• About us
  • Contact us
  • Disclaimer
Tuesday, May 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಸೋದರನಿಂದ ಸಂಘ ಪರಿವಾರದ ಮುಖಂಡನಿಗೆ ಜೀವ ಬೆದರಿಕೆ

Coastal Times by Coastal Times
September 11, 2022
in ಕರಾವಳಿ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಸೋದರನಿಂದ ಸಂಘ ಪರಿವಾರದ ಮುಖಂಡನಿಗೆ ಜೀವ ಬೆದರಿಕೆ
95
VIEWS
WhatsappTelegramShare on FacebookShare on Twitter

ಸುಳ್ಯ: ಬೆಳ್ಳಾರೆ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶಫೀಕ್ ಸಹೋದರ ಶಾಫ್ರಿದ್ ಎಂಬಾತ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಸಂಘ ಪರಿವಾರದ ಸಂಘಟನೆಯೊಂದರ ಮುಖಂಡ ಬೆಳ್ಳಾರೆ ಗ್ರಾಮದ ಉಮಿಕ್ಕಳದ ಪ್ರಶಾಂತ್ ಪೂಂಜ ಅವರು ಬೆಳ್ಳಾರೆ ಠಾಣೆಗೆ ಶನಿವಾರ ರಾತ್ರಿ ದೂರು ನೀಡಿದ್ದಾರೆ. ‘ಶಾಫ್ರಿದ್ ಶನಿವಾರ ಸಂಜೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದಾನೆ. ಆತನನ್ನು ಠಾಣೆಗೆ ಕರೆಸಿ, ಇನ್ನು ಮುಂದೆ ನನ್ನ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ಳಾರೆಯ ದೇವಿ ಹೈಟ್ಸ್‌ ಲಾಡ್ಜ್‌ನ ವ್ಯವಸ್ಥಾಪಕರೂ ಆಗಿರುವ ಪ್ರಶಾಂತ್‌ ಪೂಂಜ ಒತ್ತಾಯಿಸಿದ್ದಾರೆ. ಪ್ರಶಾಂತ್‌ ಪೂಂಜಾ ದೂರು ನೀಡಲು ಬಂದಾಗ ಅವರ ಜೊತೆ ಸಂಘ ಪರಿವಾರದ ಸಂಘಟನೆಗಳ ನೂರಾರು ಕಾರ್ಯಕರ್ತರೂ ಠಾಣೆಯ ಬಳಿ ಜಮಾಯಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಸುಮಾರು ಒಂದು ತಿಂಗಳ ಕಾಲ ಬೆಳ್ಳಾರೆ ಪರಿಸರದಲ್ಲಿ ನಿತ್ಯ ಪೊಲೀಸ್‌ ಬಂದೋಬಸ್ತ್‌ ಮಾಡುವಂತಹ ಪರಿಸ್ಥಿತಿ ಇತ್ತು. ಪಟ್ಟಣವು ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ ಮತ್ತೆ ಅಹಿತಕರ ಘಟನೆ ಮರುಕಳಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ದೂರವಾಣಿ ಕರೆ ಮಾಡಿದ ಆರೋಪ ಹೊತ್ತಿರುವ ಶಾಫ್ರಿದ್‌, ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ನಡೆಸುತ್ತಿದ್ದ ಅಕ್ಷಯ ಫ್ರೆಷ್‌ ಫಾರ್ಮ್ ಚಿಕನ್‌ ಮಳಿಗೆಯಲ್ಲಿ ಈ ಹಿಂದೆ ಕೆಲಸಕ್ಕಿದ್ದ ಇಬ್ರಾಹಿಂ ಅವರ ಪುತ್ರ. ‘ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಆರೋಪಿ ಶಫೀಕ್‌ ಚಲನವಲನಗಳ ಬಗ್ಗೆ ಪ್ರಶಾಂತ್‌ ಪೂಂಜ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಶಾಂತ್ ಪೂಂಜ ಅವರಿಗೆ ಕರೆ ಮಾಡಿದ್ದ ಶಾಫ್ರಿದ್ ಈ ಬಗ್ಗೆ ಜಗಳವಾಡಿದ್ದ’ ಎಂದು ಸಂಘ ಪರಿವಾರದ ಮುಖಂಡರೊಬ್ಬರು ತಿಳಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ,ವೀರ ಸಾವರ್ಕರ್, ಹರ್ಷ, ಫೋಟೊ ಪ್ರದರ್ಶನ : ಕೇಸರಿ ಜೈಕಾರ, ಬಿಗಿ ಬಂದೋಬಸ್ತ್

Next Post

ಹಿಂದೂ ಕಾರ್ಯಕರ್ತನಿಗೆ ಜೀವಬೆದರಿಕೆ ಒಡ್ಡಿದ ಪ್ರವೀಣ್‌ ನೆಟ್ಟಾರ್ ಕೊಲೆ ಆರೋಪಿಯ ಸಹೋದರ ಸಫ್ರಿದ್ ಬಂಧನ

Related Posts

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.
ಕರಾವಳಿ

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
44
ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ
ಕರಾವಳಿ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
74
Next Post
ಹಿಂದೂ ಕಾರ್ಯಕರ್ತನಿಗೆ ಜೀವಬೆದರಿಕೆ ಒಡ್ಡಿದ ಪ್ರವೀಣ್‌ ನೆಟ್ಟಾರ್ ಕೊಲೆ ಆರೋಪಿಯ ಸಹೋದರ ಸಫ್ರಿದ್ ಬಂಧನ

ಹಿಂದೂ ಕಾರ್ಯಕರ್ತನಿಗೆ ಜೀವಬೆದರಿಕೆ ಒಡ್ಡಿದ ಪ್ರವೀಣ್‌ ನೆಟ್ಟಾರ್ ಕೊಲೆ ಆರೋಪಿಯ ಸಹೋದರ ಸಫ್ರಿದ್ ಬಂಧನ

Discussion about this post

Recent News

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

May 26, 2026
56
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
44
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

May 26, 2026
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d