ಮಂಗಳೂರು: ಬೈಕಂಪಾಡಿಯಲ್ಲಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾ ಸರ್ವೀಸ್ ಸಂಸ್ಥೆಯೊಂದರಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಮಂಗಳೂರು ನಗರದ ಮಿನಿ ವಿಧಾನಸೌಧದ ಎದುರು ಇಂದು ಇವಿ (ಎಲೆಕ್ಟ್ರಿಕ್) ಆಟೋ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.
ಸರಿಯಾದ ಸಮಯಕ್ಕೆ ದುರಸ್ತಿ ಮಾಡಿಕೊಡುತ್ತಿಲ್ಲ, ಬಿಡಿ ಭಾಗಗಳು ಸಿಗುತ್ತಿಲ್ಲ. ವಾರಂಟಿ ಷರತ್ತುಗಳನ್ನು ಪಾಲಿಸುತ್ತಿಲ್ಲ. ಸರಕಾರದ ಸಬ್ಸಿಡಿಯನ್ನು ನೀಡುತ್ತಿಲ್ಲ ಎಂದು ಚಾಲಕರು ದೂರಿದರು.
ಇವಿ ಟ್ರಿಯೋ ರಿಕ್ಷಾ ಕಮಿಟಿ ಅಧ್ಯಕ್ಷ ಅನಿಲ್ ಸಾಲ್ಡಾನ ಪಚ್ಚನಾಡಿ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಬಳಕೆಗೆ ಬಂದ ಇ.ವಿ ರಿಕ್ಷಾಗಳು ಚಾಲಕರ ಮೇಲೆ ಸಾಲದ ಹೊರೆಯನ್ನು ಹೆಚ್ಚಿಸುತ್ತಿದೆ ಹೊರತು ಆದಾಯವನ್ನು ಗಳಿಸುವಲ್ಲಿ ಯಾವ ನೆರವು ಆಗುತ್ತಿಲ್ಲ. 3.5 ಲಕ್ಷ ರೂ. ವೆಚ್ಚದಲ್ಲಿ ರಿಕ್ಷಾ ಖರೀದಿಸಿದ ಸಂದರ್ಭದಲ್ಲಿ 3 ವರ್ಷದ ಗ್ಯಾರಂಟಿಯನ್ನು ಕಂಪೆನಿ ನೀಡಿತ್ತು. ಆದರೆ ಒಂದ ವರ್ಷದೊಳಗೆಯೇ ಇ.ವಿ ರಿಕ್ಷಾಗಳು ಸಮಸ್ಯೆಗಳಿಗೆ ಗುರಿಯಾಗುತ್ತಿವೆ. ಬೈಕಂಪಾಡಿಯ ಸರ್ವಿಸ್ ಸ್ಟೇಷನ್ ಗೆ ರಿಪೇರಿಗೆ ಹೋಗುವ ಇ.ವಿ. ರಿಕ್ಷಾಗಳು ಸಮಸ್ಯೆಗಳಿಗೆ ಗುರಿಯಾಗುತ್ತಿವೆ. ಬೈಕಂಪಾಡಿಯ ಸರ್ವಿಸ್ ಸ್ಟೇಷನ್ ಗೆ ರಿಪೇರಿಗೆ ಹೋಗುವ ಇ.ವಿ. ರಿಕ್ಷಾಗಳು ಕೇವಲ ಹೆಸರಿಗೆ ಮಾತ್ರ ರಿಪೇರಿಯಾಗಿ ಹೊರ ಬರುತ್ತಿದ್ದು, ತೊಂದರೆಗಳು ಮರುಕಳಿಸುತ್ತಲೇ ಇವೆ. ಇದು ನಮ್ಮ ದಿನದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಾಲದ ಹೊರೆಯು ಹೆಚ್ಚಾಗುತ್ತಿದೆ ಎಂದು ದೂರಿದರು.
ಇ.ವಿ ರಿಕ್ಷಾಗಳಿಗೆ ಕೇಂದ್ರ ಸರಕಾರದಿಂದ ಸಿಗುವ ಸಬ್ಸಿಡಿ ಯಾವ ರಿಕ್ಷಾ ಚಾಲಕರಿಗೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಕುರಿತು 20 ದಿನಗಳ ಹಿಂದೆ ಸಂಬಂಧಿಸಿದವರಿಗೆ ಪತ್ರ ಬರೆದರೂ ಯಾವ ಪ್ರಯೋಜನವಾಗಿಲ್ಲ. ಅವರ ಬಳಿ ನಮ್ಮ ಸಮಸ್ಯೆಗಳನ್ನು ಕೇಳಲು ಸಮಯವಿಲ್ಲ ಎಂದು ರಿಕ್ಷಾ ಚಾಲಕ ಮೋಹನ್ ಕಡ್ಯದ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯ ವೇಳೆ ಗೌಪ್ಯವಾಗಿ ಆಟೋ ರಿಕ್ಷಾ ಚಾಲಕರ ವೀಡಿಯೋ ಮಾಡುತ್ತಿದ್ದ ಕಂಪೆನಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪೊಲೀಸರು ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡರು.
ಚಾಲಕರು ಮತ್ತು ಮಾಲಕರು ಇವಿ ಟ್ರಿಯೋ ರಿಕ್ಷಾ ಕಮಿಟಿ ಗೌರವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ರೋಹಿತ್ ಕೋಟ್ಯಾನ್ ಬಿಜೈ, ಗೌರವ ಸಲಹೆಗಾರ ಅವಿಲ್, ಪ್ರಧಾನ ಕಾರ್ಯದರ್ಶಿ ರಾಮನಾಥ ಪ್ರಭು, ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಶೈಲೇಂದ್ರ ಕೊಲ್ಯ, ಸಂಘದ ಮುಖಂಡರಾದ ಗೋವಿಂದ ಶೆಟ್ಟಿ, ಚಂದ್ರಹಾಸ್, ಅಶ್ವಿನ್ ಧೀರಜ್, ಮೋಹನ್ ಕೃಷ್ಣ, ಸುಖೇಶ್ ನಂತೂರು, ಹರೀಶ್ ಶಿವಪ್ರಸಾದ್, ಗುರುರಾಜ್ ಅಡ್ಯಾರ್, ರಶೀದ್, ಶರತ್ ಪದಂಗಡಿ ಸಂತೋಷ್, ಪ್ರಕಾಶ್ ವಿ.ಎನ್. ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post