ತಿರುವನಂತಪುರಂ, ನ 29: ಫೀಪಾ ವಿಶ್ವಕಪ್ 2022 ರ ಅಭಿಮಾನಿಗಳು ಪ್ರಸ್ತುತ ಕತಾರ್‌ನಲ್ಲಿ ಈ ವರ್ಷದ ಅತಿದೊಡ್ಡ ಕ್ರೀಡಾಕೂಟಕ್ಕಾಗಿ ಒಂದೆಡೆ ಸೇರುತ್ತಿದ್ದಾರೆ. ಈ ವರ್ಷದ ಫೀಫಾ ವಿಶ್ವಕಪ್ ಅನ್ನು ವಿಶೇಷ ಕ್ರೀಡಾಕೂಟವಾಗಿ ಪರಿಗಣಿಸಲಾಗಿದೆ. ಏಕೆಂದರೆ ಇದು ಇಬ್ಬರು ಫುಟ್ಬಾಲ್ ದಿಗ್ಗಜರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಟಿಯಾನೋ ರೊನಾಲ್ಡೊ ಅವರ ಕೊನೆಯ ವಿಶ್ವಕಪ್ ಆಗಿರಬಹುದು ಎನ್ನಲಾಗಿದೆ.
ಹೀಗಾಗಿ ಪ್ರಪಂಚದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳು ತಮ್ಮ ನೆಚ್ಚಿನ ಫುಟ್‌ಬಾಲ್ ಆಟಗಾರರ ಆಟವನ್ನು ನೋಡಲು ಪ್ರಯತ್ನಿಸುತ್ತಿದ್ದಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಆಟವನ್ನು ವೀಕ್ಷಿಸಲು ಭಾರತದಿಂದ ಅಂತಹ ಅಭಿಮಾನಿಯೊಬ್ಬರು ಕತಾರ್‌ಗೆ ಮಹಿಂದ್ರಾ ಥಾರ್ ಕಾರ್ ಅನ್ನು ಓಡಿಸಿಕೊಂಡು ತೆರಳಿದ್ದಾರೆ. ಕೇರಳದ 33 ವರ್ಷದ ಗೃಹಿಣಿ, ನಜೀರಾ ನೌಶಾದ್ ಅವರು ಇತರರಂತೆ ವಿಮಾನದಲ್ಲಿ ಹೋಗಲು ಬಯಸದೆ ಕತಾರ್‌ಗೆ ತಲುಪಲು ತಮ್ಮ ಮಹೀಂದ್ರಾ ಥಾರ್‌ನಲ್ಲಿ 2,973 ಕಿಲೋಮೀಟರ್ ಓಡಿಸಿಕೊಂಡು ಹೋಗಿದ್ದಾರೆ.
ಫೀಫಾ ವಿಶ್ವಕಪ್‌ಗಾಗಿ ಕತಾರ್‌ಗೆ ತಲುಪಲು ನೌಶಾದ್ ರಸ್ತೆಯ ಮೂಲಕ ಹಲವಾರು ದೇಶಗಳನ್ನು ದಾಟಿ ಹೋಗಿದ್ದಾರೆ. ಪ್ರಯಾಣ ಉತ್ಸಾಹಿಯಾಗಿರುವ ನಜೀರಾ ನೌಶಾದ್ ಯುಎಇ, ಬಹ್ರೇನ್, ಕುವೈತ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಅವರು ತಮ್ಮ ಪ್ರಯಾಣವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ನಿಧಾನವಾಗಿ ಇಂಟರ್‌ನೆಟ್‌ನಲ್ಲಿ ನೆಟ್ಟಗರ ಗಮನ ಸೆಳೆದಿದೆ. ಈ ಸುದೀರ್ಘ ಸಾಹಸದಲ್ಲಿ ತನ್ನ ಐದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ನೌಷಾದ್ ಎಲ್ಲಾ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ.
ಇಲ್ಲಿ ಗಮನಾರ್ಹ ಸಂಗತಿಯೆಂದರೆ ನಜೀರಾ ನೌಶಾದ್ ಅವರು ಚಾಲನೆಯನ್ನು ಪ್ರಾರಂಭಿಸುವ ಮೊದಲು ತನ್ನ ಮಹೀಂದ್ರ ಥಾರ್ ಅನ್ನು ಟ್ರಕ್‌ನಲ್ಲಿ ಸಾಗಿಸಬೇಕಾಯಿತು. ಬಳಿಕ ತನ್ನ ಥಾರ್ ಅನ್ನು ಮೊದಲು ಹಡಗಿನ ಮೂಲಕ ಓಮನ್‌ಗೆ ಸಾಗಿಸಿಲಾಯಿತು. ಓಮನ್‌ನಿಂದ ಅವರು ಕತಾರ್ ತಲುಪುವ ಮೊದಲು ಯುಎಇ, ಬಹ್ರೇನ್, ಕುವೈತ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣ ಬೆಳೆಸಿದರು. ನೌಶಾದ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯನಲ್ಲಿ ತನ್ನ ಕಥೆ ಮತ್ತು ಪ್ರಯಾಣದ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಂಡರು. ಇದರಲ್ಲಿ ಕೆಲವು ಪೋಸ್ಟ್‌ಗಳು ವೈರಲ್ ಆಗಿದ್ದು, ಹಲವರಿಗೆ ಇದೇ ರೀತಿಯ ಸಾಹಸಮಯ ರೀತಿಯಲ್ಲಿ ಪ್ರಯಾಣಿಸಲು ಪ್ರೇರಣೆ ನೀಡಿವೆ.
ಮಹೀಂದ್ರ ಥಾರ್ ಸಾಕಷ್ಟು ಗಟ್ಟಿಮುಟ್ಟಾದ ವಾಹನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಖರೀದಿದಾರರಲ್ಲಿ ಹೆಚ್ಚಿನ ಸಂಚಲನ ಸೃಷ್ಟಿಸಿದೆ. ಈ ಥಾರ್ ವಾಹನವು ಸಾಕಷ್ಟು ಸಂಸ್ಕರಿಸಿದ ಎಂಜಿನ್‌ನಿಂದ ನಿರ್ಮೀತವಾಗಿದೆ. ಆಫ್-ರೋಡಿಂಗ್ ಸಾಮರ್ಥ್ಯಗಳು ಮಹೀಂದ್ರ ಥಾರ್ ಅನ್ನು ಅಂತಹ ದೀರ್ಘ ಸಾಹಸಗಳಿಗೆ ವಿಶ್ವಾಸಾರ್ಹ ವಾಹನವನ್ನಾಗಿ ಮಾಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post