• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಲಿಯೋನೆಲ್ ಮೆಸ್ಸಿಯನ್ನು ನೋಡಲು ಕೇರಳದಿಂದ ಕತಾರ್‌ಗೆ ಮಹೀಂದ್ರ ಥಾರ್‌ ಓಡಿಸಿಕೊಂಡು ಹೋದ ಮಹಿಳೆ

Coastal Times by Coastal Times
December 10, 2022
in ಕ್ರೀಡಾ ಸುದ್ದಿ, ರಾಷ್ಟ್ರೀಯ ಸುದ್ದಿ
ಲಿಯೋನೆಲ್ ಮೆಸ್ಸಿಯನ್ನು ನೋಡಲು ಕೇರಳದಿಂದ ಕತಾರ್‌ಗೆ ಮಹೀಂದ್ರ ಥಾರ್‌ ಓಡಿಸಿಕೊಂಡು ಹೋದ ಮಹಿಳೆ
122
VIEWS
WhatsappTelegramShare on FacebookShare on Twitter

ತಿರುವನಂತಪುರಂ, ನ 29: ಫೀಪಾ ವಿಶ್ವಕಪ್ 2022 ರ ಅಭಿಮಾನಿಗಳು ಪ್ರಸ್ತುತ ಕತಾರ್‌ನಲ್ಲಿ ಈ ವರ್ಷದ ಅತಿದೊಡ್ಡ ಕ್ರೀಡಾಕೂಟಕ್ಕಾಗಿ ಒಂದೆಡೆ ಸೇರುತ್ತಿದ್ದಾರೆ. ಈ ವರ್ಷದ ಫೀಫಾ ವಿಶ್ವಕಪ್ ಅನ್ನು ವಿಶೇಷ ಕ್ರೀಡಾಕೂಟವಾಗಿ ಪರಿಗಣಿಸಲಾಗಿದೆ. ಏಕೆಂದರೆ ಇದು ಇಬ್ಬರು ಫುಟ್ಬಾಲ್ ದಿಗ್ಗಜರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಟಿಯಾನೋ ರೊನಾಲ್ಡೊ ಅವರ ಕೊನೆಯ ವಿಶ್ವಕಪ್ ಆಗಿರಬಹುದು ಎನ್ನಲಾಗಿದೆ.

ಹೀಗಾಗಿ ಪ್ರಪಂಚದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳು ತಮ್ಮ ನೆಚ್ಚಿನ ಫುಟ್‌ಬಾಲ್ ಆಟಗಾರರ ಆಟವನ್ನು ನೋಡಲು ಪ್ರಯತ್ನಿಸುತ್ತಿದ್ದಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಆಟವನ್ನು ವೀಕ್ಷಿಸಲು ಭಾರತದಿಂದ ಅಂತಹ ಅಭಿಮಾನಿಯೊಬ್ಬರು ಕತಾರ್‌ಗೆ ಮಹಿಂದ್ರಾ ಥಾರ್‌ ಕಾರ್ ಅನ್ನು ಓಡಿಸಿಕೊಂಡು ತೆರಳಿದ್ದಾರೆ. ಕೇರಳದ 33 ವರ್ಷದ ಗೃಹಿಣಿ, ನಜೀರಾ ನೌಶಾದ್ ಅವರು ಇತರರಂತೆ ವಿಮಾನದಲ್ಲಿ ಹೋಗಲು ಬಯಸದೆ ಕತಾರ್‌ಗೆ ತಲುಪಲು ತಮ್ಮ ಮಹೀಂದ್ರಾ ಥಾರ್‌ನಲ್ಲಿ 2,973 ಕಿಲೋಮೀಟರ್ ಓಡಿಸಿಕೊಂಡು ಹೋಗಿದ್ದಾರೆ.

