• About us
  • Contact us
  • Disclaimer
Sunday, September 6, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಂಗವೈಕಲ್ಯವಿದ್ದೂ ಸ್ವಂತ ಬದುಕು ಕಟ್ಟಿಕೊಂಡ ಮಂಗಳೂರಿನ ಪರಶುರಾಮ್‌.

Coastal Times by Coastal Times
August 13, 2024
in ಕರಾವಳಿ
ಅಂಗವೈಕಲ್ಯವಿದ್ದೂ ಸ್ವಂತ ಬದುಕು ಕಟ್ಟಿಕೊಂಡ ಮಂಗಳೂರಿನ ಪರಶುರಾಮ್‌.
44
VIEWS
WhatsappTelegramShare on FacebookShare on Twitter

ಮಂಗಳೂರು: ಮೂಲತಃ ಬಿಜಾಪುರದವರಾದ ಪರಶುರಾಮನ ಹೆತ್ತವರು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಈ ಪರುಶುರಾಮನಿಗೆ ಜ್ವರಕ್ಕೆ ವೈದರೊಬ್ಬರು ನೀಡಿದ ಇಂಜೆಕ್ಷನ್ ನಿಂದ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲು ಕೊಂಚ ಬಲವಿದ್ದರೂ, ಇವರು ಜೀವನಪರ್ಯಂತದ ಅಂಗವೈಕಲ್ಯಕ್ಕೆ ತುತ್ತಾದರು. ಬಾಲ್ಯದಿಂದಲೇ ಒಂದು ಕಾಲಿನ ಸ್ವಾಧೀನ ಸಂಪೂರ್ಣ ಕಳೆದು ಕೊಂಡಿದ್ದರೂ ಛಲ ಬಿಡದೆ ಜೀವನ ನಡೆಸಲು ಫುಡ್‌ ಡೆಲಿವರಿ ಬಾಯ್‌ ಆಗಿ ಪ್ರತೀ ನಿತ್ಯ ಕಾಯಕ ನಿರ್ವಹಿಸುತ್ತಿದ್ದಾರೆ ಮಂಗಳೂರಿನ ಪರಶುರಾಮ್‌.

ಮೂಲತಃ ಬಿಜಾಪುರದ ಪರಶುರಾಮ್‌ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಮಂಗಳೂರಿನಲ್ಲಿದೆ. ಅಪ್ಪ ಮಡಿವಾಳಪ್ಪ ಅವರಿಗೆ ಬೈಕಂಪಾಡಿ ಬಳಿ ಸಣ್ಣ ಗೂಡಂಗಡಿ ಇದೆ. ಅಮ್ಮ ರೇಣುಕಾ ಅಲ್ಲೇ ಸಹಾಯ ಮಾಡುತ್ತಿದ್ದಾರೆ. ಈ ದಂಪತಿಗೆ 7 ಮಂದಿ ಮಕ್ಕಳು. ಆರ್ಥಿಕವಾಗಿ ಹಿಂದುಳಿದ ಕಾರಣ ಶಾಲೆಯ ಫೀಸ್‌, ದಿನನಿತ್ಯದ ಖರ್ಚು ಸಹಿತ ಜೀವನದ ಬಂಡಿ ಸಾಗಿಸಲು ಕಷ್ಟಪಡುತ್ತಿದ್ದಾರೆ. ಇದೀಗ ಪರಶುರಾಮ್‌ ಅವರು ದುಡಿದು ಬಿಡಿಗಾಸು ಸಂಪಾದಿಸುತ್ತಿದ್ದು, ಇದುವೇ ಮನೆಗೆ ಆಧಾರವಾಗಿದೆ.

