• About us
  • Contact us
  • Disclaimer
Monday, August 31, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೂಡುಬಿದಿರೆ: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿಗೆ ಬ್ಲ್ಯಾಕ್​ಮೇಲ್, ಮತ್ತೆ ರೇಪ್; ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು

Coastal Times by Coastal Times
July 15, 2025
in ಕ್ರೈಮ್ ನ್ಯೂಸ್
ಮೂಡುಬಿದಿರೆ: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿಗೆ ಬ್ಲ್ಯಾಕ್​ಮೇಲ್, ಮತ್ತೆ ರೇಪ್; ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು
125
VIEWS
WhatsappTelegramShare on FacebookShare on Twitter

ಮಂಗಳೂರು, ಜುಲೈ 15 : ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಹಳೆಯ ಪರಿಚಯದಲ್ಲಿ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯೋಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.

ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನೋಟ್ಸ್ ನೀಡುವ ನೆಪದಲ್ಲಿ ಕೃತ್ಯ : ಫಿಸಿಕ್ಸ್ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜತೆ ಹತ್ತಿರವಾಗಿದ್ದ. ಬಳಿಕ ಹಂತ ಹಂತವಾಗಿ ಚಾಟ್ ಮಾಡುವುದು, ನೋಟ್ಸ್ ನೀಡುವುದು ಮಾಡಿದ್ದ. ಹಾಗೆಯೇ ವಿದ್ಯಾರ್ಥಿನಿ ಜತೆ ಸಲುಗೆ ಬೆಳೆಸಿಕೊಂಡಿದ್ದ ಉಪನ್ಯಾಸಕ, ಆಕೆ ಬೆಂಗಳೂರಿಗೆ ಬಂದ ನಂತರವೂ ಚಾಟ್ ಮಾಡುವುದು, ನೋಟ್ಸ್ ನೀಡುವುದನ್ನು ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮ್​​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ, ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ.

ಬ್ಲ್ಯಾಕ್​ಮೇಲ್, ಮತ್ತೆ ರೇಪ್ : ಉಪನ್ಯಾಸಕ ನರೇಂದ್ರ ದುಷ್ಕೃತ್ಯ ಎಸಗಿದ ಬಳಿಕ ಬಯಾಲಜಿ ಉಪನ್ಯಾಸಕ ಸಂದೀಪ್ ಸಹ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆ ಸಂದರ್ಭದಲ್ಲಿ ಆಕೆ ವಿರೋಧ ವ್ಯಕ್ತಪಡಿಸಿದ್ದಳು. ಆಗ, ‘ನೀನು ನರೇಂದ್ರನ ಜೊತೆಗೆ ಇರುವ ಫೋಟೊ ಹಾಗೂ ವಿಡಿಯೋ ತನ್ನ ಬಳಿ ಇದೆ. ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುವೆ’ ಎಂದು ಬ್ಲ್ಯಾಕ್​ಮೇಲ್ ಮಾಡಿದ್ದ ಸಂದೀಪ್, ಅತ್ಯಾಚಾರ ಎಸಗಿದ್ದ.

ಸಂದೀಪ್ ಅತ್ಯಾಚಾರ ಕೃತ್ಯಕ್ಕೆ ಅನೂಪ್​ ಎಂಬಾತನ ರೂಮ್ ಬಳಸಿದ್ದ. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ನೀನು ನನ್ನ ರೂಮ್​ಗೆ ಬಂದಿರುವುದು ಕೊಠಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್​​ನಲ್ಲಿ ಸಿಸಿಟಿವಿ ಇದೆ ಎಂದು ಹೇಳಿ ತನಗೂ ಒಂದು ಅವಕಾಶ ಕೊಡುವಂತೆ ಬ್ಲಾಕ್ಮೇಲ್ ಮಾಡಿದ್ದ.

ಉಪನ್ಯಾಸಕರನ್ನು ಎದುರಿಸಲು ಸಾಧ್ಯವಾಗದೆ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಸಮಸ್ಯೆ ಹೆಚ್ಚಾಗಲು ಆರಂಭವಾದಾಗ ಕೃತ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡಿ ಪೊಲೀಸರಿಗೆ ದೂರು ಕೊಡಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಮಾರತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಉಪನ್ಯಾಸಕರು ಈ ಹಿಂದೆಯೂ ಕೆಲವು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಯತ್ತಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಎಂಆರ್‌ಪಿಎಲ್‌ನಲ್ಲಿ ಇಬ್ಬರು ಕಾರ್ಮಿಕರು ಸಾವು ಪ್ರಕರಣ ; ಉತ್ತರ ಪ್ರದೇಶಕ್ಕೆ ಶವ ಒಯ್ದ ಸಹೋದ್ಯೋಗಿಗಳಿಗೆ ದಿಗ್ಬಂಧನ ! ಮೃತನ ಪತ್ನಿಯಿಂದ ದೂರು ದಾಖಲು.

Next Post

ಭಾರತೀಯ ಅಂಚೆ ಇಲಾಖೆಯ ಸೂಪರ್​ ಟಾಪ್​ ಅಪ್​ ಹೆಲ್ತ್ ಇನ್ಶೂರೆನ್ಸ್ ಯೋಜನೆ: 756 ರೂ.ಗೆ 15 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ

Related Posts

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್​ ಇನ್ಸ್​ಪೆಕ್ಟರ್ ಸೇರಿ ನಾಲ್ವರು ಸಾವು
ಕ್ರೈಮ್ ನ್ಯೂಸ್

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್​ ಇನ್ಸ್​ಪೆಕ್ಟರ್ ಸೇರಿ ನಾಲ್ವರು ಸಾವು

August 28, 2026
50
ಬಂಟ್ವಾಳ: ತೋಡಕುಕ್ಕಿನಾರ್ ದೇವಸ್ಥಾನ ಕಳವು ಪ್ರಕರಣ; ಖುಲಾಸೆಗೊಂಡಿದ್ದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ಕ್ರೈಮ್ ನ್ಯೂಸ್

ಬಂಟ್ವಾಳ: ತೋಡಕುಕ್ಕಿನಾರ್ ದೇವಸ್ಥಾನ ಕಳವು ಪ್ರಕರಣ; ಖುಲಾಸೆಗೊಂಡಿದ್ದ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

August 28, 2026
22
Next Post
ಭಾರತೀಯ ಅಂಚೆ ಇಲಾಖೆಯ ಸೂಪರ್​ ಟಾಪ್​ ಅಪ್​ ಹೆಲ್ತ್ ಇನ್ಶೂರೆನ್ಸ್ ಯೋಜನೆ: 756 ರೂ.ಗೆ 15 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ

ಭಾರತೀಯ ಅಂಚೆ ಇಲಾಖೆಯ ಸೂಪರ್​ ಟಾಪ್​ ಅಪ್​ ಹೆಲ್ತ್ ಇನ್ಶೂರೆನ್ಸ್ ಯೋಜನೆ: 756 ರೂ.ಗೆ 15 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ

Discussion about this post

Recent News

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

August 30, 2026
25
ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

August 29, 2026
77
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

August 30, 2026
ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

August 29, 2026
ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ

ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ

August 29, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d