• About us
  • Contact us
  • Disclaimer
Friday, June 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಡಪ್ಪರ ಸಮೀರ್ ಹತ್ಯೆ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಮಾಫಿಯಾ..? ಸುಪಾರಿ ಕೊಲೆ ಶಂಕೆ, ಇಬ್ಬರು ವಶಕ್ಕೆ..?

Coastal Times by Coastal Times
August 13, 2024
in ಕ್ರೈಮ್ ನ್ಯೂಸ್
ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್ ನನ್ನ ಅಟ್ಟಾಡಿಸಿ ಬರ್ಬರ ಹತ್ಯೆ,
114
VIEWS
WhatsappTelegramShare on FacebookShare on Twitter

ಉಳ್ಳಾಲ: ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣದ ಆರೋಪಿ ಉಳ್ಳಾಲದ ನಟೋರಿಯಸ್‌ ರೌಡಿ ಕಡಪ್ಪರ ಸಮೀರ್‌ (34) ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಭಾನುವಾರ ರಾತ್ರಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದೆ. ಇದರ ಹಿಂದೆ ಗೋಲ್ಡ್‌ ಮಾಫಿಯಾ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

ನಿನ್ನೆ ರಾತ್ರಿ ಉಳ್ಳಾಲದ ಮುಕ್ಕಚ್ಚೇರಿ ಕಡಪ್ಪರ ನಿವಾಸಿ ಸಮೀರ್ ತನ್ನ ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಾರಲ್ಲಿ ಕಲ್ಲಾಪು ಬಳಿಯ ಫಾಸ್ಟ್ ಫುಡ್ ಸೆಂಟರ್ ವೊಂದಕ್ಕೆ ಉಪಾಹಾರಕ್ಕೆ ತೆರಳಿದ್ದ ವೇಳೆ ಮತ್ತೊಂದು ಕಾರಲ್ಲಿ ಹಿಂಬಾಲಿಸಿ ಬಂದ ತಂಡವೊಂದು ತಾಯಿಯ ಎದುರಲ್ಲೇ ಮಾರಕಾಸ್ತ್ರಗಳನ್ನ ಹಿಡಿದು ಅಟ್ಟಾಡಿಸಿದ್ದಾರೆ. ತಪ್ಪಿಸಿಕೊಳ್ಳಲು ಸಮೀರ್ ರೈಲ್ವೇ ಟ್ರ್ಯಾಕ್ ಕಡೆ ಓಡಿದಾಗ ದುಷ್ಕರ್ಮಿಗಳು ಆತನನ್ನ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ತಾವು ಬಂದಿದ್ದ ಉಡುಪಿ ನೋಂದಣಿಯ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ಸಮೀರ್ ಉಳ್ಳಾಲದ ಟಾರ್ಗೆಟ್ ಗ್ಯಾಂಗ್ ಲೀಡರ್ ಆಗಿದ್ದ ಇಲ್ಯಾಸ್ ಕೊಲೆ ಸೇರಿದಂತೆ ಕೊಲೆಯತ್ನ, ದರೋಡೆ, ಮಾದಕ ವಸ್ತುಗಳ ಸಾಗಾಟ ಹೀಗೆ ಅನೇಕ ಪ್ರಕರಣಗಳನ್ನ ಎದುರಿಸುತ್ತಿದ್ದ. ತಿಂಗಳ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಮತ್ತೆ ಸಮೀರ್ ತನ್ನ ಸಹಚರರೊಂದಿಗೆ ಜೈಲು ಸೇರಿದ್ದ. ಮೃತ ಸಮೀರ್ ಪತ್ನಿ, ಎರಡು ವರುಷದ ಹೆಣ್ಣು, ನಾಲ್ಕು ತಿಂಗಳ ಗಂಡು ಮಗು, ತಾಯಿ, ಸಹೋದರ, ಸಹೋದರಿಯರನ್ನ ಅಗಲಿದ್ದಾರೆ.

