• About us
  • Contact us
  • Disclaimer
Tuesday, May 13, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪುತ್ತಿಲ ಪರಿವಾರದ ಕಚೇರಿಗೆ ನುಗ್ಗಿ ತಲವಾರು ತೋರಿಸಿ ಬೆದರಿಕೆ ; ಇಬ್ಬರು ಬಾಲಕರು ಸೇರಿ 9 ಮಂದಿ ಪೊಲೀಸರ ವಶಕ್ಕೆ

Coastal Times by Coastal Times
November 10, 2023
in ಕ್ರೈಮ್ ನ್ಯೂಸ್
ಪುತ್ತಿಲ ಪರಿವಾರದ ಕಚೇರಿಗೆ ನುಗ್ಗಿ ತಲವಾರು ತೋರಿಸಿ ಬೆದರಿಕೆ ; ಇಬ್ಬರು ಬಾಲಕರು ಸೇರಿ 9 ಮಂದಿ ಪೊಲೀಸರ ವಶಕ್ಕೆ
135
VIEWS
WhatsappTelegramShare on FacebookShare on Twitter

ಪುತ್ತೂರು: ಹಿಂದುತ್ವ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಮುಕ್ರಂಪಾಡಿಯಲ್ಲಿರುವ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಪುತ್ತಿಲ ಪರಿವಾರದ ಮುಕ್ರಂಪಾಡಿಯ ಕಚೇರಿಗೆ ಜಾಗರಣ ವೇದಿಕೆಯ ದಿನೇಶ್ ಪಂಜಿಗ ಎಂಬಾತ ತನ್ನ ಗುಂಪಿನೊಂದಿಗೆ ತಲವಾರನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬಂದು ಗಲಾಟೆ ನಡೆಸಿದ್ದಾನೆ. ತಲವಾರು ಹಿಡಿದು ಮನೀಶ್ ಕುಲಾಲ್ ಇಲ್ಲವೇ.. ಆತನನ್ನು ಬಿಡೋದಿಲ್ಲ ಎಂದು ಹೇಳಿ ದಾಂಧಲೆ ನಡೆಸಲು ಯತ್ನಿಸಿದ್ದಾನೆ.  ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು ದಿನೇಶ್ ಸೇರಿ ಐವರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದಾರೆ. ಕೃತ್ಯದ ಸಂದರ್ಭದಲ್ಲಿ ಮನೀಶ್ ಕುಲಾಲ್ ಸ್ಥಳದಲ್ಲಿ ಇರಲಿಲ್ಲ. ಇತರ ಪ್ರಮುಖರು ಸ್ಥಳದಲ್ಲಿದ್ದು ತಲವಾರು ಹಿಡಿದು ಬಂದಿದ್ದವರನ್ನು ಸಮಾಧಾನ ಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಪುತ್ತೂರು ಬನ್ನೂರು ಗ್ರಾಮದ ಮನೀಶ (23), ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ತಲವಾರನ್ನು ಬೆನ್ನಿಗೆ ಕಟ್ಟಿಕೊಂಡು ಬೆದರಿಕೆ ಹಾಕುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುತ್ತಿಲ ಪರಿವಾರದ ಪ್ರಮುಖ ಮನೀಶ್ ಕುಲಾಲ್ ಗುರಿಯಾಗಿಸಿ ತಲವಾರು ದಾಳಿಗೆ ಮುಂದಾಗಿದ್ದರು ಎನ್ನಲಾಗುತ್ತಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆ ಎದುರಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮುಖಂಡರು ಜಮಾಯಿಸಿದ್ದಾರೆ. ಪರಿವಾರದ ಮುಖಂಡ ಅರುಣ್ ಪುತ್ತಿಲ ಪ್ರತಿಕ್ರಿಯಿಸಿ, ರೌಡಿಸಂ ರೀತಿಯಲ್ಲಿ ಇನ್ನೊಬ್ಬ ಕಾರ್ಯಕರ್ತನನ್ನು ಕೊಲ್ಲುವ ಜಾಯಮಾನ ಪುತ್ತೂರಿನಲ್ಲಿ ಬಂದಿದೆ. ಇದನ್ನು ಪುತ್ತೂರಿನ ಜನತೆ ಸಹಿಸುವುದಿಲ್ಲ. ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.‌ ದಿನೇಶ್ ಪಂಜಿಗ ಎಂಬಾತ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದು, ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗ ಮನೀಶ್ ಕುಲಾಲ್ ಬನ್ನೂರು ಎಂಬವರನ್ನು ಗುರಿಯಾಗಿಟ್ಟುಗೊಂಡು ಬಂದಿದ್ದರು ಎಂದು ಆರೋಪಿಸಲಾಗಿದೆ.

ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಇಬ್ಬರು ಬಾಲಕರ ಸಹಿತ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share this:

  • Facebook
  • X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಎಂಡಿಎಂಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳ ಸೆರೆ

Next Post

ಬಿ.ವೈ ವಿಜಯೇಂದ್ರಗೆ ಒಲಿದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ, ಮತ್ತೆ ಲಿಂಗಾಯತರಿಗೆ ಮಣೆ ಹಾಕಿದ ಹೈಕಮಾಂಡ್

Related Posts

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಬಂಧನ
ಕ್ರೈಮ್ ನ್ಯೂಸ್

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಬಂಧನ

May 12, 2025
45
ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ, ದೂರು ದಾಖಲಾಗುತ್ತಿದ್ದಂತೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯಿಂದ ಉಚ್ಛಾಟನೆ
ಕ್ರೈಮ್ ನ್ಯೂಸ್

ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ, ದೂರು ದಾಖಲಾಗುತ್ತಿದ್ದಂತೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯಿಂದ ಉಚ್ಛಾಟನೆ

May 12, 2025
61
Next Post
ಬಿ.ವೈ ವಿಜಯೇಂದ್ರಗೆ ಒಲಿದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ, ಮತ್ತೆ ಲಿಂಗಾಯತರಿಗೆ ಮಣೆ ಹಾಕಿದ ಹೈಕಮಾಂಡ್

ಬಿ.ವೈ ವಿಜಯೇಂದ್ರಗೆ ಒಲಿದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ, ಮತ್ತೆ ಲಿಂಗಾಯತರಿಗೆ ಮಣೆ ಹಾಕಿದ ಹೈಕಮಾಂಡ್

Discussion about this post

Recent News

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಬಂಧನ

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಬಂಧನ

May 12, 2025
45
ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ, ದೂರು ದಾಖಲಾಗುತ್ತಿದ್ದಂತೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯಿಂದ ಉಚ್ಛಾಟನೆ

ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ, ದೂರು ದಾಖಲಾಗುತ್ತಿದ್ದಂತೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯಿಂದ ಉಚ್ಛಾಟನೆ

May 12, 2025
61
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಬಂಧನ

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಕೊಲೆ ಪ್ರಕರಣ: ಆರೋಪಿ ಹರಿಪ್ರಸಾದ್ ಬಂಧನ

May 12, 2025
ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ, ದೂರು ದಾಖಲಾಗುತ್ತಿದ್ದಂತೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯಿಂದ ಉಚ್ಛಾಟನೆ

ವಿಟ್ಲ: ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ, ದೂರು ದಾಖಲಾಗುತ್ತಿದ್ದಂತೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯಿಂದ ಉಚ್ಛಾಟನೆ

May 12, 2025
AIMIT ನಲ್ಲಿ ನವೋದ್ಯಮಕ್ಕೆ ನುರಿತ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಇಗ್ನೈಟಿಂಗ್ ಇನೋವೇಷನ್: ಎಂಟರ್‌ಪ್ರೈನರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ 2025’

AIMIT ನಲ್ಲಿ ನವೋದ್ಯಮಕ್ಕೆ ನುರಿತ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಇಗ್ನೈಟಿಂಗ್ ಇನೋವೇಷನ್: ಎಂಟರ್‌ಪ್ರೈನರ್‌ಶಿಪ್ ಡೆವಲಪ್‌ಮೆಂಟ್ ಪ್ರೋಗ್ರಾಂ 2025’

May 12, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d