ಆ್ಯಪಲ್ ಕಂಪನಿ ವರ್ಷದಿಂದ ವರ್ಷ ಮಾರುಕಟ್ಟೆಯಲ್ಲಿ ಹೊಸರೀತಿಯ ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಕಳೆದ ವರ್ಷ ಐಫೋನ್ 13 ಅನ್ನು ಪರಿಚಯಿಸಿತ್ತು. ಈ ಬಾರಿ ಐಫೋನ್ 14 ಅನ್ನು ಬಿಡುಗಡೆ ಮಾಡಿದೆ. ಈ ಎರಡೂ ಮೊಬೈಲ್ಗಳು ಬಹು ಬೇಡಿಕೆಯಲ್ಲಿವೆ. ಇದೀಗ ಮುಂದಿನ ವರ್ಷ ಐಫೋನ್ 15 ಸೀರಿಸ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಈ 15 ಸೀರಿಸ್ನ ಕೆಲವೊಂದು ಫೀಚರ್ಸ್ಗಳು ಹೊರಬಿದ್ದಿದೆ.
ಆ್ಯಪಲ್ ಕಂಪನಿ ವರ್ಷದಿಂದ ವರ್ಷ ತನ್ನ ಮಾರುಕಟ್ಟೆಯಲ್ಲಿ ಹೊಸರೀತಿಯ ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಕಳೆದ ವರ್ಷ ಕಂಪನಿ ಐಫೋನ್ 13 ಅನ್ನು ಪರಿಚಯಿಸಿತ್ತು. ಈ ಬಾರಿ ಐಫೋನ್ 14 ಅನ್ನು ಬಿಡುಗಡೆ ಮಾಡಿದೆ. ಈ ಎರಡೂ ಮೊಬೈಲ್ಗಳು ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಲ್ಲಿವೆ. ಇದೀಗ ಮುಂದಿನ ವರ್ಷ ಐಫೋನ್ 15 ಸೀರಿಸ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಈ 15 ಸೀರಿಸ್ನ ಕೆಲವೊಂದು ಫೀಚರ್ಸ್ಗಳು ಹೊರಬಿದ್ದಿದೆ.
ಪ್ರತಿ ವರ್ಷ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡುವ ಐಫೋನ್ ಅದಕ್ಕೆ ವಿಶೇಷ ಫೀಚರ್ಗಳನ್ನು ಕೂಡ ಸೇರಿಸುತ್ತಾ ಬರುತ್ತಿದೆ. ಕಳೆದ ವರ್ಷದ ಐಫೋನ್ 14 ಸರಣಿಯಲ್ಲಿ ಆಕರ್ಷಕವಾದ 48 ಮೆಗಾಫಿಕ್ಸೆಲ್ ಕ್ಯಾಮೆರಾ, ಸ್ಯಾಟಲೈಟ್ ಕನೆಕ್ಟಿವಿಟಿ, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಒಂದಿಷ್ಟು ನೂತನ ಆಯ್ಕೆ ಸೇರ್ಪಡೆ ಮಾಡಿತ್ತು.
ಇದೀಗ 2023 ರಲ್ಲಿ ಬಿಡುಗಡೆ ಆಗಲಿರುವ ಐಫೋನ್ 15 ಪ್ರೊ ಮಾದರಿಯಲ್ಲಿ USB-C (Type-C) ಚಾರ್ಜರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಐಫೋನ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜರ್ ಅನ್ನು ಅಳವಡಿಸಲು ಸಿದ್ದವಾಗಿರುವ ಬಗ್ಗೆ ಆ್ಯಪಲ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಗ್ರೆಗ್ ಜೋಸ್ವಿಯಾಕ್ ಹೇಳಿರುವುದು ವರದಿ ಆಗಿದೆ.ಇದರಿಂದ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಯುರೋಪಿಯನ್ ಕಮಿಷನ್ ಒಂದು ನಿಯಮನ್ನು ಪ್ರಸ್ತಾಪಿಸಿತ್ತು ಈ ನಿಯಮದ ಪ್ರಕಾರ ಯುರೋಪ್ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಫೋನ್ಗಳು 2024ರ ವೇಳೆಯಲ್ಲಿ ಟೈಪ್ ಸಿ ,ಚಾರ್ಜರ್ ಅನ್ನು ಹೊಂದಿರಬೇಕು ಎಂದು ತಿಳಿಸಿದೆ. ಈ ನಿಯಮವನ್ನು ಪಾಲಿಸುವ ನಿಟ್ಟಿನಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್ 15 ನಲ್ಲಿ ಟೈಪ್ ಸಿ ಚಾರ್ಜರ್ ಹೊಂದಿದ ಸ್ಮಾರ್ಟ್ಫೊನ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
A17 ಬಯೋನಿಕ್ ಚಿಪ್‌ಸೆಟ್: ಜಪಾನೀಸ್ ಪ್ರಕಟಣೆಯ ಪ್ರಕಾರ, ಮುಂಬರುವ iPhone 15 Pro ನಲ್ಲಿ A17 ಬಯೋನಿಕ್ ಚಿಪ್‌ಸೆಟ್ ಅಳವಡಿಸಲಾಗುತ್ತಂತೆ. ಇದು ಹೊಸ ಐಫೋನ್‌ನ ಕಾರ್ಯವೈಖರಿಯನ್ನು ಮತ್ತಷ್ಟು ಸುಧಾರಿಸುತ್ತದೆ. ಜೊತೆಗೆ ವೇಗವಾಗಿ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
8P ಲೆನ್ಸ್ ಕ್ಯಾಮೆರಾ ಅನುಮಾನ: ಈ ಹಿಂದೆ iPhone 15 Pro ಮಾದರಿಗಳು 8P ಲೆನ್ಸ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗಿತ್ತು. ಆದರೀಗ iPhone 15 Pro ಮಾದರಿಗಳು 8P ಲೆನ್ಸ್ ಕ್ಯಾಮೆರಾವನ್ನು ಹೊಂದಿರುವುದಿಲ್ಲ ಎಂದು ವರದಿಯಾಗಿದೆ. ಇದರ ಬಗ್ಗೆ ಗ್ರಾಹಕರಿಗೂ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.
iPhone 15 Ultra: Pro Max ಮಾದರಿಯನ್ನು ಐಫೋನ್ 15 ಸರಣಿಯಲ್ಲಿ ಕಾಣುವುದು ಅನುಮಾನ ಎನ್ನಲಾಗುತ್ತಿದೆ. Apple iPhone 15 ಮತ್ತು 15 Pro Max ಮಾದರಿಗಳ ನಡುವೆ ದೊಡ್ಡ ಅಂತರವಿದೆ. ಇದಕ್ಕಾಗಿಯೇ ಪ್ರೊ ಮ್ಯಾಕ್ಸ್ ಬದಲಿಗೆ ಐಫೋನ್ 15 ಅಲ್ಟ್ರಾವನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post