• About us
  • Contact us
  • Disclaimer
Friday, September 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ

Coastal Times by Coastal Times
September 25, 2026
in ಕರಾವಳಿ
ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ
11
VIEWS
WhatsappTelegramShare on FacebookShare on Twitter

ಮಂಗಳೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಜಾನಪದ ವೀರ ಕ್ರೀಡೆ ಕಂಬಳದ ಗತ್ತು – ಗಾಂಭೀರ್ಯ ಅನಾವರಣಗೊಳ್ಳಲು ವೇದಿಕೆ ಸಜ್ಜಾಗಿದೆ. ಇದೇ ಬರುವ ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಭರ್ಜರಿ ಕಂಬಳ ಕೂಟ ಆಯೋಜನೆಗೊಳ್ಳಲಿದ್ದು, ಇದಕ್ಕಾಗಿ ಕರಾವಳಿ ಭಾಗದ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕೋಣಗಳ ಯಜಮಾನರೊಂದಿಗೆ ಮೈಸೂರು ಜಿಲ್ಲಾಡಳಿತದ ನಿಯೋಗವು ಮಹತ್ವದ ಸಮಾಲೋಚನೆ ನಡೆಸಿ ಅಧಿಕೃತ ಆಹ್ವಾನ ನೀಡಿದೆ. ಕರಾವಳಿಯಿಂದ ಸುಮಾರು 150 ರಿಂದ 160 ಜೊತೆ ಆಯ್ದ ಪ್ರಸಿದ್ಧ ಕೋಣಗಳು ಮೈಸೂರು ದಸರಾ ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

20 ಎಕರೆ ಜಾಗ, 147 ಮೀಟರ್ ಉದ್ದದ ‘ವಿಜಯ ದಶಮಿ’ ಕರೆ ಸಜ್ಜು: ಮೈಸೂರಿನ ರಿಂಗ್ ರೋಡ್ ವ್ಯಾಪ್ತಿಯ ಸುಮಾರು 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಂಬಳದ ಕರೆಯ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಜಿಲ್ಲಾಡಳಿತದ ತೀರ್ಮಾನದಂತೆ ಈ ಕರೆಗೆ ‘ವಿಜಯ ದಶಮಿ’ ಎಂದು ನಾಮಕರಣ ಮಾಡಲಾಗಿದೆ. ಕರೆಯ ಒಟ್ಟು ಉದ್ದ 147 ಮೀಟರ್ ಆಗಿದ್ದು, ಓಟದ ಅಂತರ 140 ಮೀಟರ್ ಇರಲಿದೆ. ಕರೆಯ ಗುಣಮಟ್ಟ ಹಾಗೂ ಕೋಣಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 15ರಂದೇ 5 ಜೊತೆ ಕೋಣಗಳನ್ನು ಕರೆದೊಯ್ದು ಪ್ರಾಯೋಗಿಕ ಓಟ (ಟ್ರಯಲ್) ನಡೆಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಕೋಣಗಳ ಪ್ರಯಾಣಕ್ಕೆ ವಿಶೇಷ ವ್ಯವಸ್ಥೆ: ಕೋಣಗಳನ್ನು ಕರಾವಳಿಯಿಂದ ಮೈಸೂರಿಗೆ ಸುರಕ್ಷಿತವಾಗಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅ. 16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೋಣಗಳೊಂದಿಗೆ ಪ್ರಯಾಣ ಆರಂಭಿಸಿ, ಮಡಿಕೇರಿಯಲ್ಲಿ ವಿರಾಮ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಸಂಜೆ 4.30ರ ವೇಳೆಗೆ ಮೈಸೂರಿಗೆ ಪ್ರಯಾಣ ಮುಂದುವರಿಸಿ ರಾತ್ರಿ 9 ಗಂಟೆಯ ವೇಳೆಗೆ ತಲುಪುವಂತೆ ಯೋಜಿಸಲಾಗಿದೆ. ಮರುದಿನ ಅಂದರೆ ಅ. 17ರಂದು ಕೋಣಗಳಿಗೆ ಸಂಪೂರ್ಣ ವಿರಾಮ ದೊರೆಯಲಿದ್ದು, ಅ.18ರಂದು ಬೆಳಗ್ಗೆ ಕಂಬಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ.

