ನಾಗ್ಪುರ: ವಿಶ್ವ ಭೂಪಟದಲ್ಲಿ ಭಾರತದ ಸ್ಥಾನ ಮತ್ತಷ್ಟು ಎತ್ತರಕ್ಕೆ ಏರುತ್ತಿದ್ದು, ಜಾಗತಿಕ ವಿದ್ಯಮಾನಗಳು ಭಾರತದ ಅಭಿಪ್ರಾಯ ಮತ್ತು ಸಮ್ಮಿತುಯ ಹೊರತಾಗಿ ಜರುಗಲಾರವು ಎಂಬುದು ಸಾಬೀತಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ವಿಜಯದಶಮಿ ಅಂಗವಾಗಿ ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಸುದೀರ್ಘ ಭಾಷಣ ಮಾಡಿದ ಮೋಹನ್ ಭಾಗವತ್, ಜಾಗತಿಕ ವಿದ್ಯಮಾನಗಳಲ್ಲಿ ಭಾರತದ ಪಾತ್ರ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತದ ಧ್ವನಿ ಗಟ್ಟಿಯಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕೊರೊನಾ ವಿರುದ್ಧದ ಭಾರತದ ಹೋರಾಟವನ್ನು ಇಡೀ ಜಗತ್ತು ಕೊಂಡಾಡಿದೆ. ನಮ್ಮ ಸಂಘಟಿತ ಪ್ರಯತ್ನ ಕೇವಲ ಭಾರತಕ್ಕೆ ಮಾತ್ರವಲ್ಲದೇ ವಿಶ್ವದ ಇತರ ರಾಷ್ಟ್ರಗಳಿಗೂ ಸಹಾಯ ಒದಗಿಸಲು ನೆರವು ನೀಡಿದೆ. ಕೊರೊನಾ ಕಾಲದಲ್ಲಿ ಭಾರತ ವಹಿಸಿದ ಜಾಗತಿಕ ಪಾತ್ರ ನಿಜಕ್ಕೂ ಶ್ಲಾಘನೀಯ ಎಂದು ಮೋಹನ್ ಭಾಗವತ್ ನುಡಿದರು.
ಇದೇ ವೇಳೆ ಜಾಗತಿಕ ರಾಜಕೀಯ ವಿದ್ಯಮಾನಗಳ ಕುರಿತೂ ಮಾತನಾಡಿದ ಮೋಹನ್ ಭಾಗವತ್, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಒಳ್ಳೆಯ ಸಂದೇಶವನ್ನಂತೂ ನೀಡುತ್ತಿಲ್ಲ ಎಂದು ಹೇಳಿದರು. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಜಗತ್ತಿಗೆ ಮಾರಕ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಭಾಗವತ್ ಹೇಳಿದರು.
ನಮಗೆ ತಾಲಿಬಾನಿಗಳ ಇತಿಹಾಸ ಗೊತ್ತಿದೆ. ತಾಲಿಬಾನ್ ಸಂಘಟನೆಗೆ ಪಾಕಿಸ್ತಾನ ಮತ್ತು ಚೀನಾದ ಪ್ರತ್ಯಕ್ಷ ಮತ್ತು ಪರೋಕ್ಷ ಸಹಾಯದ ಅರಿವು ಕೂಡ ಭಾರತಕ್ಕಿದೆ. ಭವಿಷ್ಯದಲ್ಲಿ ಒಂದು ವೇಳೆ ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ. ಪಾಕಿಸ್ತಾನದ ಕುರಿತು ಜಾಗತಿಕ ಅಭಿಪ್ರಾಯ ಬದಲಾಗುವುದಿಲ್ಲ ಎಂದು ಭಾಗವತ್ ನುಡಿದರು.
ಭಾರತದ ಕುರಿತು ಚೀನಾದ ನೀತಿ ಎಂದಿಗೂ ಬದಲಾಗುವುದಿಲ್ಲ. ಹೀಗಾಗಿ ನಾವು ನಮ್ಮ ಗಡಿಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಅವಶ್ಯಕತೆಯಿದೆ. ಪ್ರಸ್ತುತ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆ ಪ್ರತಿ ಭಾರತೀಯನಿಗೂ ತೃಪ್ತಿ ತಂದಿದೆ ಎಂದು ಭಾಗವತ್ ಹೇಳಿದರು.
#WATCH | "…There's no control over what's shown on OTT platforms, post Corona even children have phones. Use of narcotics is rising…how to stop it? Money from such businesses is used for anti-national activities…All of this should be controlled,"says RSS chief Mohan Bhagwat pic.twitter.com/PLELLPExdL
— ANI (@ANI) October 15, 2021
Discover more from Coastal Times Kannada
Subscribe to get the latest posts sent to your email.
Discussion about this post