• About us
  • Contact us
  • Disclaimer
Friday, July 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದೈವ ನರ್ತಕರು ತೊಡೆಯಲ್ಲಿ ಮಲಗಿದ್ದು ಎನ್ನಲು ಯಾವ ಆಧಾರವೂ ಇಲ್ಲ, ಯಾರೇ ಹರಕೆ ಕೊಟ್ಟರೂ ಇದೇ ರೀತಿ ಪ್ರೀತಿ ತೋರಿಸುತ್ತದೆ, ಹರಕೆ ಕೊಟ್ಟವರನ್ನು ಕೈಹಿಡಿದು ಆಧರಿಸುವುದು ವಾಡಿಕೆ- ದೈವಸ್ಥಾನದ ಆಡಳಿತ ಮಂಡಳಿ

Coastal Times by Coastal Times
December 13, 2025
in ಕರಾವಳಿ
ದೈವ ನರ್ತಕರು ತೊಡೆಯಲ್ಲಿ ಮಲಗಿದ್ದು ಎನ್ನಲು ಯಾವ ಆಧಾರವೂ ಇಲ್ಲ, ಯಾರೇ ಹರಕೆ ಕೊಟ್ಟರೂ ಇದೇ ರೀತಿ ಪ್ರೀತಿ ತೋರಿಸುತ್ತದೆ, ಹರಕೆ ಕೊಟ್ಟವರನ್ನು ಕೈಹಿಡಿದು ಆಧರಿಸುವುದು ವಾಡಿಕೆ- ದೈವಸ್ಥಾನದ ಆಡಳಿತ ಮಂಡಳಿ
89
VIEWS
WhatsappTelegramShare on FacebookShare on Twitter

ಮಂಗಳೂರು, ಡಿ.12 : ಕಾಂತಾರ ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ಹರಕೆ ನೇಮ ಕೊಟ್ಟಿರುವುದು ಮತ್ತು ಅದರಲ್ಲಿ ದೈವ ನರ್ತಕ ಅತಿರೇಕವಾಗಿ ವರ್ತಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೇಳಿಬಂದು ವಿವಾದ ರೂಪ ಪಡೆದಿರುವ ವಿಚಾರದಲ್ಲಿ ಸ್ವತಃ ಕದ್ರಿ ಬಾರೆಬೈಲಿನ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನ ಆಡಳಿತ ಕಮಿಟಿಯವರು ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೈವಸ್ಥಾನದ ಸಮಿತಿ ಗೌರವಾಧ್ಯಕ್ಷ ರವಿ ಪ್ರಸನ್ನ ಮಾತನಾಡಿ, ಹರಕೆ ನೇಮ ಆಗಿರುವ ಬಗ್ಗೆ ನಮಗೆ ಯಾವುದೇ ರೀತಿಯ ಸಂಶಯಗಳಿಲ್ಲ. ದೈವ ನರ್ತನ ಬಗ್ಗೆಯೂ ಆಕ್ಷೇಪ ಇಲ್ಲ. ಆದರೆ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ನಾನಾ ರೀತಿಯ ಟೀಕೆ ಬಂದಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ. ಇಲ್ಲಿ ದೈವ ನರ್ತಕರು ತೊಡೆಯಲ್ಲಿ ಮಲಗಿದ್ದು ಎನ್ನಲು ಯಾವ ಆಧಾರವೂ ಇಲ್ಲ. ದೈವ ನರ್ತನವೇ ಹಾಗೆ. ನಾವು ಹಿಂದೆಯೂ ಇದೇ ರೀತಿಯ ವರ್ತನೆಯನ್ನು ನೋಡಿದ್ದೇವೆ. ಯಾರೇ ಹರಕೆ ಕೊಟ್ಟರೂ ಇದೇ ರೀತಿ ಪ್ರೀತಿ ತೋರಿಸುತ್ತದೆ. ಹರಕೆ ಕೊಟ್ಟವರನ್ನು ಕೈಹಿಡಿದು ಆಧರಿಸುವುದು ವಾಡಿಕೆ ಎಂದು ಹೇಳಿದರು.

ಹಲವಾರು ಹರಕೆ ನೇಮಗಳು ಬಂದಿವೆ, ದೈವ ಚಿತ್ತದಂತೆ ಇದನ್ನು ಹೊಂಬಾಳೆ ಫಿಲಂಸ್ ತಂಡದವರ ನೇಮವನ್ನು ಪಡೆದಿದೆ. ಮುಂದಿನ ಫೆಬ್ರವರಿಯಲ್ಲೂ ಮತ್ತೊಂದು ತಂಡದ ಹರಕೆ ನೇಮ ಇದೆ. ಇಲ್ಲಿನ ಪೂಜಾರಿ ವರ್ಗ, ದೈವ ನರ್ತಕರ ಬಗ್ಗೆ ನಮಗೆ ಯಾವುದೇ ಕಿಂಚಿತ್ತೂ ಆಕ್ಷೇಪ ಇಲ್ಲ. ಇಷ್ಟೆಲ್ಲ ಟೀಕೆ ಬಂದರೂ ನಾವು ಮಾತನಾಡಿಲ್ಲ ಎಂಬ ಅಪವಾದ ಬೇಡ ಎನ್ನುವ ಕಾರಣಕ್ಕೆ ಸ್ಪಷ್ಟನೆ ಕೊಡುತ್ತಿದ್ದೇವೆ. ಈ ರೀತಿಯ ಟೀಕೆ ಬಂದಿರುವುದು ನಮಗೆ ನೋವಾಗಿದೆ, ಭಕ್ತರ ಭಾವನೆಗೆ ಧಕ್ಕೆ ಬಂದಿದೆ ಎಂದು ಹೇಳಿದರು. ನಾವು ಸಿನಿಮಾದಲ್ಲಿ ದೈವಾರಾಧನೆ ತೋರಿಸುವ ಬಗ್ಗೆ ಮಾತನಾಡುವುದಿಲ್ಲ. ತಮ್ಮಣ್ಣ ಶೆಟ್ಟಿ ಮಾತನ್ನು ಆಧರಿಸಿ ಸುದ್ದಿ ಮಾಡಿದ್ದೀರಿ, ಅದರ ನೆಪದಲ್ಲಿ ಕ್ಷೇತ್ರಕ್ಕೆ ಅಪಚಾರ ಮಾಡುವ ಕೆಲಸ ಆಗಿದೆ ಎಂದು ಹೇಳಿದರು.

