ಮಂಗಳೂರು : ಕೊಂಕಣಿ ಲೇಖಕ ಸಂಘ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾಯಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ ಸಂಘ ನಿರ್ಧರಿಸಿತು.
ಅದರಂತೆ, ಕೊಂಕಣಿ ಲೇಖಕ ಸಂಘದ ಪ್ರಶಸ್ತಿ ಸಮಿತಿಯು ಖ್ಯಾತ ಕೊಂಕಣಿ ಬರಹಗಾರ ಶ್ರೀ ಎಡಿ ನೆಟ್ಟೊ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಶ್ರೀ ಎಡಿ ನೆಟ್ಟೊ
2022ರ ಮಾರ್ಚ್ 28ರಂದು ಸಂಜೆ 6.30ಕ್ಕೆ ಮಂಗಳೂರು ನಂತೂರಿನ, ಬಜ್ಜೋಡಿಯ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಫಾದರ್ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಭಾಗವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೋ ಧನಂಜಯ ಕುಂಬ್ಳೆ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸದಸ್ಯರು: ರಿಚರ್ಡ್ ಮೊರಾಸ್ – ಸಂಚಾಲಕರು, ಡೊಲ್ಫಿ ಎಫ್. ಲೋಬೊ – ಸಮಿತಿ ಸದಸ್ಯರು, ಜೆ.ಎಫ್. ಡಿಸೋಜಾ – ಸಲಹಾ ಸಮಿತಿ ಸದಸ್ಯರು, ಟೈಟಸ್ ನೊರೊನ್ಹಾ – ಸಂಘಟನಾ ಸದಸ್ಯರು
Discover more from Coastal Times Kannada
Subscribe to get the latest posts sent to your email.
Discussion about this post