• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೈಕ್​ನಲ್ಲೇ ದೇಶ-ವಿದೇಶ ಸುತ್ತಿ ನಾರಿ ಶಕ್ತಿ ಸಾಬೀತುಪಡಿಸಿದ್ದಾರೆ ಕಾಸರಗೋಡು ಮೂಲದ ಬೈಕ್ ರೈಡರ್ ಅಮೃತಾ ಜೋಷಿ.

Coastal Times by Coastal Times
August 11, 2022
in ರಾಷ್ಟ್ರೀಯ ಸುದ್ದಿ
ಬೈಕ್​ನಲ್ಲೇ ದೇಶ-ವಿದೇಶ ಸುತ್ತಿ ನಾರಿ ಶಕ್ತಿ ಸಾಬೀತುಪಡಿಸಿದ್ದಾರೆ ಕಾಸರಗೋಡು ಮೂಲದ ಬೈಕ್ ರೈಡರ್ ಅಮೃತಾ ಜೋಷಿ.
91
VIEWS
WhatsappTelegramShare on FacebookShare on Twitter

ಮಂಗಳೂರು: ಪ್ರಸ್ತುತ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಪ್ರತಿದಿನ ಯಾವುದಾದರೊಂದು ವಿಷಯಗಳ ಮೂಲಕ ಮಹಿಳಾ ಸಾಧಕಿಯರು ತಮ್ಮ ಪ್ರತಿಭೆ ಅನಾವರಣಗೊಳಿಸುತ್ತ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಂತೆ ಬೈಕ್​ನಲ್ಲೇ ದೇಶ-ವಿದೇಶ ಸುತ್ತಿ ನಾರಿ ಶಕ್ತಿ ಸಾಬೀತುಪಡಿಸಿದ್ದಾರೆ ಕಾಸರಗೋಡು ಮೂಲದ ಯುವತಿ ಅಮೃತಾ ಜೋಷಿ. ಹೌದು, 21 ವರ್ಷ ವಯಸ್ಸಿನ ಅಮೃತಾ ಜೋಷಿ ಬೈಕ್ ಓಡಿಸುವುದನ್ನು ಕಲಿತು ಅದರಲ್ಲೇ ದೇಶ-ವಿದೇಶ ಸುತ್ತಿ ಬರುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ಕೇರಳ ಸೇರಿದಂತೆ ಇಡೀ ದೇಶಕ್ಕೆ ಮಾದರಿಯಾಗಿದೆ.  ಇವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಮಂಗಳೂರಿನ ಕೆನರಾ ಹೈಸ್ಕೂಲ್​ನ ಹಳೇ ವಿದ್ಯಾರ್ಥಿನಿ ಕೂಡ ಹೌದು. ಇವರು ತಮ್ಮ ತಂದೆಯ ಇಚ್ಛೆಯಂತೆ ಬೈಕ್ ರೈಡಿಂಗ್​ಅನ್ನು ಹವ್ಯಾಸ ಮಾಡಿಕೊಂಡಿದ್ದಾರೆ.  ನಾಲ್ಕು ತಿಂಗಳ ಹಿಂದೆ ಕೇರಳದ ಕ್ಯಾಲಿಕಟ್​ನಿಂದ ತಮ್ಮ ಪಯಣ ಆರಂಭಿಸಿದ್ದರು. ಇದೀಗ 23 ಸಾವಿರ ಕಿ.ಮೀ ಸುತ್ತಿ ಬಂದು ತಮ್ಮ ಪಯಣವನ್ನು ಕೊನೆಗೊಳಿಸಿದ್ದಾರೆ. ಇಂದು ಮಂಗಳೂರಿನಲ್ಲಿ ತಾವು ಕಲಿತ ಡೊಂಗರಕೇರಿಯ ಕೆನರಾ ಹೈಸ್ಕೂಲ್​ಗೆ ಭೇಟಿ ನೀಡಿದ್ದು, ಅವರನ್ನು ಗೌರವಯುತವಾಗಿ ಸ್ವಾಗತಿಸಲಾಯಿತು.  ಅಮೃತಾ ಜೋಷಿ ಫೆ.4 ರಂದು ಕ್ಯಾಲಿಕಟ್​ನಿಂದ ಪಯಣ ಆರಂಭಿಸಿದ್ದರು. ತಮಿಳುನಾಡು, ಆಂಧ್ರಪ್ರದೇಶ ಸುತ್ತಿದ ಬಳಿಕ ಈಶಾನ್ಯ ದೇಶಗಳಿಗೆ ತಲುಪಿದ್ದೆರು. ಚೀನಾ ಬಾರ್ಡರ್ ತವಾಂಗ್​ನಲ್ಲಿ ಪಯಣ ಕೊನೆಗೊಳಿಸುವ ಗುರಿ ಹೊಂದಿದ್ದ ಅಮೃತಾ ಅಲ್ಲಿ ತಲುಪಿದ ಎಪ್ರಿಲ್ 8ರಂದು ಮತ್ತೆ ಪಯಣ ಮುಂದುವರಿಸುವ ನಿರ್ಧಾರ ಮಾಡಿದರು. ಅಲ್ಲಿಂದ ನೇಪಾಳ, ಮ್ಯಾನ್ಮಾರ್​ ದೇಶಗಳಿಗೂ ತೆರಳಿದ್ದರು.