ಚಿಕ್ಕಂದಿನಲ್ಲೇ ಕಾಲು ಸ್ವಾಧೀನ ಕಳೆದುಕೊಂಡ ಪರಶುರಾಮ್‌ ಅವರ ಒಂದು ಕಾಲು ಊರಲೂ ಸಾಧ್ಯವಾಗುತ್ತಿಲ್ಲ. ಮತ್ತೂಂದು ಕಾಲು ಮತ್ತು ಕೈಯನ್ನು ಊರಿಯೇ ಇವರು ಚಲಿಸುತ್ತಾರೆ. ಹೀಗೇ ಕಷ್ಟ ಪಟ್ಟು ಸ್ಕೂಟರ್‌ ಏರಿ ಸ್ವಿಗ್ಗಿ, ಝೋಮ್ಯಾಟೋ ಕಂಪೆನಿಯ ಮೂಲಕ ಮನೆ ಮನೆಗೆ ಫುಡ್‌ ಡೆಲಿವರಿ ಮಾಡುತ್ತಿದ್ದಾರೆ. ಹೀಗಿದ್ದಾಗ ಕೆಲವು ಬಾರಿ ಫ್ಲ್ಯಾಟ್‌ಗಳಲ್ಲಿ ಏಳೆಂಟು ಮಾಳಿಗೆ ಮೆಟ್ಟಿಲುಗಳಲ್ಲೇ ನಡೆಯುವುದುಂಟು. ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ರಾತ್ರಿಯವರೆಗೂ ಕೆಲಸ ನಿರ್ವಹಿಸುತ್ತಿದ್ದಾರೆ. ಪೆಟ್ರೋಲ್‌, ಸ್ಕೂಟರ್‌ನ ನಿರ್ವಹಣೆಗೇ ಆದಾಯದ ಹೆಚ್ಚಿನ ಹಣ ಖರ್ಚಾಗುತ್ತದೆ. ಆದರೂ ಅವರು ಈವರೆಗೆ ಛಲ ಬಿಟ್ಟಿಲ್ಲ

9ನೇ ತರಗತಿಯವರೆಗೆ ಶಿಕ್ಷಣ ಪಡೆದ ಪರಶುರಾಮ ಆ ಬಳಿಕ ಮನೆಯಲ್ಲಿ ಬಡತನವಿದ್ದರಿಂದ ಭಿಕ್ಷಾಟನೆಗಿಳಿದರು. ಆದರೆ ಭಿಕ್ಷೆ ಬೇಡುವ ಕಾಯಕ ಇವರಿಗೆ ಹಿಂಸೆಯೆನಿಸಿ ಒಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯಲಾರಂಭಿಸಿದರು. ಇದೀಗ ಸೆಕ್ಯುರಿಟಿ ಕಾಯಕದ ಜೊತೆ ಫುಡ್ ಡೆಲಿವರಿ ಕೆಲಸವನ್ನು ಮಾಡುತ್ತಿದ್ದಾರೆ. ಪರಶುರಾಮ್‌ನ ಫುಡ್ ಡೆಲಿವರಿ ಕೆಲಸಕ್ಕೆ ಮಂಗಳೂರಿನ ಜನರು ಸಹ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಸರಿಯಿದ್ದು, ಏನನ್ನೂ ಸಾಧಿಸದಿದ್ದವರಿಗೆ ಪರಶುರಾಮ ಮಾದರಿಯಾಗಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಇಂದಿರಾ ಆಸ್ಪತ್ರೆಗೆ 25 ವರ್ಷಗಳ ಸಂಭ್ರಮ

Next Post

ಕಡಪ್ಪರ ಸಮೀರ್ ಹತ್ಯೆ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಮಾಫಿಯಾ..? ಸುಪಾರಿ ಕೊಲೆ ಶಂಕೆ, ಇಬ್ಬರು ವಶಕ್ಕೆ..?

Related Posts

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ
ಕರಾವಳಿ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
34
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ
ಕರಾವಳಿ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
12
Next Post
ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್ ನನ್ನ ಅಟ್ಟಾಡಿಸಿ ಬರ್ಬರ ಹತ್ಯೆ,

ಕಡಪ್ಪರ ಸಮೀರ್ ಹತ್ಯೆ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಮಾಫಿಯಾ..? ಸುಪಾರಿ ಕೊಲೆ ಶಂಕೆ, ಇಬ್ಬರು ವಶಕ್ಕೆ..?

Discussion about this post

Recent News

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
34
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
12
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

September 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d