• About us
  • Contact us
  • Disclaimer
Friday, October 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

Coastal Times by Coastal Times
October 9, 2026
in ಕ್ರೈಮ್ ನ್ಯೂಸ್
ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು
105
VIEWS
WhatsappTelegramShare on FacebookShare on Twitter

ಮಂಗಳೂರು, ಅ.9: ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು ತರಾತುರಿಯಲ್ಲಿ ಅಂತ್ಯಕ್ರಿಯೆ ಮುಗಿಸಿದ್ದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇದೀಗ ಹೂತು ಹಾಕಿದ್ದ ತಂದೆಯ ಶವವನ್ನು ದೇರೆಬೈಲ್ ಚರ್ಚ್ ಆವರಣದಿಂದ ಹೊರ ತೆಗೆದು ಎಫ್ಎಸ್ಎಲ್ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

ಕೋಟಿ ಕೋಟಿ ಮೌಲ್ಯದ ಆಸ್ತಿಗಾಗಿ ಸ್ವಂತ ತಂದೆಯನ್ನೇ ಮಗಳು ಬಾಯ್‌ಫ್ರೆಂಡ್ ಜೊತೆ ಸೇರಿ ದಾರುಣವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಶವ ದಫನ ಮಾಡಿದ ಬರೋಬ್ಬರಿ ಎರಡು ತಿಂಗಳ ಬಳಿಕ ಸಮಾಧಿಯಿಂದ ಶವವನ್ನು ಹೊರತೆಗೆದು ಪೊಲೀಸರು ಎಫ್‌ಎಸ್‌ಎಲ್ (FSL) ತನಿಖೆಗೆ ಮುಂದಾಗಿರುವ ಬೆಚ್ಚಿಬೀಳಿಸುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಎಂಬವರೇ ನಿಗೂಢವಾಗಿ ಸಾವನ್ನಪ್ಪಿದ ವ್ಯಕ್ತಿ.

ಕಳೆದ ಜುಲೈ 19 ರಂದು ಆಲ್ಬರ್ಟ್ ರೇಗೋ ಅವರು ಸಾವನ್ನಪ್ಪಿದ್ದರು. ಆದರೆ, ಅವರ ಮಗಳು ಮಾಯಾ ರೇಗೋ, ತಂದೆ ಮೃತಪಟ್ಟರೂ ಸಹ ಅಕ್ಕಪಕ್ಕದ ಮನೆಯವರಿಗೆ ಅಥವಾ ದೂರದ ಸಂಬಂಧಿಕರಿಗಾಗಲಿ ಯಾವುದೇ ಮಾಹಿತಿ ನೀಡದೆ, ಮಂಗಳೂರಿನ ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಸದ್ದಿಲ್ಲದೆ ಶವವನ್ನು ಹೂತುಹಾಕಿದ್ದಳು. ತಂದೆಯೊಂದಿಗೆಯೇ ಜೀವನ ನಡೆಸುತ್ತಿದ್ದ ಮಾಯಾಳ ಈ ಸಂಶಯಾಸ್ಪದ ಹಾಗೂ ರಹಸ್ಯ ನಡವಳಿಕೆಯು ಆಲ್ಬರ್ಟ್ ಅವರ ಆಪ್ತ ಸ್ನೇಹಿತರಲ್ಲಿ ತೀವ್ರ ಅನುಮಾನ ಮೂಡಿಸಿತ್ತು.

