• About us
  • Contact us
  • Disclaimer
Friday, October 2, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಸುಲಿಗೆ ಪ್ರಕರಣ – ಕುಖ್ಯಾತ ಆರೋಪಿ ಆಕಾಶಭವನ ಶರಣ್ ಸಹಿತ ಐವರ ಬಂಧನ

Coastal Times by Coastal Times
January 14, 2022
in ಕ್ರೈಮ್ ನ್ಯೂಸ್
ಮಂಗಳೂರು: ಸುಲಿಗೆ ಪ್ರಕರಣ – ಕುಖ್ಯಾತ ಆರೋಪಿ ಆಕಾಶಭವನ ಶರಣ್ ಸಹಿತ ಐವರ  ಬಂಧನ
138
VIEWS
WhatsappTelegramShare on FacebookShare on Twitter

ಮಂಗಳೂರು: ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೋಹಿದಾಸ್ ಯಾನೆ ಶರಣ್ ಆಕಾಶಭವನ (38), ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ ವೆಲ್ (40), ಸೈನಾಲ್ ಡಿ ಸೋಜಾ (22), ಪ್ರಸಾದ್ (39), ಚೇತನ್ ಕೊಟ್ಟಾರಿ (35) ಎಂದು ಗುರುತಿಸಲಾಗಿದೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರೀಡ್ಜ್ ಬಳಿಯಲ್ಲಿ ಡಿಸೆಂಬರ್ 8ರಂದು ರಾತ್ರಿ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಮಯ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರಲಿದ್ದ ಮೊಬೈಲ್ ಫೋನ್, ನಗದು ರೂ. 3000 ಹಾಗೂ ದ್ವಿಚಕ್ರ ವಾಹನವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪೈಕಿ ಆಕಾಶಭವನ ಶರಣ್ ಎಂಬಾತನು ಈ ಪ್ರಕರಣದ ಪ್ರಮುಖ ಸೂತ್ರದಾರಿಯಾಗಿದ್ದು, ಈತನು ಇತ್ತೀಚೆಗೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದು, ಮತ್ತೆ ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಈ ಕೃತ್ಯಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ಆಕಾಶಭವನ ಶರಣ್ ತನ್ನ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದಾಖಲಾದ ಸುಲಿಗೆ ಪ್ರಕರಣದಲ್ಲಿ ಸುಲಿಗೆ ಮಾಡಿದ ಮೊಬೈಲ್ ಫೋನ್ ನಿಂದ ಆಕಾಶಭವನ ಶರಣ್ ಬೆದರಿಕೆ ಹಾಕಿರುವ ಬಗ್ಗೆ ಕೂಡ ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

” Bindu Beverages ” ತಂಪು ಪಾನೀಯ ಪೇಟೆಂಟ್‌ ದುರುಪಯೋಗ: 2 ಕಂಪನಿ ವಿರುದ್ಧ ಎಫ್‌ಐಆರ್‌! ಕಂಪನಿಗಳು ಸೀಝ್.

Next Post

ಸಹಕಾರ ಕ್ಷೇತ್ರ ಸರ್ವವ್ಯಾಪಿ – ಸರ್ವಸ್ಪರ್ಶಿ : ಸಾಣೂರು ನರಸಿಂಹ ಕಾಮತ್

Related Posts

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​
ಕ್ರೈಮ್ ನ್ಯೂಸ್

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
272
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು
ಕ್ರೈಮ್ ನ್ಯೂಸ್

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
28
Next Post
ಸಹಕಾರ ಕ್ಷೇತ್ರ ಸರ್ವವ್ಯಾಪಿ – ಸರ್ವಸ್ಪರ್ಶಿ : ಸಾಣೂರು ನರಸಿಂಹ ಕಾಮತ್

ಸಹಕಾರ ಕ್ಷೇತ್ರ ಸರ್ವವ್ಯಾಪಿ - ಸರ್ವಸ್ಪರ್ಶಿ : ಸಾಣೂರು ನರಸಿಂಹ ಕಾಮತ್

Discussion about this post

Recent News

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
272
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
28
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

October 1, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d