ಮಂಗಳೂರು, ಆಗಸ್ಟ್ 11: ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ಇತರ ದುರ್ಬಲ ವರ್ಗದ ಜನರಿಗೆ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಡೆಯಲು ಕರ್ನಾಟಕದಲ್ಲಿ ಇನ್ನೂ ವಾರ್ಷಿಕ ಕುಟುಂಬ ಆದಾಯ ರೂ.32,000 ಎಂಬ ಅತ್ಯಂತ ಕಡಿಮೆ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.
ಮಂಗಳೂರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಕಲ್ಯಾಣ ಯೋಜನೆಗಳು ಜನರ ಹಕ್ಕಾಗಿರಬೇಕೇ ಹೊರತು ದಾಖಲೆಗಳ ಹೆಸರಿನಲ್ಲಿ ಜನರನ್ನು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸುವ ವ್ಯವಸ್ಥೆಯಾಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.
ರೂ.32,000 ಆದಾಯ ಮಿತಿ ಇಂದಿನ ವಾಸ್ತವಿಕತೆಗೆ ಸಂಪೂರ್ಣ ವಿರುದ್ಧ : ರೂ.32,000 ವಾರ್ಷಿಕ ಆದಾಯ ಮಿತಿ ಇಂದಿನ ಜೀವನ ವೆಚ್ಚದ ಪರಿಸ್ಥಿತಿಯಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಒಂದು ಕುಟುಂಬದ ವಾರ್ಷಿಕ ಆದಾಯ ರೂ.32,000 ಮೀರಿದರೆ ಅದು ಬಡತನದಿಂದ ಹೊರಬಂದಿದೆ ಎಂದು ಪರಿಗಣಿಸುವುದು ವಾಸ್ತವಿಕತೆಯಿಂದ ದೂರವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ದಿನಗೂಲಿ ಕಾರ್ಮಿಕರ ಆದಾಯವೇ ವರ್ಷಕ್ಕೆ 5-6 ಲಕ್ಷವನ್ನು ಮೀರಬಹುದು. ಆದರೂ ವಯೋವೃದ್ಧರು, ವಿಧವೆಯರು ಮತ್ತು ಅಂಗವಿಕಲರಂತಹ ದುರ್ಬಲ ವ್ಯಕ್ತಿಗಳಿಗೆ ರೂ.32,000 ಎಂಬ ಹಳೆಯ ಆದಾಯ ಮಿತಿಯನ್ನು ಅನ್ವಯಿಸುವುದು ಅಮಾನವೀಯ ಎಂದು ಅಬ್ದುಲ್ ಮಜೀದ್ ಹೇಳಿದರು.
ಇತರ ರಾಜ್ಯಗಳಿಗಿಂತ ಕರ್ನಾಟಕದ ಮಾನದಂಡ ಅತ್ಯಂತ ಕಡಿಮೆ : ದೇಶದ ವಿವಿಧ ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚಿನ ಆದಾಯ ಮಿತಿಗಳನ್ನು ಅಥವಾ ಕುಟುಂಬದ ಆರ್ಥಿಕ ಸ್ಥಿತಿಯನ್ನು ಆಧರಿಸಿದ ಮಾನದಂಡಗಳನ್ನು ಬಳಸಲಾಗುತ್ತಿದೆ.
• ತೆಲಂಗಾಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ರೂ.4.50 ಲಕ್ಷ ಮತ್ತು ನಗರ ಪ್ರದೇಶದಲ್ಲಿ ರೂ.2 ಲಕ್ಷದವರೆಗೆ ಆದಾಯ ಮಾನದಂಡವನ್ನು ಬಳಸಲಾಗುತ್ತಿದೆ.
• ಅಂತರ ಪ್ರದೇಶಗಳಲ್ಲಿಯೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಕ್ರಮವಾಗಿ ಹೆಚ್ಚಿನ ಆದಾಯ ಮಿತಿಗಳನ್ನು ಹೊಂದಿರುವ ಸಾಮಾಜಿಕ ಭದ್ರತಾ ಅರ್ಹತಾ ವ್ಯವಸ್ಥೆ ಜಾರಿಯಲ್ಲಿದೆ.
• ಪರಿಶೀಲನೆಯನ್ನು ಇಚ್ಛಿಸಿದಲ್ಲಿ ಫಲ ಆದಾಯದ ವ್ಯಾಪ್ತಿಯಲ್ಲಿ ರೂ.3 ಲಕ್ಷದವರೆಗೆ ವಾರ್ಷಿಕ ಕುಟುಂಬ ಆದಾಯದ ಮಾನದಂಡವನ್ನು ಬದಲಾಯಿಸಬಹುದು.
ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕೇವಲ ರೂ.32,000 ಎಂಬ ಆದಾಯ ಮಿತಿಯನ್ನು ಮುಂದುವರಿಸುವುದು ಬಡವರನ್ನು ಸಾಮಾಜಿಕ ಭದ್ರತೆಯಿಂದ ಹೊರಗಿಡುವಂತಾಗಿದೆ ಎಂದು ಅವರು ಹೇಳಿದರು.
ಒಂದು ಕಡೆ BPL ಮಿತಿ ಹೆಚ್ಚಳ, ಮತ್ತೊಂದೆಡೆ ಈ ಪಿಂಚಣಿಗೆ ರೂ.32,000! : ಕರ್ನಾಟಕ ಸರ್ಕಾರ ಪ್ರಸ್ತುತ BPL/ಅರ್ಹತಾ ಕುಟುಂಬಗಳಿಗೆ ದಿನದ ವಾರ್ಷಿಕ ಆದಾಯ ರೂ.1.20 ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ನಿಗದಿಪಡಿಸಿ, ಮಹತ್ವದ ಬಡತನ ರೇಖೆಯನ್ನು ಗುರುತಿಸಿದೆ. ಆ ಅರ್ಹರಿಗೆ ಮಿತಿಯು, ಪಿಂಚಣಿ ವಿತರಣೆ ಮತ್ತು ಪ್ರಮಾಣಪತ್ರಗಳು ಸರ್ಕಾರದ ಮುಂದೆ ಇದೆ. ಆದರೆ ಇದೇ ಸರ್ಕಾರವು ವಯೋವೃದ್ಧರು ಮತ್ತು ಅಂಗವಿಕಲರಿಗೆ ನೀಡುವ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕೇವಲ ರೂ.32,000 ಆದಾಯ ಮಿತಿಯನ್ನು ಮುಂದುವರಿಸುವುದು ಯಾವ ನ್ಯಾಯ?
ಒಂದು ಸರ್ಕಾರದ ವಿವಿಧ ಯೋಜನೆಗಳಿಗೆ ವಿವಿಧ ವಿಭಿನ್ನ ಮಾನದಂಡಗಳಿರುವುದು ಸರಿಯಲ್ಲ.
BPL ಕಾರ್ಡ್‌ನ್ನೇ ಬಡತನದ ಅರ್ಹತಾ ಮಾನದಂಡವನ್ನಾಗಿ ಮಾಡಬೇಕು.
ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳಿವೆ:
• BPL ಕುಟುಂಬಗಳನ್ನು ಗುರುತಿಸಲು ಸರ್ಕಾರ ನಿಗದಿಪಡಿಸುವ ಆದಾಯ ಮಿತಿಯನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗೂ ಅನ್ವಯಿಸಬೇಕು.
• ಸರ್ಕಾರ BPL ಆದಾಯ ಮಿತಿಯನ್ನು ರೂ.3 ಲಕ್ಷಕ್ಕೆ ಹೆಚ್ಚಿಸಿದೆ. ಆ ಅರ್ಹತೆಗೆ ವಾರ್ಷಿಕ ಕುಟುಂಬ ಆದಾಯ ಹೊಂದಿರುವ ಅರ್ಹ BPL ಕುಟುಂಬಗಳನ್ನು ವಿದ್ಯಾವಂತ, ವಿಧವಾ ಮತ್ತು ಅಂಗವಿಕಲರ ಸಾಮಾಜಿಕ ಭದ್ರತಾ ಯೋಜನೆಗಳಿಂದ ಕೇವಲ ಆದಾಯ ಮಿತಿ ಕಾರಣಕ್ಕೆ ಹೊರಗಿಡಬಾರದು. ಇದರಿಂದ ಪ್ರತಿ ಯೋಜನೆಗೂ ಪ್ರತ್ಯೇಕ ಆದಾಯ ಪ್ರಮಾಣಪತ್ರ ಪಡೆಯುವ ಅನಗತ್ಯ ವ್ಯವಸ್ಥೆಯನ್ನು ತಪ್ಪಿಸಬಹುದು.
• ಈಗಾಗಲೇ ಫಲಾನುಭವಿಗಳಿಂದ ದಾಖಲೆ ಕೇಳುವುದು ನಿಲ್ಲಿಸಬೇಕು.
• ಈಗಾಗಲೇ ಸರ್ಕಾರದ ದಾಖಲೆಗಳಲ್ಲಿ ಫಲಾನುಭವಿಗಳಾಗಿ ಗುರುತಿಸಲ್ಪಟ್ಟಿರುವ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಂದ ಮತ್ತೆ ಮತ್ತೆ ಆದಾಯ ಪ್ರಮಾಣಪತ್ರ, ಅರ್ಜಿ ಹಾಗೂ ಇತರ ದಾಖಲೆಗಳನ್ನು ಸಲ್ಲಿಸುವಂತೆ ಒತ್ತಾಯಿಸುವುದು ಅನಗತ್ಯ ಕಿರುಕುಳವಾಗಿದೆ.
