• About us
  • Contact us
  • Disclaimer
Monday, March 30, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ತಣ್ಣೀರುಬಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ, ಕಡಲತಡಿಯಲ್ಲಿ ಹಾರಾಡಿದ ದೇಶ- ವಿದೇಶದ ಪತಂಗಗಳು.!

Coastal Times by Coastal Times
February 11, 2024
in ಕರಾವಳಿ
ತಣ್ಣೀರುಬಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ, ಕಡಲತಡಿಯಲ್ಲಿ ಹಾರಾಡಿದ ದೇಶ- ವಿದೇಶದ ಪತಂಗಗಳು.!
35
VIEWS
WhatsappTelegramShare on FacebookShare on Twitter

ಪಣಂಬೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರತೀ ವರ್ಷ ನಿಗದಿತ ದಿನಾಂಕಗಳನ್ನುಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಟೀಮ್‌ ಮಂಗಳೂರು ತಂಡದ ಆಶ್ರಯದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ತಣ್ಣೀರುಬಾವಿ ಬೀಚ್‌ನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗಾಳಿಪಟ ಉತ್ಸವ ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ದೇಶ ವಿದೇಶಗಳಿಂದ ಬಹಳಷ್ಟು ಮಂದಿ ಭಾಗವಹಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಿದ್ದು, ನಾನು ಕೂಡ ಇಷ್ಟು ವೈವಿಧ್ಯಮಯ ಗಾಳಿಪಟಗಳನ್ನು ಇಲ್ಲೇ ನೋಡಿದ್ದು ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಬೋಧಿಸಿದರು.

ಈ ಬಾರಿ ಕೇರಳ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳ ಮತ್ತು ಇಂಡೋನೇಶ್ಯಾ, ಸ್ವೀಡನ್, ಯುರೋಪ್ ಸೇರಿ ನಾನಾ ದೇಶಗಳ ಗಾಳಿಪಟ ತಂಡಗಳು ಪಾಲ್ಗೊಂಡಿವೆ. ಇಟೆಲಿ ಮೂಲದವರೂ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಒಟ್ಟು 32 ಗಾಳಿಪಟ ಹಾರಿಸುವ ಪಟುಗಳು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವ ನೋಡಲು ಭಾರೀ ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಗರುಡನ ಮಾದರಿಯ ವಿಶೇಷ ರೀತಿಯ ಗಾಳಿಪಟ ಈ ಸಲದ ಆಕರ್ಷಣೆಗಳಲ್ಲೊಂದು. ಉಳಿದಂತೆ ಹುಲಿ, ಚಿರತೆ, ಮಿಲಿಟರಿ ಯೋಧ, ಜೀಪು, ಕಾರಿನ ಮಾದರಿಯ ಚಿತ್ರಗಳಿದ್ದು, ನಾನಾ ನಮೂನೆಯ ಪಟಗಳು ಗಾಳಿಯಲ್ಲಿ ತೇಲಾಡುತ್ತಿವೆ. ಕೇರಳ ಮತ್ತು ತೆಲಂಗಾಣದಿಂದ 22 ಕ್ಕೂ ಹೆಚ್ಚು ಭಾರತೀಯ ಗಾಳಿಪಟ ಹಾರಾಟಗಾರರು ಭಾಗವಹಿಸಿದ್ದರು.

ಮೂಲತಃ ಸ್ವೀಡನ್ ನಿವಾಸಿ, ಈಗ ಇಂಡೋನೇಶ್ಯಾದಲ್ಲಿ ನೆಲೆಸಿರುವ ಆಂಡ್ರಿ ಎಂಬವರಿದ್ದರು. ಅವರದ್ದು ಕೈಟ್ ಸ್ವೀಡನಿಂದ ಕಳಿಸಿಕೊಟ್ಟಿದ್ದು ಇಲ್ಲಿ ತಲುಪಿಲ್ಲವಂತೆ. ಹಾಗಾಗಿ ಸ್ವಲ್ಪ ನಿರಾಸೆಗೊಂಡಿದ್ದರು. ಯುರೋಪ್ ಖಂಡದ ಈಸ್ಟೋನಿಯಾ ಎಂಬ ಸಣ್ಣ ದೇಶದಿಂದ ಜಾನಾ ಎಂಬ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ಸೂಮ್ ಎಂಬ ಜೋಡಿ ಗಾಳಿಪಟದ ಜೊತೆಗೆ ಬಂದಿದ್ದರು. ಮಂಗಳೂರು ತುಂಬ ಲೈಕ್ ಆಗಿದೆ, ಇಲ್ಲಿನ ವೆದರ್ ಸೂಪರ್ ಇದೆ.  ಜನರ ಆತಿಥ್ಯವೂ ಒಳ್ಳೆದಿದ್ದು, ಊಟ, ತಿಂಡಿ ಖುಷಿ ಕೊಟ್ಟಿದೆ. ಜನರು ಪ್ರೀತಿ ತೋರಿಸಿದ್ದಾರೆ ಎಂದರು. ಅವರ ಗಾಳಿಪಟ ಟೆಡ್ಡಿ ಬೇರ್ ಆಗಿತ್ತು. ಪ್ರತಿ ವರ್ಷ ಇಂಥ ಉತ್ಸವ ಆಗೋದಿದ್ದರೆ, ಪ್ರತಿ ಬಾರಿಯೂ ಇಲ್ಲಿಗೆ ಬರುತ್ತೇವೆ ಎಂದಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 12 ರಿಂದ 16 ವರಗೆ ಕುಂಭ ಮಹೋತ್ಸವ

Next Post

ಮಂಗಳೂರು: ಶ್ರೀರಾಮನಿಗೆ ಅವಹೇಳನ ಮಾಡಿದ ಸಂತ ಜೆರೋಸಾ ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು

Related Posts

ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ 3ನೇ ವರ್ಷದ ಮೂಳೂರು-ಅಡ್ಡೂರು ಜೋಡುಕರೆ ಕಂಬಳ
ಕರಾವಳಿ

ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ 3ನೇ ವರ್ಷದ ಮೂಳೂರು-ಅಡ್ಡೂರು ಜೋಡುಕರೆ ಕಂಬಳ

March 27, 2026
13
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ
ಕರಾವಳಿ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
19
Next Post
ಮಂಗಳೂರು: ಶ್ರೀರಾಮನಿಗೆ ಅವಹೇಳನ ಮಾಡಿದ ಸಂತ ಜೆರೋಸಾ ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು

ಮಂಗಳೂರು: ಶ್ರೀರಾಮನಿಗೆ ಅವಹೇಳನ ಮಾಡಿದ ಸಂತ ಜೆರೋಸಾ ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ಅಮಾನತು

Discussion about this post

Recent News

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
45
ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

March 28, 2026
39
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

March 28, 2026
ಬೆಳ್ಳಂಬೆಳಗ್ಗೆ ಬುಲೆಟ್ ಬೈಕಿನಲ್ಲಿ ಧಕ್ಕೆಗೆ ತೆರಳುತ್ತಿದ್ದಾಗ ತೊಕ್ಜೊಟ್ಟು ಫ್ಲೈ ಓವರಲ್ಲಿ ರೌಡಿಶೀಟರ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಬೆಳ್ಳಂಬೆಳಗ್ಗೆ ಬುಲೆಟ್ ಬೈಕಿನಲ್ಲಿ ಧಕ್ಕೆಗೆ ತೆರಳುತ್ತಿದ್ದಾಗ ತೊಕ್ಜೊಟ್ಟು ಫ್ಲೈ ಓವರಲ್ಲಿ ರೌಡಿಶೀಟರ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

March 27, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d