ಮಂಗಳೂರು, ಜ.16: ನಗರ ಹೊರವಲಯದ ಶಕ್ತಿನಗರದ ಕಕ್ಕೆಬೆಟ್ಟು ಕಾರ್ಮಿಕ ಕಾಲನಿ ಎಂಬಲ್ಲಿ ಪಿಕ್‌ಅಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಕೊರಗಪ್ಪ (85) ಎಂಬವರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.


ಕೊರಗಪ್ಪ ತನ್ನ ಮನೆಯ ಅಂಗಳದಲ್ಲಿ ನಿಂತಿದ್ದ ವೇಳೆ ಪಿಕ್ಅಪ್ ವಾಹನದಲ್ಲಿ ಹೆಂಚುಗಳನ್ನು ತುಂಬಿಕೊಂಡು ಬಂದ ಚಾಲಕ ಮೋಹನ್ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿ ವೇಳೆ ಕೊರಗಪ್ಪರಿಗೆ ಢಿಕ್ಕಿ ಹೊಡೆದ ಎನ್ನಲಾಗಿದೆ. ಇದರಿಂದ ಕೊರಗಪ್ಪರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಈ ಬಗ್ಗೆ ಕಂಕನಾಡಿ ನಗರ ಠಾಣೆಯ ಪೊಲೀಸರು ಪಿಕಪ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.