ಬೆಂಗಳೂರು: ಉದ್ಘಾಟನೆಯಾದ 2 ತಿಂಗಳಲ್ಲಿಯೇ ‘ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ’ದ ಗ್ಯಾಲರಿ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನ ಹೆಎಚ್ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆ ಗಾಳಿಗೆ ಹೆಎಚ್ಎಸ್ ಆರ್ ಲೇಔಟ್ ನ ‘ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ’ದ ಗ್ಯಾಲರಿ ಕುಸಿದು ಬಿದ್ದಿದೆ. ಈ ಕ್ರೀಡಾಂಗಣವನ್ನು ಕಳೆದ ಮಾರ್ಚ್ 1ರಂದು ಸಿ.ಎಂ. ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ಕ್ರೀಡಾಂಗಣದ ಒಂದು ಗ್ಯಾಲರಿ ಮೇಲೆ ಮರ ಬಿದ್ದಿದ್ದು, ಮತ್ತೊಂದು ಗ್ಯಾಲರಿ ಸೀದಾ ಧರೆಗುರುಳಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು.
ಬಿಬಿಎಂಪಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣದ ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಮೇಲೂ ಕಬ್ಬಿಣದ ಸರಳುಗಳು ಬಿದ್ದಿದ್ದು, ಹೊಸದಾಗಿ ಹಾಕಲಾಗಿದ್ದ ಗ್ರಾನೇಟ್ ಗಳು ಕಿತ್ತು ಹೋಗಿವೆ.
Audience gallery of the newly inaugurated Atal Bihari Vajpayee playground belongs to BBMP at HSR Layout in Bengaluru has collapsed. @CMofKarnataka inaugurated playground in March this year.
Video & editing by @ashishhpendse@NewIndianXpress@Cloudnirad @BBMPCOMM pic.twitter.com/XW33sPFDLi
— TNIE Karnataka (@XpressBengaluru) May 9, 2022