ನವದೆಹಲಿ: ನವೆಂಬರ್ 1ರ ಬಳಿಕ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಸೇವೆ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಸಂಸ್ಥೆ ಮಾಹಿತಿ ನೀಡಿದ್ದು, ಆಂಡ್ರಾಯ್ಡ್ 4.0.3 ಐಸ್ ಕ್ರೀಂ ಸ್ಯಾಂಡ್‌ವಿಚ್ ಓಎಸ್ ಮತ್ತು ಆ್ಯಪಲ್ ಐಓಎಸ್ 9 ಹಾಗೂ ಕಾಯ್‌ಓಎಸ್ 2.5.0 ಬಳಸುತ್ತಿರುವ ಹಳೆಯ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತವಾಗಲಿದೆ ಎಂದು ಹೇಳಿದೆ.
ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಝೆಡ್‌ಟಿಇ, ಹುವೈ, ಸೋನಿ, ಅಲ್ಕಾಟೆಲ್ ಮತ್ತು ಇತರ ಕಂಪನಿಗಳ ವಿವಿಧ ಹಳೆಯ ಮಾದರಿಗಳು ಇದ್ದು, ಅವುಗಳಲ್ಲಿ ವಾಟ್ಸ್ಆ್ಯಪ್ ಬೆಂಬಲ ಸ್ಥಗಿತಗೊಳ್ಳಲಿದೆ.
ಜೊತೆಗೆ ಐಓಎಸ್ 9 ಬಳಕೆ ಮಾಡುತ್ತಿರುವ ಐಫೋನ್‌ಗಳಲ್ಲಿ ಕೂಡ ವಾಟ್ಸ್ಆ್ಯಪ್ ಮುಂದೆ ಕೆಲಸ ಮಾಡುವುದಿಲ್ಲ. ನಿರ್ವಹಣೆ ಮತ್ತು ಹೆಚ್ಚುವರಿ ಆವೃತ್ತಿ ಅಪ್‌ಡೇಟ್, ಹೊಸ ಫೀಚರ್‌ಗಳಿಗೆ ಬೆಂಬಲ ನೀಡದಿರುವ ಫೋನ್‌ಗಳು ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಾಟ್ಸ್ಆ್ಯಪ್ ಹೊಸ ಫೀಚರ್ ಬಿಡುಗಡೆ ಮಾಡುತ್ತಿದೆ. ಜತೆಗೆ ಹಳೆಯ ಆವೃತ್ತಿಗೆ ಅಪ್‌ಡೇಟ್ ನಿಲ್ಲಿಸುತ್ತಿದೆ ಎಂದು ಹೇಳಲಾಗುತ್ತಿದೆ.
ವಾಟ್ಸಪ್ ಸೇವೆ ಸ್ಥಗಿತಗೊಳ್ಳುವ ಮೊಬೈಲ್ ಗಳ ಪಟ್ಟಿ ಇಲ್ಲಿದೆ
ವಾಟ್ಸಾಪ್ ಬಿಡುಗಡೆ ಮಾಡಿದ ಸೇವೆಸ್ಥಗಿತ ಗೊಳ್ಳುವ ಫೋನ್ ಗಳ ಪಟ್ಟಿಯಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಟೆಡ್‌ಟಿಇ, ಹುವಾವೇ, ಸೋನಿ, ಅಲ್ಕಾಟೆಲ್ ಮತ್ತು ಇತರವುಗಳ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಐಫೋನ್ಗಳು ಐಫೋನ್ ಎಸ್ಇ, ಐಫೋನ್ 6 ಎಸ್ ಮತ್ತು ಐಫೋನ್ 6 ಎಸ್ ಸಹ ಒಳಗೊಂಡಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಟ್ರೆಂಡ್ II, ಗ್ಯಾಲಕ್ಸಿ SII, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ ಎಕ್ಸ್‌ಕವರ್ 2, ಗ್ಯಾಲಕ್ಸಿ ಕೋರ್ ಮತ್ತು ಗ್ಯಾಲಕ್ಸಿ ಏಸ್ 2 ನವೆಂಬರ್ ವೇಳೆಗೆ ವಾಟ್ಸಪ್ ಸೇವೆ ಕಳೆದುಕೊಳ್ಳುತ್ತವೆ.
LG ಸಂಸ್ಥೆಯ ಆಪ್ಟಿಮಸ್ ಎಲ್ 4 II ಡ್ಯುಯಲ್, ಆಪ್ಟಿಮಸ್ ಎಫ್ 3, ಆಪ್ಟಿಮಸ್ ಎಲ್ 4 II, ಆಪ್ಟಿಮಸ್ ಎಲ್ 2 II, ಆಪ್ಟಿಮಸ್ ನೈಟ್ರೋ ಎಚ್ಡಿ ಮತ್ತು 4 ಎಕ್ಸ್ ಎಚ್ಡಿ, ಮತ್ತು ಆಪ್ಟಿಮಸ್ ಎಫ್ 3 ಕ್ಯೂ ವಾಟ್ಸಾಪ್ ಬೆಂಬಲವನ್ನು ಕಳೆದುಕೊಳ್ಳುತ್ತವೆ.
Discover more from Coastal Times Kannada
Subscribe to get the latest posts sent to your email.
Discussion about this post