ಜಾಲತಾಣ ಮತ್ತು ಮಾಧ್ಯಮದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಕದ್ರಿ ಪೊಲೀಸ್ ಠಾಣೆ ಮತ್ತು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇವೆ. ದೈವವೇ ನೋಡಿಕೊಳ್ಳಲಿ ಎಂದು ಇಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಮಾನನಷ್ಟ ಮೊಕದ್ದಮೆ ಹೂಡುವುದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದ ರವಿ ಪ್ರಸನ್ನ, ದೈವಾರಾಧನೆಯ ವಕ್ತಾರನೆಂದು ಹೇಳಿಕೊಳ್ಳುವ ತಮ್ಮಣ್ಣ ಶೆಟ್ಟಿ ತಮ್ಮ ದೈವದ ಬಗ್ಗೆ ನೋಡಿಕೊಳ್ಳಲಿ. ದೈವದ ಕಟ್ಟುಕಟ್ಟಳೆಗಳು ಆಯಾ ಭಾಗದಲ್ಲಿ ಬೇರೆ ಬೇರೆ ಇರುತ್ತವೆ. ಹರಕೆ ನೇಮವನ್ನು ಚೇಳಾಯರಿನಲ್ಲೂ ಕೊಡುವ ಪದ್ಧತಿ ಇದೆ. ಹರಕೆ ನೇಮವೇ ಇಲ್ಲ ಎನ್ನುವುದಕ್ಕೆ ಇವರು ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ. ಇಷ್ಟಕ್ಕೂ ಇಲ್ಲಿ ಗ್ರಾಮ ದೈವ ಜಾರಂದಾಯನಿಗೆ ಅರ್ಪಿಸಿದ ನೇಮ ಅಲ್ಲ. ವಾರಾಹಿ ಪಂಜುರ್ಲಿಗೆ ಎಣ್ಣೆಬೂಳ್ಯ ಕೊಟ್ಟು ಹರಕೆ ನೇಮ ಕೊಟ್ಟಿರುವುದು. ವಾರಾಹಿ ಪಂಜುರ್ಲಿ ಭಟ್ರ ಮನೆಯವರ ದೈವವಾಗಿದ್ದು, ಅದಕ್ಕೆ ನೇಮ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದರು.

ದೈವ ನರ್ತಕ ಮುಕೇಶ್‌ ಮಾತನಾಡಿ, “ನನಗೆ ಮಾಧ್ಯಮ, ಕೋರ್ಟ್‌, ಕಚೇರಿ ಎಲ್ಲವು ದೈವವೇ ಆಗಿದೆ. ನಮ್ಮ ಹಿರಿಯರು ಹೇಳಿದ ಉಪದೇಶದ ರೀತಿಯಲ್ಲಿ ದೈವ ನರ್ತನ ಮಾಡಿದ್ದೇವೆ. ಎಲ್ಲವನ್ನೂ ದೈವ ನೋಡಲಿದೆ’ ಎಂದರು. ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಅಕ್ಷಿತ್ ಸುವರ್ಣ, ಕದ್ರಿ ದೇವಸ್ಥಾನದ ಕೃಷ್ಣ ಭಟ್, ಚರಣ್ ಕುಮಾರ್ ಇದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

Next Post

ಅಮೃತ ವಿದ್ಯಾಲಯಂ ಮಂಗಳೂರು ಇದರ ವಾರ್ಷಿಕ ಕ್ರೀಡಾ ಕೂಟ – ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ: ಪ್ರದೀಪ್ ಡಿ’ಸೋಜ

Related Posts

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಕರಾವಳಿ

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
2
ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ
ಕರಾವಳಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
231
Next Post
ಅಮೃತ ವಿದ್ಯಾಲಯಂ ಮಂಗಳೂರು ಇದರ ವಾರ್ಷಿಕ ಕ್ರೀಡಾ ಕೂಟ – ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ: ಪ್ರದೀಪ್ ಡಿ’ಸೋಜ

ಅಮೃತ ವಿದ್ಯಾಲಯಂ ಮಂಗಳೂರು ಇದರ ವಾರ್ಷಿಕ ಕ್ರೀಡಾ ಕೂಟ - ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ: ಪ್ರದೀಪ್ ಡಿ'ಸೋಜ

Discussion about this post

Recent News

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
1
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d