ಪಯಣದಲ್ಲಿ ಅಪಘಾತ: ಅಲ್ಲಿಂದ ವಾಪಸ್ ಬರುವ ವೇಳೆ ಉತ್ತರಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾದರು. ಆ ವೇಳೆ ಕೆಟಿಎಂ ಬೈಕ್ ಸಂಪೂರ್ಣ ಹಾಳಾಗಿದೆ. ಅಮೃತಾ ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯಂತೆ ಒಂದು ತಿಂಗಳು ಊರಿಗೆ ಬಂದು ವಿಶ್ರಾಂತಿ ತೆಗೆದುಕೊಂಡ ನಂತರ ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಬೇರೊಂದು ಬೈಕ್ ತೆಗೆದುಕೊಂಡು ಹೋಗಿ ಅಲ್ಲಿಂದ ಪಯಣ ಮುಂದುವರಿಸಿದ್ದರು. ಲಡಾಖ್​, ಪಂಜಾಬ್, ರಾಜಸ್ಥಾನ ಜರ್ನಿ ಮುಗಿಸಿ ಇಂದು ಕರ್ನಾಟಕಕ್ಕೆ ಬಂದಿರುವ ಅಮೃತಾ ಅವರು ಇಂದೇ ಕೇರಳ ತಲುಪಿ ಪಯಣ ಕೊನೆಗೊಳಿಸಲಿದ್ದಾರೆ.

ಕೆಟಿಎಂ, ಬಿಎಂಡಬ್ಲ್ಯು ಬೈಕ್​​ನಲ್ಲಿ ರೈಡ್: ಅಮೃತಾ ಅವರು ತಮ್ಮ ಪಯಣವನ್ನು ಕ್ಯಾಲಿಕೆಟ್​ನಿಂದ ಆರಂಭಿಸಿದ್ದು ಕೆಟಿಎಂ ಬೈಕ್​ನಲ್ಲಿ. ಈ ಬೈಕ್ ಉತ್ತರ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ನುಜ್ಜುಗುಜ್ಜಾಗಿತ್ತು. ಬಳಿಕ ಹುಟ್ಟೂರಿಗೆ ಬಂದು ವಿಶ್ರಾಂತಿ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಮೃತಾ ತಮ್ಮ ಭಾವಿ ಪತಿ ನೀಡಿದ ಬಿಎಂಡಬ್ಲ್ಯು ಬೈಕನ್ನು ಅಪಘಾತ ನಡೆದ ಸ್ಥಳಕ್ಕೆ ತಲುಪಿಸಿ ಅಲ್ಲಿಂದ ಮತ್ತೆ ಪಯಣ ಆರಂಭಿಸಿದ್ದರು. ಪ್ರಾದೇಶಿಕ ಸಮಾನತೆ ಮತ್ತು ದೇಶದ ಸೈನಿಕರಿಗೆ ಗೌರವ ಕೊಡುವ ಉದ್ದೇಶದಿಂದ ಅಮೃತಾ ಈ ಪ್ರಯಾಣವನ್ನು ಮಾಡಿದ್ದಾರೆ. ಪಯಣದುದ್ದಕ್ಕೂ ಜನರು ಮನೆ ಮಗಳಂತೆ ಪ್ರೀತಿಯನ್ನು ತೋರ್ಪಡಿಸಿದ್ದರು. ಈ ಪಯಣ ನನಗೆ ಬಹಳ ಖುಷಿ ನೀಡಿದೆ ಎಂದು ಅಮೃತಾ ತಮ್ಮ ಅಭಿಪ್ರಾಯವನ್ನು  ಹಂಚಿಕೊಂಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು; ಒಂದೇ ಕುಟುಂಬದ ನಾಲ್ವರ ಹಂತಕ ಪ್ರವೀಣ್‌ಗೆ ಬಿಡುಗಡೆ ಭಾಗ್ಯ ಬೇಡ ಎಂದು ಪತ್ನಿ ಮನವಿ!

Next Post

ತೌಳವ ನೆಲದ ವೀರರಾಣಿ ಅಬ್ಬಕ್ಕ: ಸ್ವಾತಂತ್ರ್ಯ ಸ್ವಾಭಿಮಾನದ ‘ಅಪ್ಪೆ’ ಕುರಿತು ಉಪನ್ಯಾಸ ಕಾರ್ಯಕ್ರಮ

Related Posts

ಬ್ರಿಕ್ಸ್ 2026 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮನ; ಇಂದು ಪ್ರಧಾನಿ ಮೋದಿ ಜೊತೆ ಸಭೆ
ರಾಷ್ಟ್ರೀಯ ಸುದ್ದಿ

ಬ್ರಿಕ್ಸ್ 2026 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮನ; ಇಂದು ಪ್ರಧಾನಿ ಮೋದಿ ಜೊತೆ ಸಭೆ

September 11, 2026
12
ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ
ರಾಷ್ಟ್ರೀಯ ಸುದ್ದಿ

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

September 5, 2026
98
Next Post
ತೌಳವ ನೆಲದ ವೀರರಾಣಿ ಅಬ್ಬಕ್ಕ: ಸ್ವಾತಂತ್ರ್ಯ ಸ್ವಾಭಿಮಾನದ ‘ಅಪ್ಪೆ’ ಕುರಿತು ಉಪನ್ಯಾಸ ಕಾರ್ಯಕ್ರಮ

ತೌಳವ ನೆಲದ ವೀರರಾಣಿ ಅಬ್ಬಕ್ಕ: ಸ್ವಾತಂತ್ರ್ಯ ಸ್ವಾಭಿಮಾನದ ‘ಅಪ್ಪೆ’ ಕುರಿತು ಉಪನ್ಯಾಸ ಕಾರ್ಯಕ್ರಮ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d