ನಟ ಸಿದ್ದಾರ್ಥ್ ವಿರುದ್ಧ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ತಮ್ಮ ಟ್ವೀಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಬಹಿರಂಗ ಪತ್ರವನ್ನು ಬರೆದಿರುವ ನಟ ಸಿದ್ಧಾರ್ಥ್, ಕ್ಷಮೆ ಕೇಳಿದ್ದಾರೆ.
ತಮಿಳು ನಟ ಸಿದ್ಧಾರ್ಥ್ ಆಗಾಗ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕೂಡ ಮಾಜಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ ಪ್ರತಿಕ್ರಿಯಿಸಿದ ಸಿದ್ದಾರ್ಥ್ ಟ್ವೀಟ್ ಸದ್ಯ ವಿವಾದಕ್ಕೀಡಾಗಿತ್ತು. ತಮಿಳು ನಟನ ವಿರುದ್ಧ ಮಹಿಳಾ ಆಯೋಗ ಆಕ್ರೋಶ ವ್ಯಕ್ತ ಪಡಿಸಿತ್ತು. ಹಲವು ರಾಜಕಾರಣಿಗಳು, ನಟ ನಟಿಯರು ಸಿದ್ಧಾರ್ಥ್ ಹೇಳಿಕೆ ಬಗ್ಗೆ ಕಿಡಿ ಕಾರಿದ್ದರು. ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ನಟ ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ಕಳೆದೆರಡು ದಿನದಿಂದ ಭಾರೀ ಚರ್ಚೆ ಆಗುತ್ತಿದೆ. ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರ ಸಂಚಾರಕ್ಕೆ ರೈತರು ತಡೆ ಮಾಡಿದ ವಿಚಾರವಾಗಿ ಆಕ್ರೋಶಭರಿತ ಟ್ವೀಟ್ ಮಾಡಿದ್ದ ಸೈನಾ, ಭದ್ರತಾ ವೈಫಲ್ಯವನ್ನು ಟೀಕಿಸಿದ್ದರು. ಬಿಜೆಪಿ ವಿರೋಧಿಯಾಗಿರುವ ನಟ ಸಿದ್ಧಾರ್ಥ್ ಸೈನಾ ನೆಹ್ವಾಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿ, ”ಶಟಲ್’ ‘ಕಾಕ್’ ವಿಶ್ವ ಚಾಂಪಿಯನ್” ಎಂದು ದ್ವಂದ್ವಾರ್ಥ ಬರುವಂತೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ನಟ ಸಿದ್ದಾರ್ಥ್ ವಿರುದ್ಧ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ತಮ್ಮ ಟ್ವೀಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್‌ನಲ್ಲಿ ಸೈನಾಗೆ ಬಹಿರಂಗ ಪತ್ರವನ್ನು ಬರೆದಿರುವ ನಟ ಸಿದ್ಧಾರ್ಥ್, ಕ್ಷಮೆ ಕೇಳಿದ್ದಾರೆ.
ಸೈನಾಗೆ ನಟ ಸಿದ್ದಾರ್ಥ್ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ‘ಡಿಯರ್ ಸೈನಾ, ನನ್ನ ಒರಟು ಜೋಕ್ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ’ ಎಂದಿರುವ ನಟ ಸಿದ್ಧಾರ್ಥ್, ‘ನಿನ್ನ ಅಭಿಪ್ರಾಯಕ್ಕೆ ಪ್ರತಿಯಾಗಿ ನಾನು ಮಾಡಿದ ಒರಟು ಜೋಕ್ ಬಗ್ಗೆ ಕ್ಷಮೆ ಕೇಳುತ್ತೇನೆ. ನಿಮ್ಮೊಂದಿಗೆ ಅನೇಕ ವಿಷಯಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಟ್ವೀಟ್‌ಗೆ ಪ್ರತಿಯಾಗಿ ನಾನು ಮಾಡಿದ ಟ್ವೀಟ್ ಅದಕ್ಕೆ ಬಳಸಿದ ಪದಗಳು ಸೂಕ್ತವಾಗಿರಲಿಲ್ಲ. ಸ್ವತಃ ನಾನು ಅಷ್ಟು ಕೆಳಮಟ್ಟದವನಲ್ಲ ಎಂಬ ನಂಬಿಕೆ ನನಗೆ ಇದೆ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post