ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಬೆಳ್ಳಿಹಬ್ಬದ ಅಂಗವಾಗಿ, ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರವು ಅ.13,14 ಎರಡು ದಿನಗಳ ಕಾಲ ವಸ್ತು ಪ್ರದರ್ಶನವನ್ನು ಏರ್ಪಡಿಸಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಯುಜಿ ಕಾರ್ಯಕ್ರಮದ (ಎಂಬಿಬಿಎಸ್) ರಜತ ಮಹೋತ್ಸವ ಆಚರಣೆ ಹಾಗೂ ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ವತಿಯಿಂದ ‘ಮುಲ್ಲರ್ ಮೆಡಿ ಎಕ್ಸ್‌ಪೋ 2023’ ಅಕ್ಟೋಬರ್ 13 ಮತ್ತು 14 ರಂದು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ನಗರ ಮತ್ತು ಸುತ್ತಮುತ್ತಲಿನ ಶಾಲೆಗಳ ಯುವಕರ ಪ್ರತಿಭೆಯನ್ನು ಪರಿಚಯಿಸಿ. ರೊಬೊಟಿಕ್ ಶಸ್ತ್ರಾಸ್ತ್ರಗಳು, ಸಣ್ಣ ಡಯಾಲಿಸಿಸ್ ಯಂತ್ರಗಳು ಮತ್ತು ನೋವುರಹಿತ ಚುಚ್ಚುಮದ್ದುಗಳಂತಹ ವಿವಿಧ ಯೋಜನೆಗಳ ಕುರಿತು ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರಸ್ತುತಪಡಿಸುತ್ತಾರೆ ಜೊತೆಗೆ ಆರೋಗ್ಯ ಸಂಬಂಧಿತ ಮಾದರಿಗಳು ಮತ್ತು ಪೌಷ್ಟಿಕಾಂಶದ ಸಲಹೆಗಳು. ಎಕ್ಸ್‌ಪೋ ಉಚಿತ ವೈದ್ಯಕೀಯ ಪರೀಕ್ಷೆಗಳನ್ನು ಹೊಂದಿರುತ್ತದೆ. ಯುವ ಮನಸ್ಸುಗಳ ಪ್ರತಿಭೆಗೆ ನಗದು ಬಹುಮಾನ ನೀಡಲಾಗುವುದು.
ಅಕ್ಟೋಬರ್ 13 ರಂದು ಹತ್ತು ಘಂಟೆಗೆ ಈ ಕಾರ್ಯಕ್ರಮಗಳ ಉದ್ಘಾಟನೆ ನಡೆಯುತ್ತದೆ. ಎನ್ ಐ ಟಿ ಕೆ ಸುರತ್ಕಲ್ ಇದರ ಸಂಶೋಧನಾ ನಿರ್ದೇಶಕರಾದ ಡಾ. ಸತ್ಯಬೋದ್ ಕುಲಕರ್ಣಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುವ ಸಮಾರಂಭದಲ್ಲಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾ. ರಿಚರ್ಡ್ ಅಲೋಸಿಯಸ್ ಕುವೆಲ್ಲೂ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತಾಧಿಕಾರಿಗಳು, ಮಂಡಳಿಯ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿ ದ್ದಾರೆ ಎಂದು ಡಾ. ಸಂಜೀವ ರೈ ತಿಳಿಸಿದ್ದಾರೆ.
ಅ.16ರಂದು ಸಂಸ್ಥೆಯ ಲ್ಲಿ ಎಂಬಿಬಿಎಸ್ ಪದವಿ ಆರಂಭಿಸಿ 24 ವರ್ಷ ಪೂರ್ಣ ಗೊಂಡು 25 ವರ್ಷ ಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ 2023-24 ವರ್ಷ ವನ್ನು ಬೆಳ್ಳಿ ಹಬ್ಬದ ವರ್ಷ ವಾಗಿ ವಿವಿಧ ಕಾರ್ಯ ಕ್ರಮಗಳೊಂದಿಗೆ ಆಚರಿಸಲಾಗುವುದು.ಸಂಸ್ಥೆಯ ಹಳೆ ವಿದ್ಯಾರ್ಥಿಗಳು, ವಿವಿಧ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ವರ್ಷ ವಿಡೀ ಕಾರ್ಯಕ್ರಮ ನಡೆಯಲಿದೆ.ಅ.16ರಂದು ಫಾ.ಮುಲ್ಲರ್ ಕನ್ ವೆನ್ಶನ್ ಸೆಂಟರ್ ಪಂಪ್ ವೆಲ್ ಸಭಾಂಗಣದಲ್ಲಿ ಸಂಜೆ 3.30 ಗಂಟೆಗೆ ಸಂಸ್ಥೆಯ ಅಧ್ಯಕ್ಷ ಬಿಷಪ್ ಅತೀ.ವಂ.ಪೀಟರ್ ಪೌಲ್ ಸಲ್ದಾನರ ಅಧ್ಯಕ್ಷ ತೆಯಲ್ಲಿ ನಡೆಯಲಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ, ಮತ್ತು ವಿವಿಧ ವಿಭಾಗದ ಮುಖ್ಯಸ್ಥರಾದ ಅಜಿತ್ ಮಿನೇಜಸ್,ಜೀವನ್ ಸಿಕ್ವೇರಾ,ನೆಲ್ಸನ್ ದೀರಜ್ ಪಾಯಸ್, ಡಾ.ಉದಯ ಕುಮಾರ್, ಡಾ.ಅರ್ಚನಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post