ವಿಟ್ಲ : ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ಗೆ ಹೋಗಿದ್ದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದಲ್ಲಿ ನಡೆದಿದೆ.
ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ. ಫಾರ್ಮ್ ಹೌಸ್ನ ಹೊಂಡದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್ಗೆ ಮೈಜಿ ಆಗಮಿಸಿದ್ದರು.
ಈ ವೇಳೆ ಫಾರ್ಮ್ ಹೌಸ್ನಲ್ಲಿ ನೀರಿನ ಹೊಂಡ ನೋಡಿದ ಮೈಜೀಗೆ ಈಜಲು ಮನಸಾಗಿದೆ. ತಕ್ಷಣ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಆಸೆಯಿಂದ ನೀರಿಗೆ ಇಳಿದಿದ್ದಾಳೆ. ದುರಾದೃಷ್ಟವಶಾತ್ ಅದೇ ನೀರಿನಲ್ಲೇ ಮುಳುಗಿ ದುರಂತ ಅಂತ್ಯಕಂಡಿದ್ದಾರೆ.
ಎರಡು ದಿನಗಳ ಹಿಂದೆ ಫಾರ್ಮ್ ಗೆ ಆಗಮಿಸಿದ ಈಕೆ ಕೆರೆಯ ಸಮೀಪಕ್ಕೆ ಒಂಟಿಯಾಗಿ ಹೋಗಿದ್ದಾರೆನ್ನಲಾಗಿದೆ. ಬಳಿಕ ಹಲವು ಸಮಯವಾದರೂ ಬಾರದ ಸಂದರ್ಭ ಕೆರೆಯಲ್ಲಿ ಹುಡುಕಾಡಿದ್ದಾರೆ. ನೀರಿನಡಿಗೆ ಹೋಗಿದ್ದ ಈಕೆಯ ದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್. ಇ. ಅವರ ತಂಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ಬಾರದ ಹಿನ್ನಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಾರಣಾಸಿ ಫಾರ್ಮ್ಸ್ ನ ನಿರ್ಮಾಣವಾದ ಈ ಕೆರೆಯಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post