ಫೀಫಾ ವಿಶ್ವಕಪ್‌ಗಾಗಿ ಕತಾರ್‌ಗೆ ತಲುಪಲು ನೌಶಾದ್ ರಸ್ತೆಯ ಮೂಲಕ ಹಲವಾರು ದೇಶಗಳನ್ನು ದಾಟಿ ಹೋಗಿದ್ದಾರೆ. ಪ್ರಯಾಣ ಉತ್ಸಾಹಿಯಾಗಿರುವ ನಜೀರಾ ನೌಶಾದ್‌ ಯುಎಇ, ಬಹ್ರೇನ್, ಕುವೈತ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಅವರು ತಮ್ಮ ಪ್ರಯಾಣವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ನಿಧಾನವಾಗಿ ಇಂಟರ್‌ನೆಟ್‌ನಲ್ಲಿ ನೆಟ್ಟಗರ ಗಮನ ಸೆಳೆದಿದೆ. ಈ ಸುದೀರ್ಘ ಸಾಹಸದಲ್ಲಿ ತನ್ನ ಐದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ನೌಷಾದ್ ಎಲ್ಲಾ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ನಜೀರಾ ನೌಶಾದ್ ಅವರು ಚಾಲನೆಯನ್ನು ಪ್ರಾರಂಭಿಸುವ ಮೊದಲು ತನ್ನ ಮಹೀಂದ್ರ ಥಾರ್ ಅನ್ನು ಟ್ರಕ್‌ನಲ್ಲಿ ಸಾಗಿಸಬೇಕಾಯಿತು. ಬಳಿಕ ತನ್ನ ಥಾರ್ ಅನ್ನು ಮೊದಲು ಹಡಗಿನ ಮೂಲಕ ಓಮನ್‌ಗೆ ಸಾಗಿಸಿಲಾಯಿತು. ಓಮನ್‌ನಿಂದ ಅವರು ಕತಾರ್ ತಲುಪುವ ಮೊದಲು ಯುಎಇ, ಬಹ್ರೇನ್, ಕುವೈತ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣ ಬೆಳೆಸಿದರು. ನೌಶಾದ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯನಲ್ಲಿ ತನ್ನ ಕಥೆ ಮತ್ತು ಪ್ರಯಾಣದ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಂಡರು. ಇದರಲ್ಲಿ ಕೆಲವು ಪೋಸ್ಟ್‌ಗಳು ವೈರಲ್ ಆಗಿದ್ದು, ಹಲವರಿಗೆ ಇದೇ ರೀತಿಯ ಸಾಹಸಮಯ ರೀತಿಯಲ್ಲಿ ಪ್ರಯಾಣಿಸಲು ಪ್ರೇರಣೆ ನೀಡಿವೆ.

ಮಹೀಂದ್ರ ಥಾರ್ ಸಾಕಷ್ಟು ಗಟ್ಟಿಮುಟ್ಟಾದ ವಾಹನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಖರೀದಿದಾರರಲ್ಲಿ ಹೆಚ್ಚಿನ ಸಂಚಲನ ಸೃಷ್ಟಿಸಿದೆ. ಈ ಥಾರ್‌ ವಾಹನವು ಸಾಕಷ್ಟು ಸಂಸ್ಕರಿಸಿದ ಎಂಜಿನ್‌ನಿಂದ ನಿರ್ಮೀತವಾಗಿದೆ. ಆಫ್-ರೋಡಿಂಗ್ ಸಾಮರ್ಥ್ಯಗಳು ಮಹೀಂದ್ರ ಥಾರ್ ಅನ್ನು ಅಂತಹ ದೀರ್ಘ ಸಾಹಸಗಳಿಗೆ ವಿಶ್ವಾಸಾರ್ಹ ವಾಹನವನ್ನಾಗಿ ಮಾಡಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಇಂದು ಮಂಗಳೂರಿನಲ್ಲಿ ವೇದ ಪ್ರಿ ರಿಲೀಸ್‌ ಇವೆಂಟ್‌: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ನಟ ಶಿವರಾಜ್‌ಕುಮಾರ್‌ ಭೇಟಿ

Next Post

ಭಯೋತ್ಪಾದಕರ ವಿರುದ್ಧ ಮೊದಲ ಬುಲ್ಡೋಜರ್ ಕಾರ್ಯಾಚರಣೆ ; ಆಶಿಕ್ ಅಹಮ್ಮದ್ ನೆಂಗ್ರೂ ಮನೆ ಧ್ವಂಸ

Related Posts

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು
ರಾಷ್ಟ್ರೀಯ ಸುದ್ದಿ

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

July 21, 2026
51
FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ
ಕ್ರೀಡಾ ಸುದ್ದಿ

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

July 20, 2026
37
Next Post
ಭಯೋತ್ಪಾದಕರ ವಿರುದ್ಧ ಮೊದಲ ಬುಲ್ಡೋಜರ್ ಕಾರ್ಯಾಚರಣೆ ; ಆಶಿಕ್ ಅಹಮ್ಮದ್ ನೆಂಗ್ರೂ ಮನೆ ಧ್ವಂಸ

ಭಯೋತ್ಪಾದಕರ ವಿರುದ್ಧ ಮೊದಲ ಬುಲ್ಡೋಜರ್ ಕಾರ್ಯಾಚರಣೆ ; ಆಶಿಕ್ ಅಹಮ್ಮದ್ ನೆಂಗ್ರೂ ಮನೆ ಧ್ವಂಸ

Discussion about this post

Recent News

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
20
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
31
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d