ಮಂಗಳೂರು : 9 ತಿಂಗಳ ಹಿಂದೆ ಸಂಚಲನ ಮೂಡಿಸಿದ್ದ ಮಂಗಳೂರು ನಗರದ ಗೋಡೆಯೊಂದರ ಮೇಲೆ ಪತ್ತೆಯಾದ ಉಗ್ರ ಪರ ಗೊಡೆಬರಹ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ರಾಜ್ಯ ಉಚ್ಚ ನ್ಯಾಯಾಲಯವೂ ಜಾಮೀನು ಮಂಜೂರು ಮಾಡಿದೆ.
ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಮತ್ತು ಸಾದತ್ ಹುಸೇನ್ ಹೈಕೋರ್ಟ್ನಿಂದ ಜಾಮೀನು ಪಡೆದು ಬಿಡುಗಡೆ ಹೊಂದಿದ ಆರೋಪಿಗಳು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಇನ್ನೊಬ್ಬ ಆರೋಪಿ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ಗೆ ಅರೆಸ್ಟ್ ಆದ ಎರಡು ತಿಂಗಳಿನಲ್ಲಿ ಮಂಗಳೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿತ್ತು
2020 ನ.27ರಂದು ಕದ್ರಿ ಠಾಣೆಯ ಬಳಿ ಬಿಜೈ ಅಪಾರ್ಟ್ಮೆಂಟ್ನ ಗೋಡೆಯಲ್ಲಿ ಉಗ್ರ ಪರ ಬರಹ ಕಂಡು ಬಂದಿತ್ತು. ಅದರಲ್ಲಿ ‘ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಸೇರುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್, ತಾಲಿಬಾನ್ ಜಿಂದಾಬಾದ್’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿತ್ತು.
ಬರಹ ಬರೆದ ಕೆಲ ದಿನಗಳಲ್ಲಿಯೇ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ರಾಷ್ಟ್ರದಾದ್ಯಂತ ಗಮನ ಸೆಳೆದಿದ್ದು , ಈ ನಿಟ್ಟಿನಲ್ಲಿ ಬಂಧಿತ ಆರೋಪಿಗಳ ಹೆಚ್ಚುವರಿ ತನಿಖೆಗೆ ಹಾಗೂ ಅವರಿಗಿಗೆ ಉಗ್ರ ಸಂಘಟನೆಗಳ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲು
ಎನ್ಐಎ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಇವರಿಗೆ ಯಾವುದೇ ಉಗ್ರರೊಂದಿಗೆ ನಂಟು ಇಲ್ಲ ಎಂದು ವರದಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post