ಅ. 18-19ರಂದು ಕಂಬಳ: ಅಕ್ಟೋಬರ್ 18ರಂದು ಬೆಳಿಗ್ಗೆ ಉದ್ಘಾಟನೆಯೊಂದಿಗೆ ಕಂಬಳ ಆರಂಭವಾಗಲಿದ್ದು,‌ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಅಕ್ಟೋಬರ್ 19ರ ತಡರಾತ್ರಿ 12 ಗಂಟೆಯೊಳಗೆ ಬಹುಮಾನ ವಿತರಣೆಯೊಂದಿಗೆ ಕಂಬಳ ಪೂರ್ಣಗೊಳ್ಳಲಿದೆ.

ಕೋಣಗಳ ಮಾಲಕರಿಗೆ ಬಹುಮಾನ ಹೆಚ್ಚಳ: ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲಕರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲು ಈಗಾಗಲೇ ನಿರ್ಧರಿಸಲಾಗಿದೆ. ದೊಡ್ಡ ಜೋಡಿ ಕೋಣಗಳಿಗೆ 65 ಸಾವಿರ ರೂ. ಹಾಗೂ ಸಣ್ಣ ಜೋಡಿ ಕೋಣಗಳಿಗೆ 50 ಸಾವಿರ ರೂ. ನೀಡುವ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಮಾಲೀಕರ ಬೇಡಿಕೆಯ ಹಿನ್ನೆಲೆಯಲ್ಲಿ ಬಹುಮಾನ ಹಾಗೂ ಪದಕಗಳ ಮೊತ್ತವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಸಕ್ತ ಸೀನಿಯರ್ ವಿಭಾಗದಲ್ಲಿ ಪ್ರಥಮ 16 ಗ್ರಾಂ ದ್ವಿತೀಯ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತಿತ್ತು. ಇದೀಗ ಕಂಬಳ ಮಾಲಕರು ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ತಲಾ 8 ಗ್ರಾಂ ಚಿನ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪ್ರಥಮ 8 ಗ್ರಾಂ ನೀಡುತ್ತಿದ್ದು, ಅದನ್ನು 16 ಗ್ರಾಂಗೆ ಹೆಚ್ಚಿಸಲು ದ್ವಿತೀಯ 5 ಗ್ರಾಂ ಚಿನ್ನವನ್ನೂ ಹೆಚ್ಚಳ ಮಾಡುವ ಜತೆಗೆ ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ಚಿನ್ನ ನೀಡಿ ಗೌರವಿಸುವಂತೆ ಕೋರಿದ್ದಾರೆ. ಈ ಬಗ್ಗೆ ಮೈಸೂರು ದಸರಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಅಶೋಕ್ ರೈ ತಿಳಿಸಿದರು.

160 ಜೊತೆ ಆಯ್ದ ಕೋಣಗಳು ಭಾಗಿ, ಪ್ರೋತ್ಸಾಹಧನ ಹೆಚ್ಚಳಕ್ಕೆ ಮನವಿ: ಈ ಕಂಬಳದಲ್ಲಿ ಕೇವಲ ಸೀನಿಯರ್ ಹಾಗೂ ಉತ್ತಮ ಟೈಮಿಂಗ್ಸ್ ಹೊಂದಿರುವ ಅರ್ಹ 150 ರಿಂದ 160 ಜೊತೆ ಕೋಣಗಳನ್ನು ಮಾತ್ರ ಉಪ ಸಮಿತಿಯ ಪರಿಶೀಲನೆ ನಂತರ ಕಳುಹಿಸಿಕೊಡಲಾಗುತ್ತದೆ. ಭಾಗವಹಿಸುವ ದೊಡ್ಡ ಜೊತೆ ಕೋಣಗಳಿಗೆ ₹65,000 ಹಾಗೂ ಸಣ್ಣ ಜೊತೆ ಕೋಣಗಳಿಗೆ ₹50,000 ಸಾರಿಗೆ ಭತ್ಯೆಯನ್ನು ಸರ್ಕಾರ ನಿಗದಿಪಡಿಸಿದೆ.

