• About us
  • Contact us
  • Disclaimer
Thursday, September 10, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

Coastal Times by Coastal Times
September 10, 2026
in ಕರಾವಳಿ
ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ
11
VIEWS
WhatsappTelegramShare on FacebookShare on Twitter

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ಕಲ್ಪಿಸುವಂತೆ ಆಗ್ರಹಿಸಿ ಸೆ. 9ರಂದು ಬೆಳಗ್ಗೆ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮುಖ್ಯವಾಗಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿ , ಕಿ.ಮೀ. ಗಟ್ಟಲೆ ಸುತ್ತಾಟವನ್ನು ತಡೆಗಟ್ಟುವ ಸಲುವಾಗಿ ಆಪೇಕ್ಷಿತ ಸ್ಥಳದಲ್ಲಿ ಸುರಕ್ಷತಾ ನೆಲೆಗಟ್ಟಿನಲ್ಲಿ ಯು ಟರ್ನ್ ಸೌಲಭ್ಯವನ್ನು ಒದಗಿಸಲೇಬೇಕು ಎಂದು ಅಗ್ರಹಿಸಿದ ಪ್ರತಿಭಟನಾ ಕಾರರರು ಜಿಲ್ಲಾಧಿಕಾರಿ ಮತ್ತು ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿ ದರು. ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅವರು, ಸೇಫ್ಟಿ ಎಂಜಿನಿಯರ್ ತಂಡದಿಂದ ಪರಿಶೀಲಿಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಸ್ಥಗಿತಗೊಳಿಸಿದರು.

ಪ್ರತಿಭಟನೆಯು ನೆಲ್ಯಾಡಿಯ ಗಾಂಧೀ ಮೈದಾನದಲ್ಲಿ ನಡೆಸಲು ಪೊಲೀಸ್ ಇಲಾಖಾನುಮತಿ ಪಡೆಯಲಾಗಿತ್ತಾ ದರೂ, ಪ್ರತಿಭಟನಾಕಾರರು ಹೆದ್ದಾರಿ ಬದಿಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಘೋಷಣೆಗಳ ಕಾವು ಹೆಚ್ಚಾಗುತ್ತಿದ್ದಂತೆಯೇ ಪ್ರತಿಭಟನೆಯಲ್ಲಿ ಇದ್ದ ಕೆಲವರು ಅಧಿಕಾರಿಗಳ ಆಗಮನದ ವರೆಗೆ ಹೆದ್ದಾರಿ ತಡೆ ಚಳುವಳಿ ನಡೆಸಲು ಸಂಕಲ್ಪಿಸಿ ಪ್ರತಿಭಟನಾ ಸಮೂಹವನ್ನು ಹೆದ್ದಾರಿಯತ್ತ ನುಗ್ಗಿಸಲು ಯತ್ನಿಸಿದರು. ಇದರ ಸುಳಿವು ಪಡೆದುಕೊಂಡ ಪೆÇಲೀಸರು ಸಂಘಟಕರಿಗೆ ಕಾನೂನು ಉಲ್ಲಂಘನೆಯ ಕೃತ್ಯಕ್ಕೆ ಭಾರೀ ಬೆಲೆ ತೆರಬೇಕಾದೀತೆಂದು ಎಚ್ಚರಿಕೆ ನೀಡಿದರಲ್ಲದೆ, ಪ್ರತಿಭಟಕಾರರು ಹೆದ್ದಾರಿಯನ್ನು ಪ್ರವೇಶಿಸದಂತೆ ತಡೆಯಾಗಿ ನಿಂತರು. ಈ ಮಧ್ಯೆ ಸಂಘಟಕರು ಧ್ವನಿವರ್ಧಕದಲ್ಲಿ ಸತತ ಮನವಿ ಮಾಡಿ ಪ್ರತಿಭಟನಾಕಾರರನ್ನು ಮೈದಾನದತ್ತ ಹೋಗಲು ವಿನಂತಿಸಿದರು. ಈ ಮೂಲಕ ಹೆದ್ದಾರಿ ತಡೆ ಭೀತಿ ನಿವಾರಣೆಯಾಯಿತು.

ಪ್ರತಿಭಟನೆಯಲ್ಲಿ ಧರ್ಮಗುರು ವರ್ಗೀಸ್ ಕೈಪನಡ್ಕ, ಸಾಜಿ ಮ್ಯಾಥ್ಯೂ , ಪಿ.ಪಿ. ವರ್ಗೀಸ್, ರವಿಚಂದ್ರ ಹೊಸವಕ್ಲು, ಇಸ್ಮಾಯೀಲ್ ನೆಲ್ಯಾಡಿ, ಸರ್ವೋತ್ತಮ ಗೌಡ, ರವಿ ಪ್ರಸಾದ್ ಗುರ್ಜಿ ಮನೆ , ಸತೀಶ್ ಕೆ.ಎಸ್., ಅಬ್ರಹಾಂ ವರ್ಗೀಸ್, ಮಹಮ್ಮದ್ ಇಕ್ಬಾಲ್, ಬಾಲಕೃಷ್ಣ ಬಾಣಜಾಲು, ಸಾಜಿ ವಿ. ಮೊದಲಾದವರು ಭಾಗವಹಿಸಿದ್ದರು. ಪ್ರತಿಭಟನೆಗೆ ನೆಲ್ಯಾಡಿ ವ್ಯಾಪ್ತಿಯ 51ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿ ಭಾಗವಹಿಸಿದ್ದವು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸುಳ್ಯ: ಸರ್ಕಾರಿ ಲೇಡೀಸ್ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರ ಉಡುಪು ಕಳ್ಳತನ ಮಾಡ್ತಿದ್ದ ವ್ಯಕ್ತಿ ಬಂಧನ

Related Posts

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ
ಕರಾವಳಿ

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

September 8, 2026
37
ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ
ಕರಾವಳಿ

ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

September 8, 2026
28

Discussion about this post

Recent News

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

September 10, 2026
11
ಸುಳ್ಯ: ಸರ್ಕಾರಿ ಲೇಡೀಸ್ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರ ಉಡುಪು ಕಳ್ಳತನ ಮಾಡ್ತಿದ್ದ ವ್ಯಕ್ತಿ ಬಂಧನ

ಸುಳ್ಯ: ಸರ್ಕಾರಿ ಲೇಡೀಸ್ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರ ಉಡುಪು ಕಳ್ಳತನ ಮಾಡ್ತಿದ್ದ ವ್ಯಕ್ತಿ ಬಂಧನ

September 9, 2026
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

September 10, 2026
ಸುಳ್ಯ: ಸರ್ಕಾರಿ ಲೇಡೀಸ್ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರ ಉಡುಪು ಕಳ್ಳತನ ಮಾಡ್ತಿದ್ದ ವ್ಯಕ್ತಿ ಬಂಧನ

ಸುಳ್ಯ: ಸರ್ಕಾರಿ ಲೇಡೀಸ್ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರ ಉಡುಪು ಕಳ್ಳತನ ಮಾಡ್ತಿದ್ದ ವ್ಯಕ್ತಿ ಬಂಧನ

September 9, 2026
ಮಂಗಳೂರು: 5 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆ ಅರೆಸ್ಟ್

ಮಂಗಳೂರು: 5 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆ ಅರೆಸ್ಟ್

September 9, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d