• About us
  • Contact us
  • Disclaimer
Thursday, June 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಂಟ್ವಾಳ: 20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್, ಕೇಸ್ ವರ್ಕರ್, ಬ್ರೋಕರ್ ಸಹಿತ ಮೂವರ ಬಂಧನ

Coastal Times by Coastal Times
August 14, 2025
in ಕ್ರೈಮ್ ನ್ಯೂಸ್
ಬಂಟ್ವಾಳ: 20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್, ಕೇಸ್ ವರ್ಕರ್, ಬ್ರೋಕರ್ ಸಹಿತ ಮೂವರ ಬಂಧನ
109
VIEWS
WhatsappTelegramShare on FacebookShare on Twitter

ಬಂಟ್ವಾಳ, ಆ. 13: ಲೋಕಾಯುಕ್ತ ಅಧಿಕಾರಿಗಳು ಆಗಸ್ಟ್ 13 ರ ಬುಧವಾರ ಮಧ್ಯಾಹ್ನ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿ, ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಉಪ ತಹಶೀಲ್ದಾರ್ ಸೇರಿದಂತೆ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಸಜಿಪ ಮುನ್ನೂರು ಗ್ರಾಮದ ಸರ್ವೇ ನಂಬರ್ 102/1ರಲ್ಲಿ ವ್ಯಕ್ತಿಯೊಬ್ಬರು ತನ್ನ ತಾಯಿ ಹೆಸರಲ್ಲಿ ಪೌತಿ ಖಾತೆ ಮಾಡಿಕೊಡಲು ಬಂಟ್ವಾಳ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದು ಸಹಾಯಕ ಆಯುಕ್ತರ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಇದರ ದಾಖಲಾತಿ ಫೈಲನ್ನು ಕಳೆದ ಏಪ್ರಿಲ್ ತಿಂಗಳಿನಿಂದ ಬಂಟ್ವಾಳ ತಹಶೀಲ್ದಾರ್ ಕಚೇರಿಯಲ್ಲೇ ಬಾಕಿ ಇಟ್ಟುಕೊಂಡಿದ್ದು ಈ ಬಗ್ಗೆ ದೂರುದಾರರು ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಮತ್ತು ಕೇಸ್ ವರ್ಕರ್ ಸಂತೋಷ್ ಎಂಬವರಲ್ಲಿ ವಿಚಾರಿಸಿದ್ದರು. ಪೌತಿ ಖಾತೆ ಮಾಡಿಕೊಡಲು 1,500 ರೂ. ನೀಡುವಂತೆ ಕೇಸ್ ವರ್ಕರ್ ಸಂತೋಷ್ ಹಾಗೂ ಪೌತಿ ಖಾತೆ ಮಾಡಿಕೊಡಲು ತಹಶೀಲ್ದಾರ್ ಅವರಿಗೆ 20,000 ರೂ. ನೀಡಬೇಕು ಎಂದು ಉಪ ತಹಶೀಲ್ದಾರ್ ರಾಜೇಶ್  ನಾಯ್ಕ್ ಕೇಳಿದ್ದರು ಎಂದು ದೂರುದಾರರು ಸಾಕ್ಷಿಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬುಧವಾರ ಮಧ್ಯಾಹ್ನ ಉಪ ತಹಶೀಲ್ದಾ‌ರ್ ರಾಜೇಶ್  ನಾಯ್ಕ್, ಬ್ರೋಕರ್ ಗಣೇಶ್ ವಾಮದಪದವು ಅವರ ಮೂಲಕ 20,000 ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್, ಕೇಸ್ ವರ್ಕರ್ ಸಂತೋಷ್, ಬ್ರೋಕರ್ ಗಣೇಶ್ ವಾಮದಪದವು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಂಟ್ವಾಳ ತಾಲೂಕು ತಹಶೀಲ್ದಾರ್ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮಂಗಳೂರು ವಿಭಾಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನಾ ಪಿ.ಕುಮಾರ್,  ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್, ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಧರ್ಮಸ್ಥಳ: ಮುಸುಕುಧಾರಿ ದೂರುದಾರ ತೋರಿಸಿದ 13ನೇ ಪಾಯಿಂಟ್ಸ್‌ನಲ್ಲಿ 18 ಅಡಿ ಅಗೆದ್ರೂ ಸಿಕ್ಕಿಲ್ಲ ಅಸ್ಥಿಪಂಜರ! GPR ಯಂತ್ರ ತಂದರೂ ಸಿಗದ ಕಳೇಬರ

Next Post

ಸುಪ್ರೀಂಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು ರದ್ದು

Related Posts

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!
ಕ್ರೈಮ್ ನ್ಯೂಸ್

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
60
ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ಕ್ರೈಮ್ ನ್ಯೂಸ್

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

June 24, 2026
305
Next Post

ಸುಪ್ರೀಂಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು ರದ್ದು

Discussion about this post

Recent News

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
60
ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

June 25, 2026
30
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

ಜೂ.28: ಎಂಸಿಸಿ ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು ಆಗಸ್ಟ್ 2 ರಂದು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

June 25, 2026
ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

June 24, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d