ಮಂಗಳೂರು: ಅಮೃತ ವಿದ್ಯಾಲಯಂ ಮಂಗಳೂರು ಇದರ ವಾರ್ಷಿಕ ಕ್ರೀಡಾ ಕೂಟವು ನಗರದ ಮಂಗಳಾ ಕ್ರೀಡಾಂಗಣದಲ್ಲಿ ದಿನಾಂಕ 12-12-2025 ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ಕ್ರೀಡಾ ಮತ್ತು ಯುವ ಸಲೀಕರಣ ಇಲಾಖೆಯ ಉಪನಿರ್ದೇಶಕರಾದ ಪ್ರದೀಪ್ ಡಿ’ಸೋಜ ಭಾಗವಹಿಸಿದ್ದರು. ಅವರು ಕ್ರೀಡಾ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

“ಕ್ರೀಡೆಯು ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಸೋಲು ಗೆಲುವುಗಳನ್ನು ಸಹನೆಯಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸುವುದರಿಂದ ಉಜ್ವಲ ಭವಿಷ್ಯವನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಅಮೃತ ವಿದ್ಯಾಲಯಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರಾವಳಿ ಕರ್ನಾಟಕದ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಮಧುಲಿಖಾ, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್, ಶಾಲಾ ಅಭಿವೃದ್ಧಿ ಸಮಿತಿಯ ವಾಮನ್ ಮೈಂದನ್ ವೇದಿಕೆಯಲ್ಲಿದ್ದರು.



ಶಾಲಾ ನಾಯಕ ರಿಷಬ್ ಶೆಟ್ಟಿ,, ನಾಯಕಿ ಖುಷಿ ಶೇಟ್, ಕ್ರೀಡಾ ಮಂತ್ರಿ ಮಯಾಂಕ್, ಸಹ ಕ್ರೀಡಾ ಮಂತ್ರಿ ಅನುಷ್ಕಾ ಯಾದವ್ ಮತ್ತು NCC ಕೆಡೆಟ್ ಗಳು ಬ್ಯಾಂಡ್ ವಾದ್ಯ ಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಆಕರ್ಷಕ ಪಥ ಸಂಚಾಲನೆಯನ್ನು ನಾಲ್ಕು ತಂಡಗಳಾದ ಅಮೃತ ಮಯಿ, ಆನಂದಮಯಿ, ಚಿನ್ಮಯಿ, ಜ್ಯೋತಿರ್ಮಯಿಯವರು ನೆರವೇರಿಸಿದರು. ವಿದ್ಯಾರ್ಥಿಗಳಿಂದ ಡ್ರಿಲ್ ಡ್ಯಾನ್ಸ್ ನಡೆಯಿತು. ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ನಿರೂಪಣೆಯನ್ನು ವಿದ್ಯಾರ್ಥಿನಿ ಸಾನ್ವಿ, ಸ್ವಾಗತ ಮತ್ತು ವಂದನಾರ್ಪಣೆಯನ್ನು ಶಿಕ್ಷಕಿ ಶ್ವೇತ ಎಸ್. ಪೈ ಅವರು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post