ಉಚಿತ ಪ್ರವೇಶ, 3 ಬ್ಯಾಚ್‌ಗಳಲ್ಲಿ ವೀಕ್ಷಣೆಗೆ ಪಾಸ್: ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪಾಸ್ ಇಲ್ಲದ ಸುಮಾರು 5 ಸಾವಿರ ಜನರಿಗೆ ಮುಕ್ತವಾಗಿ ನಿಂತು ನೋಡಲು ಪ್ರತ್ಯೇಕ ಬಯಲು ವಲಯ ನಿರ್ಮಿಸಲಾಗಿದೆ. ಗ್ಯಾಲರಿಯಲ್ಲಿ ಒಂದೇ ಬಾರಿಗೆ 15,000 ಜನರು ಕುಳಿತು ವೀಕ್ಷಿಸಲು ಸುಸಜ್ಜಿತ ಆಸನ ವ್ಯವಸ್ಥೆ ಇರಲಿದ್ದು, ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ದಿನವೊಂದಕ್ಕೆ 3 ಬ್ಯಾಚ್‌ಗಳಲ್ಲಿ ಉಚಿತ ಪಾಸ್ ನೀಡಲಾಗುತ್ತದೆ. ಕೋಣಗಳನ್ನು ಕಟ್ಟುವ ಜಾಗದಲ್ಲಿ ಕುಟುಂಬ ಸಮೇತ ಬರುವ ಪ್ರವಾಸಿಗರು ಕೋಣಗಳೊಂದಿಗೆ ಸೆಲ್ಫಿ ಮತ್ತು ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ದೇಶ-ವಿದೇಶಗಳ ಪ್ರವಾಸಿಗರು ಸೇರಿದಂತೆ ಒಟ್ಟು 25 ಲಕ್ಷಕ್ಕೂ ಹೆಚ್ಚು ಜನರು ಕಂಬಳ ವೀಕ್ಷಿಸುವ ಅಂದಾಜಿದೆ.

ಆಹಾರ ಮೇಳ ಮತ್ತು ಕರಾವಳಿ ಸಂಸ್ಕೃತಿ: ಸುಮಾರು 4 ರಿಂದ 5 ಎಕರೆ ಜಾಗದಲ್ಲಿ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಕರಾವಳಿಯ ಜಾನಪದ ಕಲೆ ಹಾಗೂ ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳು ಮೈಸೂರಿನ ಜನರಿಗೆ ಲಭ್ಯವಾಗಲಿವೆ. ಕಂಬಳದ ರನ್ನಿಂಗ್ ಕಮೆಂಟರಿಯು ಇತರ ಭಾಗದ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ಕನ್ನಡ ಮತ್ತು ತುಳು ಮಿಶ್ರಿತ ಆಕರ್ಷಕ ಶೈಲಿಯಲ್ಲಿ ಇರಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ರ‍್ಯಾಗಿಂಗ್: ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ, 9 ಮಂದಿ ವಿರುದ್ಧ ಎಫ್ಐಆರ್ ದಾಖಲು

Next Post

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

Related Posts

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ
ಕರಾವಳಿ

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

September 25, 2026
8
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!
ಕರಾವಳಿ

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

September 23, 2026
52
Next Post
ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

Discussion about this post

Recent News

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

September 25, 2026
8
ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ

ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ

September 25, 2026
11
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

September 25, 2026
ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ

ಅ. 18-19ಕ್ಕೆ ಮೈಸೂರು ದಸರಾದಲ್ಲಿ ಮೊಳಗಲಿದೆ ಕರಾವಳಿಯ ಕಂಬಳ ಕಹಳೆ ‘ವಿಜಯ ದಶಮಿ’ ಜೋಡುಕರೆ ಕಂಬಳ

September 25, 2026
ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ರ‍್ಯಾಗಿಂಗ್: ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ, 9 ಮಂದಿ ವಿರುದ್ಧ ಎಫ್ಐಆರ್ ದಾಖಲು

ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ರ‍್ಯಾಗಿಂಗ್: ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ, 9 ಮಂದಿ ವಿರುದ್ಧ ಎಫ್ಐಆರ್ ದಾಖಲು

September 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d