ಮಂಡ್ಯ: ನಗರದಲ್ಲಿ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 1.8 ಕಿ.ಮೀ ರೋಡ್ ಶೋ ನಡೆಸಿ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು. ತಮ್ಮ ಮೇಲೆ ಬಿದ್ದ ಅಭಿಮಾನದ ಹೂವಿನ ರಾಶಿಯನ್ನು ಮತ್ತೆ ಜನರೆಡೆಗೇ ಎರಚಿ ಸಂಭ್ರಮ ದುಪ್ಪಟ್ಟುಗೊಳಿಸಿದರು.
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರೋಡ್ ಶೋ ಒಂದು ಬದಿಯಷ್ಟೇ ನಡೆದರೂ, ಎರಡೂ ಬದಿಯಲ್ಲಿ ಜನ ಬೆಳಿಗ್ಗೆಯಿಂದಲೇ ಕಾತರದಿಂದ ಬಿಸಿಲಿನಲ್ಲೇ ಕಾಯುತ್ತಿದ್ದರು.
ಶ್ವೇತವರ್ಣದ ಜುಬ್ಬಾ ಧರಿಸಿದ್ದ ಪ್ರಧಾನಿ ಹಸನ್ಮುಖರಾಗಿ ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು. ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ‘ಭಾರತ್ ಮಾತಾ ಕೀ ಜೈ’, ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಮೊಳಗಿಸಿದರು. ಬೆಳಿಗ್ಗೆ 11.40ಕ್ಕೆ ರೋಡ್‌ಶೋ ಆರಂಭಿಸಿದ ಅವರು 20 ನಿಮಿಷಗಳ ಕಾಲ ಜನರೊಂದಿಗಿದ್ದರು. ನಂದಾ ಟಾಕೀಸ್ ಬಳಿ ರೋಡ್ ಶೋ ಮುಗಿಯಿತು.
ಮಧ್ಯಾಹ್ನ 12 ಗಂಟೆಗೆ ನಗರದಿಂದ ಹೊರಟ ಪ್ರಧಾನಿ ಅಮರಾವತಿ ಹೋಟೆಲ್ ಬಳಿ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಪ್ರವೇಶಿಸಿದರು. ತಾಲ್ಲೂಕಿನ ಹನಕೆರೆ ಬಳಿ ಕಾರಿಳಿದು ಅವರು ನಡಿಗೆ ಮೂಲಕ ಹೆದ್ದಾರಿ ಉದ್ಘಾಟಿಸಲೆಂದೇ ಕೆಂಪು ಹಾಸು ಹಾಸಿದ್ದು ವಿಶೇಷವಾಗಿತ್ತು. 50 ಮೀಟರ್‌ಗಳವರೆಗೆ ಹೆಜ್ಜೆಹಾಕಿ ಅವರು ವಿಧ್ಯುಕ್ತವಾಗಿ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಗೆ ಚಾಲನೆ ನೀಡಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಉದ್ಘಾಟಿಸಿದ ಪ್ರಧಾನಿ ಮೋದಿ ; ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ. 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದೆ. ಹೈವೇ ಉದ್ಘಾಟನೆ ವೇಳೆ ಪ್ರಧಾನಿ ಮೋದಿಗೆ ಕಲಾತಂಡಗಳಿಂದ ಸ್ವಾಗತ ಕೋರಲಾಯಿತು.
And here he is …. PM Sri @narendramodi holds road show in Mandya . First PM to visit district after 41 years . People’s love & affection is palpable . https://t.co/LU5ZbBool1
— B L Santhosh (@blsanthosh) March 12, 2023
Discover more from Coastal Times Kannada
Subscribe to get the latest posts sent to your email.
Discussion about this post