• About us
  • Contact us
  • Disclaimer
Tuesday, March 10, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಇನ್ನೂ ತೆರೆಕಾಣದ ‘ಕೋಟಿಗೊಬ್ಬ-3’ ಸಿನಿಮಾ: ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು

Coastal Times by Coastal Times
October 14, 2021
in ಸಿನಿಮಾ
ಇನ್ನೂ ತೆರೆಕಾಣದ ‘ಕೋಟಿಗೊಬ್ಬ-3’ ಸಿನಿಮಾ: ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು
26
VIEWS
WhatsappTelegramShare on FacebookShare on Twitter

ಬೆಂಗಳೂರು: ನಟ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರ ಇಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಡೆಗಳಲ್ಲಿ ಮಾರ್ನಿಂಗ್‌ ಷೋ ಕ್ಯಾನ್ಸಲ್‌ ಆಗಿದ್ದರೆ,ಇನ್ನು ಹಲವೆಡೆ ತಾಂತ್ರಿಕ ಕಾರಣಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.

ದುನಿಯಾ ವಿಜಯ್‌ ನಟನೆಯ ಸಲಗ ಹಾಗೂ ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ-3 ಚಿತ್ರಗಳು ಒಂದೇ ದಿನ ಪರದೆಗೆ ಬರಲು ಸಿದ್ಧವಾಗಿದ್ದವು. ಆದರೆ ನಿರ್ಮಾಪಕ ಮತ್ತು ಹೂಡಿಕೆದಾರರ ಜಗಳದಿಂದಾಗಿ ಇದು ಸಾಧ್ಯವಾಗಿಲ್ಲ. ಈ ನಡುವೆ ಹೂಡಿಕೆದಾರರು ಪೂರ್ತಿ ಹಣವನ್ನು ಪಾವತಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸ್ವತಃ ಚಿತ್ರದ ನಾಯಕನಟ ಸುದೀಪ್‌ ವಿಷಾದದೊಂದಿಗೆ ಕ್ಷಮೆ ಯಾಚಿಸಿದ್ದಾರೆ. ಚಿತ್ರದ ನಿರ್ಮಾಪಕ ಮತ್ತು ಹೂಡಿಕೆದಾರರ ನಡುವಣ ಜಗಳ ಮುಂದುವರಿದಿದ್ದರಿಂದ ನಿಗದಿತ ದಿನಾಂಕದಂದು ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಿಲ್ಲ. ಶುಕ್ರವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ.

‘ರಾಜ್ಯದಾದ್ಯಂತ ಗುರುವಾರ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದು ‘ಡೆಕ್ಕನ್‌ ಹೆರಾಲ್ಡ್‌’ಗೆ ನಿಕಟವರ್ತಿಗಳು ತಿಳಿಸಿದ್ದಾರೆ.

ಮೊದಲ ದಿನ, ಮೊದಲ ಪ್ರದರ್ಶನ ನೋಡಬೇಕೆಂದು ಗುರುವಾರ ಬೆಳಗ್ಗೆ ಉತ್ಸುಕರಾಗಿ ಚಿತ್ರಮಂದಿರಗಳಿಗೆ ಬಂದಿದ್ದ ಅಭಿಮಾನಗಳ ದಂಡು ಭಾರಿ ನಿರಾಶೆಯಿಂದ ಹೊರನಡೆದರು. ಚಿತ್ರ ಪ್ರದರ್ಶನವಾಗದಿರಲು ಕಾರಣೀಕರ್ತರಾದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಚಿತ್ರಮಂದಿರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹೂಡಿಕೆದಾರರಿಗೆ ಪೂರ್ತಿ ಹಾಣ ಪಾವತಿಸಲು ಚಿತ್ರ ನಿರ್ಮಾಪಕ ಸೂರಪ್ಪ ಬಾಬು ಕೆಲವು ದಿನಗಳ ಸಮಯಾವಕಾಶ ನೀಡಲು ಮುಂದಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

‘ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವ. ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ ಎಂದು ಸುದೀಪ್‌ ತಿಳಿಸಿದ್ದಾರೆ.

ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ, ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೆ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗು ಯಾವ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಸುದೀಪ್‌ ಹೇಳಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 12 ವರ್ಷ ಕಠಿಣ ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್

Next Post

ಶಾರುಖ್​ ಪುತ್ರನಿಗೆ ಇಂದೂ ಸಿಗಲಿಲ್ಲ ಬಿಡುಗಡೆ ಭಾಗ್ಯ: ಅಕ್ಟೋಬರ್ 20ಕ್ಕೆ ಮುಂದಿನ ವಿಚಾರಣೆ

Related Posts

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ
ಸಿನಿಮಾ

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

February 22, 2026
9
ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!
ಸಿನಿಮಾ

ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!

February 3, 2026
39
Next Post
ಶಾರುಖ್​ ಪುತ್ರನಿಗೆ ಇಂದೂ ಸಿಗಲಿಲ್ಲ ಬಿಡುಗಡೆ ಭಾಗ್ಯ: ಅಕ್ಟೋಬರ್ 20ಕ್ಕೆ ಮುಂದಿನ ವಿಚಾರಣೆ

ಶಾರುಖ್​ ಪುತ್ರನಿಗೆ ಇಂದೂ ಸಿಗಲಿಲ್ಲ ಬಿಡುಗಡೆ ಭಾಗ್ಯ: ಅಕ್ಟೋಬರ್ 20ಕ್ಕೆ ಮುಂದಿನ ವಿಚಾರಣೆ

Discussion about this post

Recent News

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
21
ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

March 8, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

March 8, 2026
2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

March 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d