• ಸರ್ಕಾರದ ವಿವಿಧ ಇಲಾಖೆಗಳಲ್ಲೇ ಆಧಾರ್, ರೇಷನ್ ಕಾರ್ಡ್, ಆದಾಯ, ಕುಟುಂಬ ಹಾಗೂ ಇತರ ದಾಖಲೆಗಳು ಲಭ್ಯವಿರುವಾಗ, ಅದೇ ದಾಖಲೆಗಳನ್ನು ಫಲಾನುಭವಿಗಳಿಂದ ಪುನಃ ಕೇಳುವುದು ಡಿಜಿಟಲ್ ಆಡಳಿತದ ಉದ್ದೇಶಕ್ಕೇ ವಿರುದ್ಧವಾಗಿದೆ.
ಅರ್ಹ ಫಲಾನುಭವಿಗಳನ್ನು ಹೊರಗಿಡುವ ಬದಲು ಸರ್ಕಾರ ತನ್ನಲ್ಲಿರುವ ದಾಖಲೆಗಳ ಮೂಲಕ ಅರ್ಹತೆಯನ್ನು ಪರಿಶೀಲಿಸಬೇಕು ಎಂದು ಅಬ್ದುಲ್ ಮಜೀದ್ ಒತ್ತಾಯಿಸಿದರು.
SDPIಯ ಪ್ರಮುಖ ಬೇಡಿಕೆಗಳು:
- ಸಾಮಾಜಿಕ ಭದ್ರತಾ ಯೋಜನೆಗಳ ಈಗಿರುವ ರೂ.32,000 ವಾರ್ಷಿಕ ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಬೇಕು.
- BPL ಆದಾಯ ಮಿತಿಯನ್ನು ರೂ.3 ಲಕ್ಷಕ್ಕೆ ಹೆಚ್ಚಿಸಿ, ಅದನ್ನೇ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಸಾಮಾಜಿಕ ಭದ್ರತಾ ಯೋಜನೆಗಳ ಏಕೀಕೃತ ಆರ್ಥಿಕ ಅರ್ಹತಾ ಮಾನದಂಡವನ್ನಾಗಿ ಮಾಡಬೇಕು.
- ಈಗಾಗಲೇ ಫಲಾನುಭವಿಗಳಾಗಿ ಗುರುತಿಸಲ್ಪಟ್ಟಿರುವವರಿಂದ ಮರುಮರು ದಾಖಲೆಗಳನ್ನು ಕೇಳುವುದನ್ನು ತಕ್ಷಣ ನಿಲ್ಲಿಸಬೇಕು.
- ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ದಾಖಲೆಗಳನ್ನು ಪರಸ್ಪರ ಸಂಯೋಜಿಸಿ “No Re-documentation” ವ್ಯವಸ್ಥೆ ಜಾರಿಗೆ ತರಬೇಕು.
- ಯಾವುದೇ ಫಲಾನುಭವಿಯ ಪಿಂಚಣಿಯನ್ನು ಸ್ಥಗಿತಗೊಳಿಸುವ ಮೊದಲು ಕಡ್ಡಾಯವಾಗಿ ನೋಟಿಸ್, ಕಾರಣ ಕೇಳುವ ಅವಕಾಶ ಮತ್ತು ಮೇಲ್ಮನವಿ ವ್ಯವಸ್ಥೆ ಕಲ್ಪಿಸಬೇಕು.
- ವಯೋವೃದ್ಧರು, ವಿಧವೆಯರು ಮತ್ತು ಅಂಗವಿಕಲರನ್ನು ದಾಖಲೆಗಳ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದನ್ನು ನಿಲ್ಲಿಸಬೇಕು.
- ಸಾಮಾಜಿಕ ಭದ್ರತಾ ಯೋಜನೆಗಳ ಮೊತ್ತವನ್ನು ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಪರಿಷ್ಕರಿಸಬೇಕು.
- ರಾಜ್ಯದಲ್ಲಿ “ಒಂದು ಕುಟುಂಬ – ಒಂದು ಆದಾಯ ಮಾನದಂಡ – ಒಂದು ಅರ್ಹತಾ ವ್ಯವಸ್ಥೆ” ಎಂಬ ಸರಳ ಮತ್ತು ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು.
Discover more from Coastal Times Kannada
Subscribe to get the latest posts sent to your email.







Discussion about this post