• About us
  • Contact us
  • Disclaimer
Saturday, April 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಚದುರಂಗದಾಟಕ್ಕೆ ಭಾರತದ ಗುಕೇಶ್​​ ಬಾಸ್: ಚೆನ್ನೈ ಮೂಲದ 18ರ ತರುಣ ಚೆಸ್ ವಿಶ್ವ ಚಾಂಪಿಯನ್ ! ಈತನಿಗೆ ಸಿಕ್ಕ ಕೋಟಿಯೆಷ್ಟು ?

Coastal Times by Coastal Times
December 13, 2024
in ಕ್ರೀಡಾ ಸುದ್ದಿ
ಚದುರಂಗದಾಟಕ್ಕೆ ಭಾರತದ ಗುಕೇಶ್​​ ಬಾಸ್: ಚೆನ್ನೈ ಮೂಲದ 18ರ ತರುಣ ಚೆಸ್ ವಿಶ್ವ ಚಾಂಪಿಯನ್ ! ಈತನಿಗೆ ಸಿಕ್ಕ ಕೋಟಿಯೆಷ್ಟು ?
37
VIEWS
WhatsappTelegramShare on FacebookShare on Twitter

ಸಿಂಗಾಪುರ: ಭಾರತದ ಗ್ರ್ಯಾಂಡ್‌ಮಾಸ್ಟರ್ ದೊಮ್ಮರಾಜು ಗುಕೇಶ್ ಅವರು ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್​ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕಳೆದ 13 ಪಂದ್ಯಗಳಲ್ಲಿ ಡ್ರಾ ಸಾಧಿಸುತ್ತಾ ಬಂದಿದ್ದ ಗುಕೇಶ್​ ಇಂದು ನಡೆದ 14ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 2024ರ ಸಾಲಿನ ವಿಶ್ವ ಚಾಂಪಿಯನ್‌ಶಿಪ್​​ ಗೆದ್ದುಕೊಂಡರು. ಚೆಸ್​​ ಆಟದ 138 ವರ್ಷಗಳಲ್ಲಿ ಏಷ್ಯಾದ ಇಬ್ಬರು ಸ್ಪರ್ಧಿಗಳು ಫೈನಲ್​ಗೆ ತಲುಪಿದ್ದು ಇದೇ ಮೊದಲು. ಚೀನಾ ಮತ್ತು ಭಾರತದ ಆಟಗಾರರ ನಡುವಿನ ಸೆಣಸಾಟದಲ್ಲಿ ಜಯ ಗುಕೇಶ್​​ ಅವರದ್ದಾಯಿತು.

ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಚೀನಾದ 32 ವರ್ಷದ ಡಿಂಗ್ ಲಿರೆನ್ ಅವರು ಭಾರತದ ಗ್ರ್ಯಾಂಡ್​ಮಾಸ್ಟರ್​ಗೆ ಕಳೆದ 13 ಪಂದ್ಯಗಳಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಇಬ್ಬರೂ 6.5 ಸಮಾನ ಅಂಕ ಗಳಿಸಿದ್ದರು. ಗೆಲುವಿನ ಬಳಿಕ ಗುಕೇಶ್ ಅವರಿಗೆ 21.21 ಕೋಟಿ ರೂಪಾಯಿ (2.5 ಮಿಲಿಯನ್ ಅಮೆರಿಕನ್​ ಡಾಲರ್​) ಬಹುಮಾನ ಲಭಿಸಿದೆ.

ವಿಶ್ವದ ಅತಿ ಕಿರಿಯ ಚಾಂಪಿಯನ್​: 18 ವರ್ಷದ ಭಾರತದ ಗ್ರ್ಯಾಂಡ್​ಮಾಸ್ಟರ್​ ಡಿ. ಗುಕೇಶ್​ ವಿಶ್ವ ಚೆಸ್​​ ಚಾಂಪಿಯನ್​​ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985ರಲ್ಲಿ 22ನೇ ವಯಸ್ಸಿನಲ್ಲಿ ಚಾಂಪಿಯನ್​ ಆಗಿದ್ದರು. ಈ ದಾಖಲೆಯನ್ನು ಭಾರತೀಯ ಮುರಿದರು.

ವಿಶ್ವ ಚಾಂಪಿಯನ್​ ಗೆದ್ದ ಗುಕೇಶ್​ ಚೆಸ್​​ ಇತಿಹಾಸದ ಮೂರನೇ ಗ್ರ್ಯಾಂಡ್​ಮಾಸ್ಟರ್ ಆಗಿದ್ದಾರೆ. ಚೆಸ್ ದಂತಕಥೆ ಜಿ.ಎಂ.ವಿಶ್ವನಾಥನ್ ಅವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಅಭಿದಾನಕ್ಕೂ ಪಾತ್ರರಾದರು. ಆನಂದ್ ಅವರು 5 ಬಾರಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. 1886ರಿಂದ ಆರಂಭವಾಗಿರುವ ವಿಶ್ವ ಚೆಸ್​ ಚಾಂಪಿಯನ್​ ಪ್ರಶಸ್ತಿಯಲ್ಲಿ 17 ಆಟಗಾರರು ಚಾಂಪಿಯನ್ ಆಗಿದ್ದಾರೆ. ಗುಕೇಶ್ ಈಗ 18ನೇ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.

