ಕಳ್ಳತನವಾಗಿದ್ದ ಭಾರತೀಯ ಮಹಾರಾಜರ ನೆಕ್ಲೆಸ್ ಧರಿಸಿ ಅಂದ ಪ್ರದರ್ಶನ ಮಾಡಿದ್ದ ಅಮೆರಿಕನ್ ಯೂಟ್ಯೂಬರ್ಗೆ ಇದೀಗ ಹಿಡಿಶಾಪ ಹಾಕಲಾಗುತ್ತಿದೆ. ಕಾರಣ ಇತ್ತೀಚೆಗೆ ನಡೆದ ಸೆಲೆಬ್ರಿಟಿಗಳ ಫ್ಯಾಶನ್ ಲೋಕದ ಅಂದ ಪ್ರದರ್ಶನದ ಮೆಟ್ ಗಾಲಾದಲ್ಲಿ ಅವರು ಧರಿಸಿಕೊಂಡು ಬಂದಿದ್ದ ನೆಕ್ಲಸ್! ಇದರ ಅಸಲಿ ಕಥೆ ಹೀಗಿದೆ.
ಕಳ್ಳತನವಾಗಿದ್ದ ಭಾರತೀಯ ಮಹಾರಾಜರ ನೆಕ್ಲೆಸ್ ಧರಿಸಿ ಅಂದ ಪ್ರದರ್ಶನ ಮಾಡಿದ್ದ ವಿದೇಶಿ ಯೂಟ್ಯೂಬರ್ಗೆ ಇದೀಗ ಹಿಡಿಶಾಪ ಹಾಕಲಾಗುತ್ತಿದೆ. ಕಾರಣ ಇತ್ತೀಚೆಗೆ ನಡೆದ ಪ್ರಸಿದ್ಧ ಮೆಟ್ ಗಾಲಾದಲ್ಲಿ ಅಮೆರಿಕದ ಯೂಟ್ಯೂಬರ್ ಎಮ್ಮಾ ಚೇಂಬರ್ಲೀನ್ ಧರಿಸಿಕೊಂಡು ಬಂದಿದ್ದ ಈ ನೆಕ್ಲಸ್! ಎಮ್ಮಾ ಧರಿಸಿದ್ದ ಈ ನೆಕ್ಲೆಸ್ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗುತ್ತಿದೆ. ಹಾಗಾಗಿ ಜಾಲತಾಣದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು ಯೂಟ್ಯೂಬರ್ ಎಮ್ಮಾ ನಡೆ ಬಗ್ಗೆ ಹಲವರು ಛೀಮಾರಿ ಹಾಕುತ್ತಿದ್ದಾರೆ. ಅತ್ಯಂತ ದುಬಾರಿ ವೆಚ್ಚದಲ್ಲಿ ತಯಾರಾದ ಆಭರಣ ಇದಾಗಿದ್ದು ಇದರ ತಯಾರಿಕೆಗೆ ಇಂದಿನ ಲೆಕ್ಕದಲ್ಲಿ ಸುಮಾರು 30 ಮಿಲಿಯನ್ ಡಾಲರ್ ಅಂತೆ. ಪಟಿಯಾಲದ ಮಹಾರಾಜ ಯಾದವೀಂದ್ರ ಸಿಂಗ್ ಅವರು ಕೊನೆಯದಾಗಿ 1948 ರಲ್ಲಿ ಧರಿಸಿದ್ದರು. ಆದರೆ, ನಂತರ ನಿಗೂಢವಾಗಿ ಕಣ್ಮರೆಯಾಗಿತ್ತು.
ಅದಾದ ಬಳಿಕ 2022ರ ಮೆಟ್ ಗಾಲಾಕ್ಕೆ ಈ ಡೈಮಂಡ್ ನೆಕ್ಲೆಸ್ ಧರಿಸುವ ಮೂಲಕ ಎಮ್ಮಾ ಚೇಂಬರ್ಲೇನ್ ಗಮನ ಸೆಳೆದಿದ್ದರು. ಈ ವರ್ಷದ ಮೆಟ್ ಗಾಲಾದಲ್ಲಿ ಹಲವು ಪ್ರಸಿದ್ಧ ಸೆಲೆಬ್ರಿಟಿಗಳು ವಿನ್ಯಾಸ ಹಾಗೂ ವಿಭಿನ್ನ ಬಟ್ಟೆ ಧರಿಸಿ ಬಂದಿದ್ದರು. ಅದರಲ್ಲಿ ಎಮ್ಮಾ ಕೂಡ ಒಬ್ಬರು. 2,930 ವಜ್ರಗಳು ಮತ್ತು ಕೆಲವು ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲ್ಪಟ್ಟ ಹಾಗೂ ಐದು ಸಾಲುಗಳ ಪ್ಲಾಟಿನಂ ಚೈನ್ಗಳನ್ನು ಹೊಂದಿದ್ದ ನೆಕ್ಲೆಸ್ ಅನ್ನು 1928ರಲ್ಲಿಯೇ ತಯಾರಿಸಲಾಗಿದೆಯಂತೆ. ವಿಶ್ವದ ಅತ್ಯಂತ ದುಬಾರಿ ಬೆಲೆಯ ಡಿ-ಬೀರ್ಸ್ ವಜ್ರಗಳನ್ನು ಹೊಂದಿದ್ದ ಆಗಿನ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಅವರು ಅದನ್ನಿಟ್ಟುಕೊಂಡು ಈ ನೆಕ್ಲೆಸ್ ತಯಾರಿಸಲು ಕಾರ್ಟಿಯರ್ಗೆ (ಪ್ರಖ್ಯಾತ ವಿನ್ಯಾಸ ಸಂಸ್ಥೆ) ನೀಡಿದ್ದರು ಅನ್ನೋದು ಇತಿಹಾಸ. ಹಲವು ತಿರುವು ಹಾಗೂ ಆಯಾಮದ ಬಳಿಕ ಇತ್ತೀಚೆಗೆ ಕಾರ್ಟಿಯರ್ ಜ್ಯುವೆಲ್ಸ್ ಸಂಸ್ಥೆ ಹರಾಜು ಪ್ರಕ್ರಿಯೆಯಲ್ಲಿ ಇದನ್ನು ಖರೀದಿಸಿದೆಯಂತೆ. ಕಾರ್ಟಿಯರ್ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ಎಮ್ಮಾ ಈ ವಜ್ರಖಚಿತ ನೆಕ್ಲೆಸ್ ಮತ್ತು ಹೆಡ್‌ಬ್ಯಾಂಡ್ ಧರಿಸಿ 2022ರ ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದನ್ನು ಕಂಡು ಹಲವರು ಕೆಂಡ ಕಾರಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post