ಮಂಗಳೂರು, ಜೂನ್ 12: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ರಾಜಧಾನಿ ಅಬುಧಾಬಿಗೆ (Abu Dhabi) ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX)ಜುಲೈ 22 ರಿಂದ ಪ್ರತಿ ದಿನ ವಿಮಾನ ಸಂಚಾರ ಆರಂಭಿಸಲಿದೆ. ಪ್ರಸ್ತುತ, ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX) ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಅಬುಧಾಬಿಗೆ ವಾರದಲ್ಲಿ 4 ವಿಮಾನಗಳ ಸಂಚಾರ ನಿರ್ವಹಿಸುತ್ತಿದೆ.
ಪ್ರಸ್ತುತ, ಇಂಡಿಗೋ (4) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ IX (1) ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ಪ್ರತಿದಿನ ಒಟ್ಟು 5 ವಿಮಾನಗಳನ್ನು ನಿರ್ವಹಿಸುತ್ತಿವೆ. ಜುಲೈ 8 ರಿಂದ, ಈ ವಲಯದಲ್ಲಿ ದೈನಂದಿನ ವಿಮಾನಗಳ ಸಂಚಾರ 6 ಕ್ಕೆ ಹೆಚ್ಚಳವಾಗಲಿದೆ. ಅಂದಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ತನ್ನ ಎರಡನೇ ದೈನಂದಿನ ಸಂಚಾರ ಪುನರಾರಂಭಿಸಲಿದೆ. ಈ ಸಂಖ್ಯೆಯು ಜುಲೈ 22 ರಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು 7 ಕ್ಕೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಸಂಚರಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ಮುಂದೆ ಸಂಪೂರ್ಣ ದೇಶೀಯ ವಿಮಾನವಾಗಿ ಬದಲಾಗಲಿದೆ. ಅಬುಧಾಬಿಗೆ ತೆರಳುವ ಪ್ರಯಾಣಿಕರು ಮಂಗಳೂರಿನಿಂದ ಪ್ರತಿ ದಿನದ ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ವಿಮಾನ ಏರಲಿದ್ದಾರೆ.
ಬೆಂಗಳೂರು – ಮಂಗಳೂರು ವಿಮಾನಗಳ ಸಂಖ್ಯೆ ಹೆಚ್ಚಳ : ಆಗಸ್ಟ್ 1 ರಿಂದ, ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ವಾರದಲ್ಲಿ ಮೂರು ದಿನಗಳಲ್ಲಿ (ಕ್ರಮವಾಗಿ ಸೋಮವಾರ, ಬುಧವಾರ ಮತ್ತು ಶುಕ್ರವಾರ) ಸಂಚರಿಸುವ ವಿಮಾನಗಳ ಸಂಖ್ಯೆ 8 ಕ್ಕೆ ಏರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ IX ತನ್ನ ಎರಡು ದೈನಂದಿನ ವಿಮಾನಗಳೊಂದಿಗೆ ಮೂರನೇ ವಿಮಾನವನ್ನು ಆರಂಭಿಸಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post