ಮೃತ ಆಲ್ಬರ್ಟ್ ರೇಗೊ ಅವರು ಹಿಂದೆ ವಿದೇಶದಲ್ಲಿದ್ದು ಸಾಕಷ್ಟು ಆಸ್ತಿ ಮಾಡಿಕೊಂಡಿದ್ದರು. ಅವರ ಇನ್ನಿಬ್ಬರು ಮಕ್ಕಳು ಬೇರೆ ಬೇರೆ ಕಡೆ ನೆಲೆಸಿದ್ದಾರೆ. ಒಬ್ಬಳು ಮಗಳು ಮಾತ್ರ ಜೊತೆಗಿದ್ದು, ಆಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದನ್ನು ತನ್ನ ಸ್ನೇಹಿತರಿಗೆ ಆಲ್ಬರ್ಟ್ ಹೇಳುತ್ತಿದ್ದರು. ಅಲ್ಲದೆ, ಬಲವಂತದಿಂದ ವೀಲು ನಾಮೆ ಬರೆಸಿಕೊಂಡಿದ್ದನ್ನೂ ಹೇಳಿದ್ದರು. ತನಗೇನಾದರೂ ಆದರೆ ಆಕೆಯ ಕಿರುಕುಳವೇ ಕಾರಣ. ನಿರಂತರ ಹಲ್ಲೆಗೈದು ಕಿರುಕುಳ ನೀಡುತ್ತಿದ್ದ ಬಗ್ಗೆ ಆಲ್ಬರ್ಟ್ ಹೇಳಿಕೊಂಡಿದ್ದಾಗಿ ಹೆರಾಲ್ಡ್ ಪಿರೇರಾ ದೂರಿನಲ್ಲಿ ತಿಳಿಸಿದ್ದರು. ಇದಕ್ಕಾಗಿ ಬೋಂದೆಲ್ ನಲ್ಲಿರುವ ವೈದ್ಯರೊಬ್ಬರು ಮತ್ತು ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆಂದೂ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಹಲವು ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಇದೀಗ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾದ ಆಲ್ಬರ್ಟ್ ರೇಗೋ ಅವರ ಶವವನ್ನು ಕುಂಟಿಕಾನ ಬಳಿಯ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಿಂದ ಅಗೆದು ಹೊರ ತೆಗೆದು ಪರೀಕ್ಷೆ ನಡೆಸಲಿದ್ದಾರೆ. ಇದಕ್ಕಾಗಿ ಎಫ್ಎಸ್ಎಲ್ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆರೋಪಿತ ಮಾಯಾ ರೇಗೊ ಮತ್ತು ಸ್ಥಳೀಯ ದೂರುದಾರರ ಸಮ್ಮುಖದಲ್ಲಿಯೇ ಅಸ್ಥಿಪಂಜರದ ಪರೀಕ್ಷೆ ನಡೆಯಲಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ದಾಂಡಿಯಾ ಹೆಸರಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪಾರ್ಟಿಗೆ ಅನುಮತಿ ನೀಡದಂತೆ ಬಜರಂಗದಳ ಆಗ್ರಹ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು ಎಂದ ಕಮಿಷನರ್​

Next Post

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

Related Posts

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ
ಕ್ರೈಮ್ ನ್ಯೂಸ್

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

October 9, 2026
19
ಮಂಗಳೂರು: ರೈಲಿನಲ್ಲಿ ಲ್ಯಾಪ್‌ಟಾಪ್, ಚಿನ್ನದ ಸರ ಕಳವು: ಟಿಟಿಇ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಕಳ್ಳ !

October 8, 2026
48
Next Post
ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

Discussion about this post

Recent News

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

October 9, 2026
19
ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

October 9, 2026
105
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

October 9, 2026
ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

October 9, 2026
ದಾಂಡಿಯಾ ಹೆಸರಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪಾರ್ಟಿಗೆ ಅನುಮತಿ ನೀಡದಂತೆ ಬಜರಂಗದಳ ಆಗ್ರಹ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು ಎಂದ ಕಮಿಷನರ್​

ದಾಂಡಿಯಾ ಹೆಸರಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪಾರ್ಟಿಗೆ ಅನುಮತಿ ನೀಡದಂತೆ ಬಜರಂಗದಳ ಆಗ್ರಹ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು ಎಂದ ಕಮಿಷನರ್​

October 9, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d