ಉಕ್ಕಿದ ಆನಂದಭಾಷ್ಪ: ಡಿಂಗ್​ ಲಿರೆನ್​ ವಿರುದ್ಧ ಗೆಲುವು ಖಚಿತವಾಗುತ್ತಿದ್ದಂತೆಯೇ ಗುಕೇಶ್​ ಕಣ್ಣಲ್ಲಿ ಗೆಲುವಿನ ಕಣ್ಣೀರು ಸುರಿಯಿತು. ಜಯದ ಸಂಭ್ರಮವನ್ನು ತಡೆಯಲಾಗದೆ ಗ್ರ್ಯಾಂಡ್​ಮಾಸ್ಟರ್​ ಆನಂದಭಾಷ್ಪ ಸುರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದೆ.

10 ವರ್ಷಗಳ ಕನಸು ನನಸು: ಗೆಲುವಿನ ಬಳಿಕ ಮಾತನಾಡಿದ ವಿಶ್ವ ಚಾಂಪಿಯನ್​ ಗುಕೇಶ್​, “ಈ ದಿನಕ್ಕಾಗಿ ನಾನು 10 ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ. ನಾನು ಟೂರ್ನಿಯಲ್ಲಿ ನನ್ನ ಅತ್ಯುತ್ತಮ ಆಟವಾಡಿದೆ. ಇದನ್ನು ಮುಂದುವರಿಸಿಕೊಂಡು ಹೋಗುವೆ” ಎಂದು ಹೇಳಿದರು. ಮುಂದುವರೆದು, “ಹಾಲಿ ವಿಶ್ವ ಚಾಂಪಿಯನ್​​ ಡಿಂಗ್​ ಲಿರೆನ್​ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದು ಅತ್ಯುತ್ತಮ ಕ್ಷಣವಾಗಿದೆ. ಆತ ಯಾರೆಂಬುದು ಪ್ರಪಂಚಕ್ಕೆ ಗೊತ್ತಿದೆ” ಎಂದರು.

ಗುಕೇಶ್ ಗೆ ಸಿಕ್ಕ ಪ್ರಶಸ್ತಿ ಮೊತ್ತ ಎಷ್ಟು ? : 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಒಟ್ಟು $2.5 ಮಿಲಿಯನ್ ಪ್ರಶಸ್ತಿ ಮೊತ್ತ ಹೊಂದಿದೆ. FIDE ನಿಯಮದ ಪ್ರಕಾರ, ಪ್ರತಿ ಗೆಲುವಿಗೆ ಒಬ್ಬ ಆಟಗಾರನಿಗೆ $200,000 (ಸುಮಾರು ₹1.68 ಕೋಟಿ) ಸಿಗುತ್ತೆ, ಉಳಿದ ಪ್ರಶಸ್ತಿ ಹಣವನ್ನ ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ.‌ ಗುಕೇಶ್ ಮೂರು ಪಂದ್ಯಗಳನ್ನ (3, 11 ಮತ್ತು 14) ಗೆದ್ದಿದ್ದು, 3 ಗೆಲುವುಗಳಿಂದ $600,000 (ಸುಮಾರು ₹5.04 ಕೋಟಿ) ಗಳಿಸಿದ್ದರು. ಆದ್ರೆ 1 ಮತ್ತು 12ನೇ ಪಂದ್ಯಗಳನ್ನ ಗೆದ್ದ ಡಿಂಗ್ $400,000 (₹3.36 ಕೋಟಿ) ಗಳಿಸಿದ್ರು. ಉಳಿದ $1.5 ಮಿಲಿಯನ್‌ ಅನ್ನು ಇಬ್ಬರು ಆಟಗಾರರಿಗೂ ಸಮಾನವಾಗಿ ಹಂಚಲಾಗುತ್ತೆ. ಒಟ್ಟಾರೆಯಾಗಿ, ಗುಕೇಶ್ 1.35 ಮಿಲಿಯನ್ ಡಾಲರ್ (ಸುಮಾರು ₹11.34 ಕೋಟಿ) ಗೆದ್ದರೆ, ಡಿಂಗ್ $1.15 ಮಿಲಿಯನ್ (ಸುಮಾರು ₹9.66 ಕೋಟಿ) ಗೆದ್ದಿದ್ದಾರೆ.‌

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಸ್ಕೂಟರ್‌ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಲಾರಿ ಹರಿದು ಮೃತ್ಯು

Next Post

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್

Related Posts

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು
ಕ್ರೀಡಾ ಸುದ್ದಿ

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು

March 26, 2026
20
ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!
ಕ್ರೀಡಾ ಸುದ್ದಿ

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
24
Next Post
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್

Discussion about this post

Recent News

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
15
ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d