ಆರು ತಿಂಗಳ ಹಿಂದೆ ಉಪ್ಪಳದ ನಟೋರಿಯಸ್‌ ವ್ಯಕ್ತಿಯೊಬ್ಬ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ಪಡೆದು ಮಧ್ಯವರ್ತಿಯನ್ನು ಅಪಹರಿಸಿ ಕೋಟಿ ರೂ. ಮೌಲ್ಯದ ಚಿನ್ನವನ್ನು ಎಗರಿಸಿದ್ದ. ಇದೇ ವಿಚಾರದಲ್ಲಿ ಜೈಲಿನಲ್ಲಿ ಸಮೀರ್‌ ಮೇಲೆ ದಾಳಿಯೂ ನಡೆದಿತ್ತು. ಚಿನ್ನ ಎಗರಿಸಿದ ದ್ವೇಷದಲ್ಲೇ ಉಪ್ಪಳದ ಗ್ಯಾಂಗ್‌ ಸುಪಾರಿ ಕಿಲ್ಲರ್‌ಗಳಿಂದ ಸಮೀರ್‌ನನ್ನು ಕೊಲೆಗೈದಿರುವ ಸಾಧ್ಯತೆಯಿದೆ ಎಂಬ ಅನುಮಾನಗಳು ದಟ್ಟವಾಗಿದೆ. ದುಷ್ಕರ್ಮಿಗಳು ಪರಾರಿಯಾದ ಕಾರು ಉಡುಪಿಯ ನೋಂದಣಿಯಲ್ಲಿತ್ತು ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಸಮೀರ್ ಕೊಲೆಗೆ ಜೈಲಲ್ಲೇ ಸ್ಕೆಚ್..!? ಸಮೀರ್‌ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಶಯಾಸ್ಪದ ವ್ಯಕ್ತಿಗಳಾಗಿ ಗುರುತಿಸಿಕೊಂಡ ಟಾರ್ಗೆಟ್ ಇಲ್ಯಾಸ್‌ ಸಂಬಂಧಿಕ ಹಾಗೂ ಆತನ ಮಿತ್ರನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಸಮೀರ್‌ ಮತ್ತು ತಂಡವು ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ಕೆಲ ದಿನಗಳ ಹಿಂದಷ್ಟೆ ಸಮೀರ್‌ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಒಂದು ವರ್ಷದ ಹಿಂದೆಯಷ್ಟೇ ಈತ ವಿವಾಹವಾಗಿದ್ದ. ಸಮೀರ್‌ನನ್ನು ಜೈಲಿನಲ್ಲಿ ಕಳೆದ ತಿಂಗಳು ತಂಡವೊಂದು ಕೊಲೆಗೆ ಯತ್ನಿಸಿದ್ದು, ಅಲ್ಲಿ ಸಮೀರ್‌ ಬಚಾವಾಗಿದ್ದ ಎಂದು ತಿಳಿದು ಬಂದಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಂಗವೈಕಲ್ಯವಿದ್ದೂ ಸ್ವಂತ ಬದುಕು ಕಟ್ಟಿಕೊಂಡ ಮಂಗಳೂರಿನ ಪರಶುರಾಮ್‌.

Next Post

ಉಡುಪಿ : ಗೃಹೋಪಯೋಗಿ ಮಳಿಗೆಯ ಮ್ಯಾನೇಜರ್‌ಗೆ ಚೂರಿ ಇರಿತ; ಆರೋಪಿ ಸೆಕ್ಯೂರಿಟಿ ಗಾರ್ಡ್ ಬಂಧನ

Related Posts

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!
ಕ್ರೈಮ್ ನ್ಯೂಸ್

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
73
ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ಕ್ರೈಮ್ ನ್ಯೂಸ್

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

June 24, 2026
342
Next Post
ಉಡುಪಿ : ಗೃಹೋಪಯೋಗಿ ಮಳಿಗೆಯ ಮ್ಯಾನೇಜರ್‌ಗೆ ಚೂರಿ ಇರಿತ; ಆರೋಪಿ ಸೆಕ್ಯೂರಿಟಿ ಗಾರ್ಡ್ ಬಂಧನ

ಉಡುಪಿ : ಗೃಹೋಪಯೋಗಿ ಮಳಿಗೆಯ ಮ್ಯಾನೇಜರ್‌ಗೆ ಚೂರಿ ಇರಿತ; ಆರೋಪಿ ಸೆಕ್ಯೂರಿಟಿ ಗಾರ್ಡ್ ಬಂಧನ

Discussion about this post

Recent News

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

June 26, 2026
22
ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
73
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

ಮಂಗಳೂರು: ರೋಹನ್ ಕಾರ್ಪೊರೇಶನ್‌ನ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್

June 26, 2026
ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

June 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d