ಮಂಜೇಶ್ವರ, ಜ.13 : ಇಲ್ಲಿನ ಮೀಯಪದವು ಬಳಿಯ ಬಾಳ್ಯೂರು ಎಂಬಲ್ಲಿ ಮೋಟಾರ್ ಸೈಕಲ್ ಮತ್ತು ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮೀಯಪದವು ದರ್ಬೆ ನಿವಾಸಿ ಹರೀಶ್ ಎಂಬವರ ಪುತ್ರ ಪ್ರೀತೇಶ್ ಶೆಟ್ಟಿ (21) ಹಾಗೂ ಬೆಜ್ಜಂಗಳ ಸುರೇಶ ಎಂಬವರ ಪುತ್ರ ಅಭಿಷೇಕ್ ಎಂ. (21) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಮಂಗಳೂರಿನ ಕಾಲೇಜಿಗೆ ತೆರಳುತ್ತಿದ್ದು, ಮೀಯಪದವು ಕಡೆಯಿಂದ ಹೊಸಂಗಡಿಯತ್ತ ಬರುತ್ತಿದ್ದರು. ಈ ವೇಳೆ, ಶಾಲಾ ಬಸ್ಸಿಗೆ ಮುಖಾಮುಖಿ ಡಿಕ್ಕಿಯಾಗಿದ್ದು ರಸ್ತೆಗಪ್ಪಳಿಸಿ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಪ್ರೀತೇಶ್ ಮಂಗಳೂರಿನ ದೇವಿ ಕಾಲೇಜು ಹಾಗೂ ಅಭಿಷೇಕ್ ಪ್ರೇರಣಾ ಕಾಲೇಜಿನ ಡಿಗ್ರಿ ವಿದ್ಯಾರ್ಥಿ ಗಳಾಗಿದ್ದರು.
ಇವರು ಮಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.
Discussion about this post