ಶಬರಿಮಲೆ: ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆದರು. ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನಕ್ಕೆ ಇದು ಅವರ ನಾಲ್ಕನೇ ಭೇಟಿಯಾಗಿದೆ.
ಬುಧವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ನಿಲಕ್ಕಲ್ ತಲಪಿದರು. ಬಳಿಕ ಅವರು ಮಧ್ಯಾಹ್ನ 11.30ಕ್ಕೆ 18 ಮೆಟ್ಟಿಲೇರಿ ಅಯ್ಯಪ್ಪನ ದರ್ಶನ ಪಡೆದರು.
ತಂತ್ರಿ ಹಾಗೂ ಮೇಲ್ಶಾಂತಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅವರು ಮಾಳಿಕಪ್ಪುರಂ ನಡೆ ಸಹಿತ ದರ್ಶನ ಮುಗಿಸಿ ನೈವೇದ್ಯ ಬಲಿವಾಡು ಸ್ವೀಕರಿಸಿ ಮಧ್ಯಾಹ್ನ ಮಲೆಯಿಂದಿಳಿದಿದ್ದಾರೆ.
ಜನಸಾಮನ್ಯ ಮಾಲಾಧಾರಿಗಳಂತೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಅನುಸರಿಸಬೇಕಾದ ಎಲ್ಲವನ್ನೂ ನಟ ಅಜಯ್ ದೇವಗನ್ ದೃಢವಾಗಿ ಪಾಲಿಸುತ್ತಿದ್ದರು ಎನ್ನಲಾಗಿದೆ. ಮಾಲಾಧಾರಿಯಾದ ಬಳಿಕವೂ ಕಟ್ಟುನಿಟ್ಟಾಗಿ ವಿಧಿ ವಿಧಾನಗಳನ್ನು ಅಜಯ್ ದೇವಗನ್ ಪಾಲಿಸಿದ್ದರಂತೆ.
ವೃತಾಚರಣೆಯ ಸಂದರ್ಭ ಮಾಲಾಧಾರಿಗಳು ಸಾತ್ವಿಕ ಆಹಾರವನ್ನಷ್ಟೇ ಸೇವಿಸುತ್ತಾರೆ. ಚಪ್ಪಲಿ ಧರಿಸುವುದಿಲ್ಲ. ಮದ್ಯಪಾನ ಮೊದಲಾದವುಗಳಿಂದ ದೂರವಿರುತ್ತಾರೆ. ಈ ನಿಯಮಗಳ ಸಹಿತ ವ್ರತಾಚರಣೆಯಲ್ಲಿ ಸಾಮಾನ್ಯ ಭಕ್ತರು ಪಾಲಿಸುವ ಎಲ್ಲಾ ನಿಯಮಗಳನ್ನು ಅಜಯ್ ಅನುಸರಿಸಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ
ಸಿಗಂ ಖ್ಯಾತಿಯ ನಟ 41 ದಿನಗಳ ಕಾಲ ನೆಲದ ಮೇಲೆ ಮಲಗಿ, ಕಪ್ಪು ಬಟ್ಟೆ ಧರಿಸಿ, ದಿನಕ್ಕೆರಡು ಬಾರಿ ಅಯ್ಯಪ್ಪನ ಪೂಜೆ, ಬೆಳ್ಳುಳ್ಳಿ, ಈರುಳ್ಳಿ ಇಲ್ಲದೆ ಕೇವಲ ಸಸ್ಯಾಹಾರ ಸೇವಿಸಿ, ಹೋದಲ್ಲೆಲ್ಲಾ ಬರಿಗಾಲಿನಲ್ಲಿ ನಡೆಯುವ ವೃತ ಪಾಲನೆ ಮಾಡಿದ್ದಾರೆ. ಸುಗಂಧ ದ್ರವ್ಯ, ಮದ್ಯಪಾನಗಳನ್ನು ವರ್ಜಿಸಿದ್ದರು. ನಟನ ಜೊತೆಯಲ್ಲಿ ಅವರ ಸೋದರ ಸಂಬಂಧಿಗಳಾದ ವಿಕ್ರಾಂತ್ ಮತ್ತು ಧರ್ಮೇಂದ್ರ ಅವರು ಅಜಯ್ ಅವರಂತೆಯೇ ಎಲ್ಲ ನಿಯಮಗಳನ್ನು ಅನುಸರಿಸಿದ್ದರು. ಅಜಯ್ ದೇವಗನ್ ಈಗ ಅಯ್ಯಪ್ಪ ದರ್ಶನ ಮುಗಿಸಿ ಮನೆಗೆ ಮರಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post