• About us
  • Contact us
  • Disclaimer
Monday, May 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಹಕಾರ ಕ್ಷೇತ್ರ ಸರ್ವವ್ಯಾಪಿ – ಸರ್ವಸ್ಪರ್ಶಿ : ಸಾಣೂರು ನರಸಿಂಹ ಕಾಮತ್

Coastal Times by Coastal Times
January 14, 2022
in ಕರಾವಳಿ
ಸಹಕಾರ ಕ್ಷೇತ್ರ ಸರ್ವವ್ಯಾಪಿ – ಸರ್ವಸ್ಪರ್ಶಿ : ಸಾಣೂರು ನರಸಿಂಹ ಕಾಮತ್
140
VIEWS
WhatsappTelegramShare on FacebookShare on Twitter

ಉಡುಪಿ ಜ 14 : ಸಹಕಾರ ಭಾರತಿ ಉಡುಪಿ ಜಿಲ್ಲಾ ಮಿಲ್ಕ್ ಪ್ರಕೋಷ್ಠದ ಪ್ರಮುಖರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರ ವರು ಅಜೆಕಾರುಅಜೆಕಾರು ರಾಮಮಂದಿರದಲ್ಲಿ ಜರುಗಿದ ಕಾರ್ಕಳ ತಾಲೂಕು ಸಹಕಾರ ಭಾರತಿ ಸಂಸ್ಥಾಪಕರ ದಿನಾಚರಣೆಯ ದಿಕ್ಸೂಚಿ ಭಾಷಣ ಮಾಡುತ್ತಾ,

ಸಹಕಾರ ತತ್ವ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಹಕಾರಿ ಕ್ಷೇತ್ರ ಸರ್ವವ್ಯಾಪಿ ಸರ್ವಸ್ಪರ್ಶಿ ಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭರವಸೆಯ ಆಶಾಕಿರಣವಾಗಿದೆ.
ಸಹಕಾರ ಭಾರತಿ ಸಂಘಟನೆ” ವ್ಯಕ್ತಿ* ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ “ದ ಜೊತೆಗೆ ಸಹಕಾರಿ ಕ್ಷೇತ್ರದ ಶುದ್ಧೀಕರಣ, ಅಭಿವೃದ್ಧಿ ಕರಣ ಮತ್ತು ಆಧುನೀಕರಣಕ್ಕೆ ಸಂಘಟನಾತ್ಮಕ ರಚನಾತ್ಮಕ ,ಆಂದೋಲನ ತ್ಮಕ ಮತ್ತು ಪ್ರಾತಿನಿಧ್ಯಾತ್ಮಕ ವಾಗಿ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಸಹಕಾರ ಭಾರತಿ ಸಂಸ್ಥಾಪಕರಾದ ಸ್ವರ್ಗೀಯ ಶ್ರೀ ಲಕ್ಷ್ಮಣ್ ರಾವ್ ಇನಾಮ್ದಾರ್ ರವರ ದೂರದರ್ಶಿತ್ವ ಪರಿಶ್ರಮ ಮತ್ತು ಮಾಣಿಕತೆಯ ಫಲಸ್ವರೂಪವಾಗಿ ಸಹಕಾರ ಭಾರತಿ ದೇಶದ 27 ರಾಜ್ಯಗಳ 650ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಘಟನಾತ್ಮಕವಾಗಿ ಬಲವಾಗಿ ಬೇರೂರಿದೆ, ಸಹಕಾರ ಭಾರತಿ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜೊತೆಗೆ ಸಮಾಲೋಚನೆ ನಡೆಸಿ ಸಹಕಾರ ಕ್ಷೇತ್ರದ ಕಾಯ್ದೆಗಳ ಸರಳೀಕರಣ, ವ್ಯವಸ್ಥೆಯಲ್ಲಿ ಆಧುನೀಕರಣ, ಆಡಳಿತದಲ್ಲಿ ಪಾರದರ್ಶಕತೆ ಗೆ ಹಲವಾರು ಸುಧಾರಣೆಗಳನ್ನು ತರುವಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ.

ಸಹಕಾರ ಭಾರತಿಯ ಕಾರ್ಯಕರ್ತರು ನಿರಂತರ ಅಧ್ಯಯನ, ವೃತ್ತಿಪರತೆ ಮತ್ತು ಸಕ್ರಿಯ ತೊಡಗಿಸಿಕೊಳ್ಳುವಿಕೆ ಯಿಂದ ಸಹಕಾರ ಕ್ಷೇತ್ರಕ್ಕೆ ಹೊಸ ಆಯಾಮವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕೆಂದು ತಿಳಿಸಿದರು.

ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಭವಾನಿ ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿಯವರು ಸಹಕಾರ ಭಾರತಿಯ ಸದಸ್ಯತಾ ಅಭಿಯಾನ, ಸಂಘಟನಾತ್ಮಕ ವಿಚಾರಗಳು ಮತ್ತು ತಳಮಟ್ಟದಲ್ಲಿ ಇನ್ನಷ್ಟು ಭದ್ರವಾಗಿ ಸಂಘಟನೆಯನ್ನು ಕಟ್ಟಿ ಬೆಳೆಸಬೇಕಾದ ಅವಶ್ಯಕತೆಯ ಬಗ್ಗೆ ಸವಿವರ ಮಾಹಿತಿ ನೀಡಿದರು.

