ ಹಾಗೂ ಆಸ್ತಿ ವಿವರವನ್ನು ಪಡೆದುಕೊಂಡಿದ್ದರು. ತಾನು ಎಲ್ಲಾ ವಿವರ ಸಲ್ಲಿಸಿದ ಬಳಿಕ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಮೊದಲು 60 ಲಕ್ಷ ರೂ., ಬಳಿಕ 1.40 ಕೋ. ರೂ. ಹೀಗೆ ಸೆ.25ರಿಂದ ಅ.5ರ ನಡುವೆ 2 ಕೋ.ರೂ. ವರ್ಗಾಯಿಸಿದ್ದೆ. ಕೊನೆಗೆ ತನ್ನ ಗೆಳೆಯರೊಬ್ಬರಿಗೆ ಈ ವಿಚಾರ ತಿಳಿಸಿದಾಗ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ವೃದ್ಧೆ ಮಂಗಳೂರು ನಗರ ಸೆನ್ (CEN) ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post