ಕ್ಯಾಮ್ಕೋ ದ ನಿರ್ದೇಶಕರಾದ ಶ್ರೀ ದಯಾನಂದ ಹೆಗಡೆ, ಸಹಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಧುಸೂದನ್ ನಾಯಕ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಕಳ ಸಹಕಾರ ಭಾರತೀಯ ಅಧ್ಯಕ್ಷರಾದ ಶ್ರೀ ಹರೀಶ್ ಕಲ್ಯಾ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಸಮಾರಂಭದಲ್ಲಿ ಕಡ್ತಲ ಪರಿಸರದ ಹಿರಿಯ ಸಹಕಾರಿ ಗಳಾದ ಶ್ರೀರಾಮಚಂದ್ರ ನಾಯಕ್ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ ಬೋಳ ಸದಾಶಿವ ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಸಹಕಾರ ಭಾರತಿಯ ಉಡುಪಿ ಜಿಲ್ಲಾ ಮಹಿಳಾ ಪ್ರಮುಖ್ ಮತ್ತು ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀಮತಿ ವಿದ್ಯಾ ಪೈಯವರು ಕಾರ್ಯಕ್ರಮ ನಿರೂಪಿಸಿ, ಇನ್ನೋರ್ವ ನಿರ್ದೇಶಕರಾದ ಶ್ರೀ ಪ್ರಶಾಂತ ಶೆಟ್ಟಿ ಯವರು ಧನ್ಯವಾದ ಸಮರ್ಪಣೆ ಗೈದರು.

ಕಾರ್ಕಳ ತಾಲೂಕಿನ ಸಹಕಾರ ಭಾರತಿಯ ಪದಾಧಿಕಾರಿಗಳು, ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಸುಲಿಗೆ ಪ್ರಕರಣ – ಕುಖ್ಯಾತ ಆರೋಪಿ ಆಕಾಶಭವನ ಶರಣ್ ಸಹಿತ ಐವರ ಬಂಧನ

Next Post

ಶಬರಿಮಲೆಗೆ ಬಾಲಿವುಡ್ ನಟ ಅಜಯ್ ದೇವಗನ್ ಭೇಟಿ, ಹೆಲಿಕಾಪ್ಟರ್ ನಲ್ಲಿ ನಿಲಕ್ಕಲ್ ಗೆ ಆಗಮನ; ಇರುಮುಡಿಯೊಂದಿಗೆ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ

Related Posts

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ
ಕರಾವಳಿ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
62
ಮಂಗಳೂರಿನಲ್ಲಿ ಏಕಕಾಲಕ್ಕೆ ಮೇ 23ರಂದು ನಾಲ್ಕು ಅದ್ದೂರಿ ಸಭಾಭವನಗಳ ಲೋಕಾರ್ಪಣೆ: ಕೃಷ್ಣ ಪಾಲೆಮಾರ್
ಕರಾವಳಿ

ಮಂಗಳೂರಿನಲ್ಲಿ ಏಕಕಾಲಕ್ಕೆ ಮೇ 23ರಂದು ನಾಲ್ಕು ಅದ್ದೂರಿ ಸಭಾಭವನಗಳ ಲೋಕಾರ್ಪಣೆ: ಕೃಷ್ಣ ಪಾಲೆಮಾರ್

May 21, 2026
64
Next Post
ಶಬರಿಮಲೆಗೆ ಬಾಲಿವುಡ್ ನಟ ಅಜಯ್ ದೇವಗನ್ ಭೇಟಿ, ಹೆಲಿಕಾಪ್ಟರ್ ನಲ್ಲಿ ನಿಲಕ್ಕಲ್ ಗೆ ಆಗಮನ; ಇರುಮುಡಿಯೊಂದಿಗೆ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ

ಶಬರಿಮಲೆಗೆ ಬಾಲಿವುಡ್ ನಟ ಅಜಯ್ ದೇವಗನ್ ಭೇಟಿ, ಹೆಲಿಕಾಪ್ಟರ್ ನಲ್ಲಿ ನಿಲಕ್ಕಲ್ ಗೆ ಆಗಮನ; ಇರುಮುಡಿಯೊಂದಿಗೆ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ

Discussion about this post

Recent News

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
62
ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

May 23, 2026
43
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

May 23, 2026
ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ: ನಿರೀಕ್ಷಣಾ ಜಾಮೀನು ರದ್ದು ಕೋರಿ ಕೋರ್ಟ್​ಗೆ ಪೊಲೀಸರ ಮನವಿ

ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ: ನಿರೀಕ್ಷಣಾ ಜಾಮೀನು ರದ್ದು ಕೋರಿ ಕೋರ್ಟ್​ಗೆ ಪೊಲೀಸರ ಮನವಿ

May 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d